ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ತೇಜೋವಧೆ ಆಂದೋಲನ ಹಿಂದೆ ಅನಂತ್? (Anant Kumar | Chief Minister | Karnataka)
WD
WD
ಲೋಕಾಯುಕ್ತ ವರದಿಯ ಫಲವಾಗಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲ್ಪಟ್ಟು ಈಗ ಹಂಗಾಮಿ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರ ಈ ಸ್ಥಿತಿಗೆ ಮತ್ತು ಮಾಧ್ಯಮಗಳಲ್ಲಿ ಯಡಿಯೂರಪ್ಪ ಅವರ ತೇಜೋವಧೆ ಮಾಡುವಂತಹಾ ಆಂದೋಲನದಲ್ಲಿ ಅವರ ರಾಜಕೀಯ ವಿರೋಧಿ ಎಂದೇ ಗುರುತಿಸಲ್ಪಟ್ಟಿರುವ ಸಂಸದ ಅನಂತ್ ಕುಮಾರ್ ಕೈವಾಡವಿದೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ದೊರೆಯುವ ಅಂಶಗಳು ಬೆಳಕಿಗೆ ಬರತೊಡಗಿವೆ.

ಇನ್ನೊಂದೆಡೆ, ನಮ್ಮ ಕಡೆಯವರನ್ನೇ ಮುಖ್ಯಮಂತ್ರಿಯಾಗಿಸಬೇಕು ಎಂಬ ಬಗ್ಗೆ ಅನಂತ್ ಬಣ ಮತ್ತು ಯಡಿಯೂರಪ್ಪ ಬಣದ ಹೋರಾಟ ನಡೆಯುತ್ತಿದ್ದರೆ, ಯಡಿಯೂರಪ್ಪ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ವಿ.ಎಸ್.ಆಚಾರ್ಯ ಅವರು ತಮ್ಮ ನಾಯಕನ ಪದಚ್ಯುತಿಯ ಹಿಂದಿನ 'ಮಾಸ್ಟರ್ ಮೈಂಡ್' ಅನಂತ್ ಕುಮಾರ್ ಎಂದು ನೇರವಾಗಿ ಆರೋಪ ಮಾಡಿದ್ದಾರೆ.

"ಭಾನುವಾರ ನಡೆದ ಸಭೆಯಲ್ಲಿ 77 ಶಾಸಕರು ಡಿ.ವಿ.ಸದಾನಂದ ಗೌಡರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವುದಕ್ಕೆ ಒಪ್ಪಿಗೆ ಸೂಚಿಸಿದ್ದರು" ಎಂದಿರುವ ಆಚಾರ್ಯ, "ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಎಲ್ಲ ಮಾಡ್ತಾ ಇರೋದು ಅನಂತ್ ಕುಮಾರ್. ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳು ಯಡಿಯೂರಪ್ಪ ವಿರುದ್ಧ ಮಾಡುತ್ತಿರುವ ತೇಜೋವಧೆ ಆಂದೋಲನದ ಹಿಂದೆ ಅನಂತ್ ಅವರೇ ಇದ್ದಾರೆ. ಅವರ ನಿರಂತರ ಮೂಗುತೂರಿಸುವಿಕೆ ಮತ್ತು ಪ್ರಶ್ನಾರ್ಹ ಚಟುವಟಿಕೆಗಳಿಲ್ಲದಿದ್ದರೆ, ಲೋಕಾಯುಕ್ತ ವರದಿಯು ಈ ಪರಿಸ್ಥಿತಿಯನ್ನು ತಂದೊಡ್ಡುತ್ತಿರಲಿಲ್ಲ" ಎಂದು ಆರೋಪಿಸಿರುವುದಾಗಿ ತೆಹಲ್ಕಾ ವರದಿ ಮಾಡಿದೆ.

ಈ ಆರೋಪವು ಕರ್ನಾಟಕ ರಾಜಕೀಯದ ಕುರಿತಾಗಿ ಬಿಜೆಪಿ ಕೇಂದ್ರೀಯ ನಾಯಕತ್ವದಲ್ಲೇ ಒಮ್ಮತಾಭಿಪ್ರಾಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಅನಂತ್ ಕುಮಾರ್ ಬಣವು ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದ ಮೇಲೆ ಕೂರಿಸಲು ಶತ ಪ್ರಯತ್ನ ಮಾಡುತ್ತಿರುವುದು ಸರ್ವವಿದಿತ. ಹಿಂದೆಯೂ ಯಡಿಯೂರಪ್ಪ ಅವರನ್ನು ಉರುಳಿಸಲು ಗಣಿಧಣಿಗಳಾದ ರೆಡ್ಡಿ ಸಹೋದರರು ಪ್ರಯತ್ನ ಮಾಡಿದ್ದಾಗಲೂ ಅನಂತ್ ಕೈವಾಡವೇ ಕೇಳಿಬರುತ್ತಿತ್ತು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅನಂತ್ ಕುಮಾರ್, ಮುಖ್ಯಮಂತ್ರಿ, ಕರ್ನಾಟಕ, ಲೋಕಾಯುಕ್ತ, ಗಣಿ ವರದಿ, ಯಡಿಯೂರಪ್ಪ ಉತ್ತರಾಧಿಕಾರಿ, ಸದಾನಂದ ಗೌಡ, ಜಗದೀಶ್ ಶೆಟ್ಟರ್