ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಡಿವಿಎಸ್ ರಬ್ಬರ್ ಸ್ಟ್ಯಾಂಪ್, ಬಿಎಸ್‌ವೈ ಆಡಳಿತ: ಸಿದ್ದರಾಮಯ್ಯ (Sadananda Gowda | BJP | Yeddyurappa | Siddaramaiah | Congress | KPCC | Lokayukta)
ಮುಖ್ಯಮಂತ್ರಿ ಸದಾನಂದ ಗೌಡರ ನೇತೃತ್ವದ ಸಚಿವ ಸಂಪುಟ ಹಳೆ ಬಾಟಲ್, ಹಳೆ ಮದ್ಯ, ಆದರೆ ಹೊಸ ಕ್ಯಾಪ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಖ್ಯಮಂತ್ರಿ ಸದಾನಂದ ಗೌಡ ರಬ್ಬರ್ ಸ್ಟ್ಯಾಂಪ್, ಸರ್ಕಾರದ ಆಡಳಿತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹಿಡಿತದಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ಇದು ನಿಜಕ್ಕೂ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಸದಾನಂದ ಗೌಡರು ಯಡಿಯೂರಪ್ಪ ಹೇಳಿದಂತೆ ಕೇಳುತ್ತಾರೆ. ಅದನ್ನು ಬಿಟ್ಟು ಬೇರೆ ದಾರಿ ಅವರಿಗಿಲ್ಲ ಎಂದರು.

ಬಿಜೆಪಿ ಪಕ್ಷದಲ್ಲಿ ಆಂತರಿಕ ಭಿನ್ನಮತವೇ ನಿಂತಿಲ್ಲ, ಆದರೆ ಬಹಿರಂಗವಾಗಿ ತಾವೆಲ್ಲ ಒಗ್ಗಟ್ಟಾಗಿದ್ದೇವೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿ ಎಂಬ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

ಅಲ್ಲದೇ ಬಳ್ಳಾರಿಯಲ್ಲಿ ಇಂದು ನಡೆದ ವರಮಹಾಲಕ್ಷ್ಮಿ ಪೂಜೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಭಾಗವಹಿಸುವ ಮೂಲಕ ಅವರು ರೆಡ್ಡಿ ಸಹೋದರರ ಋಣ ತೀರಿಸಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಅವ್ಯವಹಾರದಲ್ಲಿ ನಿತಿನ್ ಗಡ್ಕರಿಗೂ ಪಾಲಿದೆ ಎಂದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸದಾನಂದ ಗೌಡ, ಬಿಜೆಪಿ, ಯಡಿಯೂರಪ್ಪ, ಸಿದ್ದರಾಮಯ್ಯ, ಕಾಂಗ್ರೆಸ್, ಕೆಪಿಸಿಸಿ, ಲೋಕಾಯುಕ್ತ ವರದಿ