ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ರವಿಶಂಕರ್‌ಶ್ರೀಗೆ ರಾಜಕೀಯ ಬೇಡ, ಆಧ್ಯಾತ್ಮಿಕ ಕೆಲಸ ಮಾಡ್ಲಿ' (Sadananda Gowda | Yeddyurappa | Shree Ravishankar | New CM | Jagadish Shettar | BJP)
'ರವಿಶಂಕರ್‌ಶ್ರೀಗೆ ರಾಜಕೀಯ ಬೇಡ, ಆಧ್ಯಾತ್ಮಿಕ ಕೆಲಸ ಮಾಡ್ಲಿ'
ಬೆಂಗಳೂರು, ಶುಕ್ರವಾರ, 5 ಆಗಸ್ಟ್ 2011( 12:29 IST )
PR
ಎಲ್ಲಾ ಕಸರತ್ತು, ಅಪಸ್ವರಗಳ ನಡುವೆಯೂ ಬಿ.ಎಸ್.ಯಡಿಯೂರಪ್ಪ ಬಣದ ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಜಗದೀಶ್ ಶೆಟ್ಟರ್ ಬಣದ ಮುನಿಸು ಮಾತ್ರ ಮುಂದುವರಿದಿದ್ದು, ಏತನ್ಮಧ್ಯೆ ಆರ್ಟ್ ಆಫ್ ಲಿವಿಂಗ್‌ನ ಶ್ರೀರವಿಶಂಕರ್ ಗುರೂಜಿ ಸಂಧಾನಕ್ಕಾಗಿ ಮಧ್ಯಪ್ರವೇಶ ಮಾಡಿದ್ದಾರೆ.
ಮುಖ್ಯಮಂತ್ರಿ ಗದ್ದುಗೆಗಾಗಿ ಪಟ್ಟು ಹಿಡಿದು ಹಿನ್ನಡೆ ಅನುಭವಿಸಿರುವ ಶೆಟ್ಟರ್ ಬಣ ಸಚಿವ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನ ತಮ್ಮ ಬಣಕ್ಕೆ ನೀಡಬೇಕೆಂದು ಹಠ ಹಿಡಿದಿರುವ ನಿಟ್ಟಿನಲ್ಲಿ ರವಿಶಂಕರ್ ಗುರೂಜಿ ಶಾಸಕರ ಮನವೊಲಿಕೆಗೆ ಮುಂದಾಗಿದ್ದಾರೆ.
ನೂತನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ಸಹಕಾರ ನೀಡುವ ಮೂಲಕ ಬಿ.ಎಸ್.ಯಡಿಯೂರಪ್ಪನವರ ಕೈಬಲಪಡಿಸುವಂತೆ ರವಿಶಂಕರ್ ಗುರೂಜಿ ಮನವಿ ಮಾಡಿಕೊಂಡಿದ್ದಾರೆ. ಆದರೆ ರವಿಶಂಕರ್ ಗುರೂಜಿ ರಾಜಕೀಯ ಪ್ರವೇಶಕ್ಕೆ ಭಿನ್ನ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿಶಂಕರ್ ಗುರೂಜಿ ರಾಜಕೀಯ ಬಿಟ್ಟು ಆಧ್ಯಾತ್ಮಿಕ ಕೆಲಸ ಮಾಡಲಿ ಎಂದು ತಿರುಗೇಟು ನೀಡಿರುವ ಶಾಸಕರು ರಾಜಕೀಯ ಬಿಕ್ಕಟ್ಟು ಶಮನಕ್ಕೆ ಮಧ್ಯಪ್ರವೇಶಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಸವರಾಜ್ ಮನೆಗೆ ಮುತ್ತಿಗೆ: ಲಿಂಗಾಯಿತ ಸಮುದಾಯದ ಜಗದೀಶ್ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಗಾದಿ ತಪ್ಪಿಸಲು ಪರೋಕ್ಷವಾಗಿ ಸಹಕರಿಸಿರುವುದಾಗಿ ಕಿಡಿಕಾರಿರುವ ಶೆಟ್ಟರ್ ಬೆಂಬಲಿಗರು ಶುಕ್ರವಾರ ಹುಬ್ಬಳ್ಳಿಯಲ್ಲಿರುವ ಬಸವರಾಜ್ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಿದ್ದಾರೆ.