ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಿಮ್ಮಂತೆ ನನಗೆ ಇಬ್ಬರು ಹೆಂಡ್ತಿ ಇಲ್ಲ: ಎಚ್‌ಡಿಕೆ v/s ಹೆಗ್ಡೆ ವಾರ್ (Santhosh Hegde | Kumaraswamy | Lokayukta | Radhika | JDS | Anna Hazare)
PR
'ನಾನು ಕಳೆದ 42 ವರ್ಷಗಳಿಂದ ಒಬ್ಬಳೇ ಹೆಂಡತಿ ಜತೆ ಒಂದೇ ಮನೆಯಲ್ಲಿ ಸಂಸಾರ ಮಾಡುತ್ತಿದ್ದೇನೆ. ನನಗೆ ಎರಡನೇ ಸಂಸಾರ ಇಲ್ಲ'...ಇದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಪರಿ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ರಾತ್ರಿ ಜೀವನಕ್ಕೆ(ಗುಂಡು ಪಾರ್ಟಿ) ಸಾಕಷ್ಟು ದುಂದು ವೆಚ್ಚ ಮಾಡುತ್ತಿದ್ದಾರೆ. ಹಾಗಂತ ಹೆಗ್ಡೆ ಆ ಲೆಕ್ಕ ಕೊಡ್ತಾರಾ? ಸಂಬಳದ ಮೇಲೆ ರಾತ್ರಿ ಜೀವನ ನಡೆಸಲು ಸಾಧ್ಯನಾ ಎಂಬುದಾಗಿ ಕುಮಾರಸ್ವಾಮಿ ಖಾಸಗಿ ಟಿವಿ ಚಾನೆಲ್‌ವೊಂದರ ಸಂದರ್ಶನದಲ್ಲಿ ಉಡಾಫೆಯಾಗಿ ಪ್ರಶ್ನಿಸಿದ್ದರು. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ರೆ ಕೆಲವರಿಗೆ ನೋವಾಗುತ್ತೆ ಎಂದು ಕೂಡ ಹೇಳಿದ್ದರು.

ಶನಿವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಅಣ್ಣಾ ಹಜಾರೆ ನಿರಶನ ಬೆಂಬಲಿಸಿ ನಡೆಸುತ್ತಿರುವ ಪ್ರತಿಭಟನಾ ಸಭೆಯಲ್ಲಿ ತಿರುಗೇಟು ನೀಡಿರುವ ಹೆಗ್ಡೆ, ನಾನು ಫ್ರೀಡಂಪಾರ್ಕ್‌ನಿಂದ ಪ್ರತಿದಿನ ನೇರವಾಗಿ ಮನೆಗೆ ಹೋಗುತ್ತೇನೆ. ನನಗೆ ಎರಡನೇ ಮನೆ ಇಲ್ಲ ಎಂದು ಪರೋಕ್ಷವಾಗಿ ಕುಮಾರಸ್ವಾಮಿ-ರಾಧಿಕಾ ಸಂಸಾರದ ಬಗ್ಗೆ ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

WD
ದಯವಿಟ್ಟು ನೀವು ಸಂತೋಷ್ ಹೆಗ್ಡೆಯವರ ರಾತ್ರಿ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಈ ಸಂದರ್ಭದಲ್ಲಿ ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ. ಸಂತೋಷ್ ಹೆಗ್ಡೆ ಒಂದೇ ಹೆಂಡತಿ ಜತೆ ದೀರ್ಘಕಾಲ ಸಂಸಾರ ನಡೆಸುತ್ತಿದ್ದಾರೆ. ಹಾಗಂತ ನೀವು ಬಾಯಿಗೆ ಬಂದಂತೆ ಮಾತನಾಡುವುದು ಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಮಾರಸ್ವಾಮಿ ಇನ್ನೊಬ್ಬರ ಬಗ್ಗೆ ಆರೋಪ ಮಾಡುವ ಮೊದಲು ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳಲಿ. ಅದೇ ರೀತಿ ತಮ್ಮ ಲೋಪವನ್ನು ತಿಳಿದುಕೊಂಡು ಮಾತನಾಡಲಿ ಎಂದು ಕಿಡಿಕಾರಿದ್ದಾರೆ.

ಭ್ರಷ್ಟಾಚಾರ ತಡೆಗಾಗಿ ಪ್ರಬಲ ಜನಲೋಕಪಾಲ ಮಸೂದೆ ಜಾರಿಯಾಗಬೇಕೆಂದು ಒತ್ತಾಯಿಸಿ ಆಮರಣಾಂತ ಉಪವಾಸ ನಡೆಸುತ್ತಿರುವ ಅಣ್ಣಾ ಹಜಾರೆ ಹೋರಾಟಕ್ಕೆ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಹತ್ತು ಕೋಟಿ ರೂಪಾಯಿ ದೇಣಿಗೆ ನೀಡಿರುವುದಾಗಿಯೂ ಕುಮಾರಸ್ವಾಮಿ ಆರೋಪಿಸಿರುವುದು ಸಾಕಷ್ಟು ವಾದ-ವಿವಾದಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ತಾವು ಅಣ್ಣಾ ಹಜಾರೆ ಹೋರಾಟಕ್ಕೆ ದೇಣಿಗೆ ನೀಡಿರುವುದನ್ನು ಸಾಬೀತು ಪಡಿಸಿದ್ರೆ ಗಡ್ಡ ಬೋಳಿಸುವುದಾಗಿ ರವಿಶಂಕರ್ ಗುರೂಜಿ ಮಾಜಿ ಮುಖ್ಯಮಂತ್ರಿಗೆ ನೇರ ಸವಾಲು ಹಾಕಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸಂತೋಷ್ ಹೆಗ್ಡೆ, ಕುಮಾರಸ್ವಾಮಿ, ಲೋಕಾಯುಕ್ತ, ರಾಧಿಕಾ, ಜೆಡಿಎಸ್, ಅಣ್ಣಾ ಹಜಾರೆ