ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಕ್ಕಟ್ಟು ಮುಂದುವರಿದ್ರೆ ಸರ್ಕಾರ ಪತನ ಖಚಿತ: ಕಾಂಗ್ರೆಸ್ (KPCC | Parameshwar | BJP | Hariprasad | Congress | Sadananda Gowda | Yeddyurppa)
PR
ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಭಿನ್ನಮತ ಹೀಗೆ ಮುಂದುವರಿದರೆ ಬಿಜೆಪಿ ಸರ್ಕಾರದ ಪತನ ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭವಿಷ್ಯ ನುಡಿದಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭಾನುವಾರ ರಾಜಾಜಿನಗರದ ಪಾಲಿಕೆ ಸಮುದಾಯ ಭವನದಿಂದ ಆರಂಭವಾದ ಕಾಂಗ್ರೆಸ್ ನಡಿಗೆ, ಜನರ ಬಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನೂತನ ಮುಖ್ಯಮಂತ್ರಿ ಆಯ್ಕೆಯಾಗಿ ನಾಲ್ಕು ದಿನ ಕಳೆದರೂ ಸಂಪುಟ ರಚನೆಯಾಗಿಲ್ಲ. ಆ ಸಂಬಂಧ ಪಕ್ಷದೊಳಗಿನ ಭಿನ್ನಮತ ದಿನೇ ದಿನೇ ಬಿಗಡಾಯಿಸುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜ್ಯಪಾಲರಿಗೆ ದೂರು ನೀಡಲಾಗುವುದು. ಅಲ್ಲದೇ, ಭಿನ್ನಮತ ನಿವಾರಣೆಯಾಗದಿದ್ದಲ್ಲಿ ಸರ್ಕಾರ ಬಿದ್ದು ಹೋಗಲಿದೆ ಎಂದರು.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮುಖ್ಯಮಂತ್ರಿ ಬದಲಾದರೂ ರಾಜ್ಯದಲ್ಲಿ ಹೊಸ ಸರ್ಕಾರ ಕಾಣಿಸುತ್ತಿಲ್ಲ ಎಂದು ಟೀಕಿಸಿದರು. ನೂತನ ಮುಖ್ಯಮಂತ್ರಿ ಸದಾನಂದ ಗೌಡರು ಉಭಯ ಬಣಗಳ ಪೋಸ್ಟ್ ಮ್ಯಾನ್ ತರಹ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಕೊಡುವ ಬದಲು ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವೆ ಪತ್ರ ವಿನಿಮಯ ನಡೆಸುವುದರಲ್ಲಿ ಅವರ ಸಮಯ ವ್ಯಯವಾಗುತ್ತಿದೆ ಎಂದು ಟೀಕಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕೆಪಿಸಿಸಿ, ಪರಮೇಶ್ವರ್, ಬಿಜೆಪಿ, ಹರಿಪ್ರಸಾದ್, ಕಾಂಗ್ರೆಸ್, ಸದಾನಂದ ಗೌಡ, ಯಡಿಯೂರಪ್ಪ