ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ಲೀಸ್...ಎಚ್‌ಡಿಕೆ 'ಆ ವಿಚಾರ' ಮುಂದುವರಿಸ್ಬೇಡಿ: ಹೆಗ್ಡೆಗೆ ಗೌಡ (Santhosh Hegde | Kumaraswamy | Lokayukta | Radhika | JDS | Deve gowda)
PTI
ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.

ನ್ಯಾ.ಸಂತೋಷ್ ಹೆಗ್ಡೆಯವರು ರಾಜ್ಯದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಇವರ ಬಗ್ಗೆ ರಾಜ್ಯದ ಜನರಿಗೆ ಗೌರವವಿದೆ. ನನ್ನ ಮಕ್ಕಳು (ಕುಮಾರಸ್ವಾಮಿ) ಅವರ ಹೆಸರಿಗೆ ಅಗೌರವ ತೋರಿದ್ದು ವ್ಯಕ್ತಿಗತವಾಗಿ ನನಗೆ ನೋವಾಗಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಗೌಡರು ಹೇಳಿದ್ದಾರೆ.

ಅಲ್ಲದೇ, ನನ್ನ ಮನವಿಗೆ ಸ್ಪಂದಿಸಿ ಈ ವಿಚಾರವನ್ನು ಮುಂದುವರಿಸಿಕೊಂಡು ಹೋಗದಂತೆ ಸಂತೋಷ್ ಹೆಗ್ಡೆಯವರಲ್ಲಿ ಕೈಮುಗಿದು ಮನವಿ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸಂತೋಷ್ ಹೆಗ್ಡೆಯವರು ರಾತ್ರಿ ಜೀವನಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಎಂಬುದನ್ನು ಲೆಕ್ಕ ಕೊಡುತ್ತಾರೆಯೇ?ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಸಂತೋಷ್ ಹೆಗ್ಡೆ, ನನಗಿರುವುದು ಒಬ್ಬಳೇ ಹೆಂಡತಿ ಮತ್ತು ಒಂದೇ ಮನೆ. ಎರಡು ಮನೆಗಳನ್ನು ಮಾಡಿಲ್ಲ. ಜುಗಾರಿಗೆ ಹೋಗಲ್ಲ. ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಮುಗಿಸಿಕೊಂಡು ನೇರವಾಗಿ ನನ್ನ ಮನೆಗೇ ತೆರಳುತ್ತೇನೆ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕುಮಾರಸ್ವಾಮಿ, ದೇವೇಗೌಡ, ಲೋಕಾಯುಕ್ತ, ಸಂತೋಷ್ ಹೆಗ್ಡೆ, ರಾಧಿಕಾ, ಜೆಡಿಎಸ್, ಅಣ್ಣಾ ಹಜಾರೆ