ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ಲಂಚ-ಭ್ರಷ್ಟ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಿ: ಕಾಂಗ್ರೆಸ್ (Illegal Mining Report | Lokayukta | Santhosh Hegde | Congress | KPCC | Parameshwar)
ಅಕ್ರಮ ಗಣಿ ಕುರಿತು ಲೋಕಾಯುಕ್ತರು ಸಲ್ಲಿಸಿರುವ ಅಂತಿಮ ವರದಿಯಲ್ಲಿ ಶಾಸಕರು, ಮಂತ್ರಿಗಳು, ಹಿರಿಯ-ಕಿರಿಯ ಅಧಿಕಾರಿಗಳು ಮಾತ್ರವಲ್ಲ, ಪತ್ರಕರ್ತರೂ ಸೇರಿರುವ ಅಂಶ ಕೂಡ ಬಟಾಬಯಲಾಗಿದೆ. ಆ ಹಿನ್ನೆಯಲ್ಲಿ ಅಕ್ರಮ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಲಂಚ ಪಡೆದ ಪತ್ರಕರ್ತರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಮಾಜದ ಭ್ರಷ್ಟ ವ್ಯವಸ್ಥೆಯನ್ನು ಹೊರಹಾಕುವ ಕೆಲವು ಪತ್ರಕರ್ತರೇ ಈ ಭ್ರಷ್ಟಚಾರದಲ್ಲಿ ಸಿಲುಕಿರುವುದು ದುರಂತ. ಗಣಿ ಕಂಪನಿಗಳಿಂದ ಕೆಲವು ಪತ್ರಕರ್ತರಿಗೆ ದೊಡ್ಡ ಮೊತ್ತದ ಲಂಚ ಸಂದಾಯವಾಗಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಮಾಧ್ಯಮ ಸಂಸ್ಥೆಗಳು ಅಂತಹ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಹೇಳಿದೆ.

ಶನಿವಾರ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಮುಕ್ತಾಯವಾದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇಂದು ನಡೆದ ಸಭೆಯಲ್ಲಿ ಪ್ರಮುಖವಾಗಿ ನಾಲ್ಕು ನಿರ್ಣಯ ಕೈಗೊಂಡಿರುವುದಾಗಿ ಹೇಳಿದರು.

ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಯಾರೆಲ್ಲ ತಪ್ಪಿತಸ್ಥರೆಂದು ಉಲ್ಲೇಖಿಸಿದ್ದಾರೋ ಅವರೆಲ್ಲರ ವಿರುದ್ಧವೂ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಎರಡನೇ ಹಂತದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಲಂಚ ಪಡೆದ ಪತ್ರಕರ್ತರು ಯಾರು?
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಬಳ್ಳಾರಿ ಮಧುಶ್ರೀ ಎಂಟರ್ ಪ್ರೈಸಸ್ ಎಂಬ ಕಂಪನಿ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಗೆ ದೊರೆತ ಕಂಪ್ಯೂಟರ್, ದಾಖಲೆಗಳಿಂದ ಈ ವಿಷಯ ಪತ್ತೆಹಚ್ಚಿದೆ. ಆದಾಯ ತೆರಿಗೆ ಇಲಾಖೆ ಒದಗಿಸಿದ ದಾಖಲೆಗಳ ಆಧಾರದಲ್ಲಿ ಈ ವಿಷಯವನ್ನು ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್ ಸಲ್ಲಿಸಿದ ವರದಿಯಲ್ಲಿ ದಾಖಲಿಸಿದ್ದಾರೆ.

2010 ಜುಲೈ 31ರಂದು ಆರ್.ಬಿ.ಗೆ-10 ಲಕ್ಷ
2010ರ ಆಗಸ್ಟ್ 4ರಂದು ವಿ. ಭಟ್- 25 ಲಕ್ಷ
2010 ಆಗಸ್ಟ್ 9ಕ್ಕೆ- ಜಿಜಿ ಆರ್ ಸರ್-2 ಲಕ್ಷ
ಬೆಂಗಳೂರು ಮಿರರ್, ಸಂಜಯ್ ಸರ್-5 ಲಕ್ಷ
ವಿ. ಭಟ್ ಅವರಿಗೆ-50 ಲಕ್ಷ

ಆಗಸ್ಟ್ 31ರಂದು ರಾಮಚಂದ್ರ ರೆಡ್ಡಿ ಸರ್-30 ಲಕ್ಷ
ಜಿಜಿ ಆರ್ ಸರ್-2 ಲಕ್ಷ
ಡೆಕ್ಕನ್ ಕ್ರಾನಿಕಲ್-25 ಲಕ್ಷ
ಪ್ರೆಸ್ ಕ್ಲಬ್ ಹರೀಶ್-5 ಲಕ್ಷ
ಸಂಜಯ್ ಸರ್-1.52 ಲಕ್ಷ ರೂಪಾಯಿ ನೀಡಲಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಕ್ರಮ ಗಣಿಗಾರಿಕೆ ವರದಿ, ಲೋಕಾಯುಕ್ತ, ಸಂತೋಷ್ ಹೆಗ್ಡೆ, ಕಾಂಗ್ರೆಸ್, ಕೆಪಿಸಿಸಿ, ಪರಮೇಶ್ವರ್, ಲಂಚ