ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಣ್ಣಾಗೆ ಬೆಂಬಲ: ಬೆಂಗಳೂರಿನಿಂದ ದೆಹಲಿಗೆ ಪಾದಯಾತ್ರೆ (Anna hazare | Santhosh hegde | Lokpal bill | Thihar jail | Banagalore)
ಪ್ರಬಲ ಜನಲೋಕಪಾಲ್ ಮಸೂದೆಗಾಗಿ ಆಗ್ರಹಿಸಿ ನಿರಶನ ನಡೆಸಲು ಪೊಲೀಸರು ಒಡ್ಡಿರುವ ಷರತ್ತನ್ನು ಸಡಿಲಿಸುವವರೆಗೆ ತಿಹಾರ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಅಣ್ಣಾ ಹಜಾರೆ ಘೋಷಿಸಿದ್ದು, ಮತ್ತೊಂದೆಡೆ ಅಣ್ಣಾ ಹೋರಾಟಕ್ಕೆ ಜಯ ದೊರೆಯುವರೆಗೆ ತಮ್ಮ ಬೆಂಬಲ ಇರುವುದಾಗಿ ಹೇಳಿರುವ ಇಂಡಿಯಾ ಎಗೆನೆಸ್ಟ್ ಕರಪ್ಶನ್ ಸಂಘಟನೆಯ ಸುಮಾರು 40 ಅಧಿಕ ಕಾರ್ಯಕರ್ತರು ಬೆಂಗಳೂರಿನಿಂದ ನವದೆಹಲಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಅಣ್ಣಾ ಹಜಾರೆ ಚಳವಳಿಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬುಧವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಸಾವಿರಾರು ನಾಗರಿಕರು, ವಿದ್ಯಾರ್ಥಿಗಳು ಪಾಲ್ಗೊಂಡು ಬೆಂಬಲ ನೀಡಿದ್ದರು. ಏತನ್ಮಧ್ಯೆ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆ ಹೊರಟ ತಂಡಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಚಾಲನೆ ನೀಡಿ ಶುಭ ಹಾರೈಸಿದರು.

ಭ್ರಷ್ಟಾಚಾರದ ವಿರುದ್ಧ ಯುವಕರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಹಾಗಾಗಿ ಅವರಿಗೆ ಶುಭ ಹಾರೈಸಬೇಕಾದದ್ದು ನಮ್ಮ ಕರ್ತವ್ಯ ಎಂದ ಹೆಗ್ಡೆ, ಇಂಡಿಯಾ ಎಗೆನೆಸ್ಟ್ ಕರಪ್ಶನ್ ಸಂಘಟನೆಯ ಸದಸ್ಯರು ದಿನಂಪ್ರತಿ 30 ಕಿ.ಮೀ.ನಡೆಯುವ ಮೂಲಕ ಪಾದಯಾತ್ರೆ ಕೈಗೊಂಡು ನವದೆಹಲಿ ತಲುಪುವ ಸಂಕಲ್ಪ ಕೈಗೊಂಡಿರುವುದಾಗಿ ವಿವರಿಸಿದರು.

ಅಣ್ಣಾಗೆ ತಲೆಬೋಳಿಸಿಕೊಂಡು ಬೆಂಬಲ ನೀಡಿದ ರೈತ:
ಹಿರಿಯ ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ಹೋರಾಟಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತ ಮಹೇಶ್ ಎಂಬವರು ತಲೆಬೋಳಿಸಿಕೊಂಡು ತಮ್ಮ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ನಗರದ ಫ್ರೀಡಂಪಾರ್ಕ್‌ಗೆ ಆಗಮಿಸಿ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಸಂತೋಷ್ ಹೆಗ್ಡೆ, ಜನಲೋಕಪಾಲ್ ಮಸೂದೆ, ತಿಹಾರ್ ಜೈಲು, ಬೆಂಗಳೂರು, ಫ್ರೀಡಂಪಾರ್ಕ್