ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೊಂದು ಕಂಟಕ: ಯಡಿಯೂರಪ್ಪ ವಿರುದ್ಧ ಎಫ್ಐಆರ್ (BS Yeddyurappa | Lokayukta court | Lokayukta | FIR | JDS | Bhadra upper project)
PR
ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆ ಅವ್ಯವಹಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬುಧವಾರ ಎಫ್ಐಆರ್ ದಾಖಲಿಸುವ ಮೂಲಕ ಮಾಜಿ ಸಿಎಂ ಮತ್ತೊಂದು ಕಂಟಕ ಎದುರಿಸುವಂತಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭದ್ರಾ ಮೇಲ್ದಂಡೆ ಕಾಮಗಾರಿ ಅವ್ಯವಹಾರ ಕುರಿತಂತೆ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಲೋಕಾಯುಕ್ತ ಪ್ರಕರಣಗಳಿಗಾಗಿನ ವಿಶೇಷ ಕೋರ್ಟ್ ಆಗಸ್ಟ್ 8ರಂದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ನಗರ ಲೋಕಾಯುಕ್ತ ಎಸ್ಪಿಗೆ ಸೂಚಿಸಿತ್ತು.

ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ 13(1)ರ ಅಡಿಯಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಮೂಲಗಳು ತಿಳಿಸಿವೆ. ಎಫ್ಐಆರ್ ಕ್ರೈಮ್ ನಂಬರ್ 33/11 ಆಗಿದೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಾಗಿ ಟೆಂಡರ್ ಕರೆದಿತ್ತು. ಆದರೆ ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶದಲ್ಲಿ ಕಪ್ಪು ಪಟ್ಟಿಗೆ ಸೇರಿದ್ದ ಆರೆನ್ನೆಸ್ ಇನ್ಪ್ರಾಸ್ಟ್ರಕ್ಚರ್ ಕಂಪನಿ ಹಾಗೂ ಕಿರ್ಲೋಸ್ಕರ್ ಬಿಡ್ ಸಲ್ಲಿಸಿತ್ತು.

ಏತನ್ಮಧ್ಯೆ 1033 ಕೋಟಿ ರೂಪಾಯಿಗೆ ಆರೆನ್ನೆಸ್ ಕಂಪನಿಗೆ ಗುತ್ತಿಗೆ ಮಂಜೂರು ಮಾಡಿ, ಕಿರ್ಲೋಸ್ಕರ್ ಬಿಡ್ ಅನ್ನು ಕೈಬಿಟ್ಟಿತ್ತು. ಆರೆನ್ನೆಸ್ ಕಂಪನಿಗೆ ಅನುಮತಿ ನೀಡುವ ನಿಟ್ಟಿನಲ್ಲಿಯೇ 13 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆಯಲಾಗಿತ್ತು ಎಂದು ದತ್ತ ಅರ್ಜಿಯಲ್ಲಿ ದೂರಿದ್ದರು.

ಈ ಹಣವನ್ನು ಬಿ.ಎಸ್.ಯಡಿಯೂರಪ್ಪ ಅವರ ಮಕ್ಕಳಿಗೆ ಸೇರಿದ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಹಾಗೂ ಸಹ್ಯಾದ್ರಿ ಹೆಲ್ತ್ ಸೆಂಟರ್ ಗೆ ಹಣ ಸಂದಾಯ ಮಾಡಿತ್ತು. ಈ ಪ್ರಕರಣ ಇದೀಗ ಯಡಿಯೂರಪ್ಪಗೆ ಮತ್ತೊಂದು ಕಂಟಕವಾಗಿ ಪರಿಣಮಿಸಿದೆ. ಈಗಾಗಲೇ ಅಕ್ರಮ ಗಣಿ ವರದಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಆರೋಪಿಗಳು ದಾಖಲೆ ನಾಶ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅಧೀನ ನ್ಯಾಯಾಲಯಗಳು ಪ್ರತಿಷ್ಠಿತ ರಾಜಕೀಯ ಮುಖಂಡರ ಜಾಮೀನು ನಿರಾಕರಿಸುವ ಹಕ್ಕು ನ್ಯಾಯಾಧೀಶರಿಗೆ ಇದೆ ಎಂದು ಕನಿಮೋಳಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 3ರೊಳಗೆ ಲೋಕಾಯುಕ್ತ ಪೊಲೀಸರು ಸಲ್ಲಿಸುವ ವರದಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಪ್ರಕರಣ ಯಡಿಯೂರಪ್ಪ ರಾಜಕೀಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಎಸ್ಯಡಿಯೂರಪ್ಪ, ಲೋಕಾಯುಕ್ತ ಕೋರ್ಟ್, ಲೋಕಾಯುಕ್ತ, ಎಫ್ಐಆರ್, ಜೆಡಿಎಸ್, ಭದ್ರಾ ಮೇಲ್ದಂಡೆ ಅವ್ಯವಹಾರ