ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಣ್ಣಾ ಹೋರಾಟಕ್ಕೆ ಶನಿವಾರ ಐದು ಸಾವಿರ ಟೆಕ್ಕಿಗಳ ಸಾಥ್ (Anna Hazare | Bangalore | Freedon park | Lokpal Bill | IT-BT | Santhosh Hegde)
ಪ್ರಬಲ ಜನಲೋಕಪಾಲ್ ಮಸೂದೆ ಜಾರಿಗಾಗಿ ಆಗ್ರಹಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ನಗರದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನಾಕಾರರ ಹೋರಾಟ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲದೇ ಅಣ್ಣಾ ಹೋರಾಟಕ್ಕೆ ಸಿಲಿಕಾನ್ ಸಿಟಿಯ ಐಟಿ-ಬಿಟಿ ಉದ್ಯೋಗಿಗಳು ಕೂಡ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶನಿವಾರ ಐಟಿ-ಬಿಟಿ ವಲಯದಿಂದ ಸುಮಾರು ಐದು ಸಾವಿರ ಟೆಕ್ಕಿಗಳು ಫ್ರೀಡಂಪಾರ್ಕ್‌ಗೆ ಆಗಮಿಸಿ ಸಾಥ್ ನೀಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ರಾಜ್ಯದ ವಿವಿಧೆಡೆಯಲ್ಲಿ ಅಣ್ಣಾ ಹೋರಾಟ ಬೆಂಬಲಿಸಿ ನಿರಶನ, ಹೋರಾಟ ಮುಂದುವರಿದಿದೆ.

ನಗರದ ಫ್ರೀಡಂಪಾರ್ಕ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ನೇತೃತ್ವದಲ್ಲಿ ನಿರಶನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಆಗಮಿಸುವ ಮೂಲಕ ಪ್ರತಿಭಟನಾಕರರಲ್ಲಿ ಹುಮ್ಮಸ್ಸು ತುಂಬಿದರು.

ಶುಕ್ರವಾರ ಕನ್ನಡದ ನಟ ಶಿವರಾಜ್ ಕುಮಾರ್ ಕೂಡ ಫ್ರೀಡಂಪಾರ್ಕ್‌ಗೆ ಆಗಮಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿಯೂ ಘೋಷಿಸಿದ್ದರು.

ಗಮನ ಸೆಳೆದ ಅಣ್ಣಾ ಪುಸ್ತಕ:
ನಗರದಲ್ಲಿ ಒಂದೆಡೆ ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಏನಿದು ಲೋಕಪಾಲ್, ಅಣ್ಣಾ ಹಜಾರೆ ಜೀವನ ಕುರಿತ ಕಿರು ಪುಸ್ತಕಗಳು ಎಲ್ಲರ ಗಮನ ಸೆಳೆದಿದೆ. ಕಳೆದ ಎರಡು ದಿನಗಳಿಂದ ಭರ್ಜರಿ ಮಾರಾಟವಾಗುತ್ತಿರುವುದಾಗಿ ಪುಸ್ತಕ ಮಾರಾಟಗಾರರು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಬೆಂಗಳೂರು, ಫ್ರೀಡಂಪಾರ್ಕ್, ಜನಲೋಕಪಾಲ್ ಮಸೂದೆ, ಐಟಿಬಿಟಿ, ಸಂತೋಷ್ ಹೆಗ್ಡೆ