ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಣ್ಣಾ ಹಜಾರೆ ಗೆಲುವೂ ಅಲ್ಲ, ಕಾಂಗ್ರೆಸ್ ಸೋಲು ಅಲ್ಲ: ಪರಮೇಶ್ವರ್ (Anna Hazare | KPCC | Parameshwar | UPA | Lokpal Bill | Hunger Strike)
ಅಣ್ಣಾ ಹಜಾರೆ ಗೆಲುವೂ ಅಲ್ಲ, ಕಾಂಗ್ರೆಸ್ ಸೋಲು ಅಲ್ಲ: ಪರಮೇಶ್ವರ್
ಬೆಂಗಳೂರು, ಸೋಮವಾರ, 29 ಆಗಸ್ಟ್ 2011( 09:30 IST )
ಜನಲೋಕಪಾಲ ಮಸೂದೆ ಜಾರಿಗಾಗಿ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸಿದ ಹೋರಾಟ ಬಿಜೆಪಿ ಪ್ರಾಯೋಜಿತವಾಗಿರುವುದಾಗಿ ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇದು ಅಣ್ಣಾ ತಂಡದ ಗೆಲುವೂ ಅಲ್ಲ, ಕಾಂಗ್ರೆಸ್ ಸೋಲು ಅಲ್ಲ ಎಂದು ಹೇಳಿದರು.
ಭಾನುವಾರ ಕೆಪಿಸಿಸಿ ವತಿಯಿಂದ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಆರೋಗ್ಯ ಸುಧಾರಣೆಗಾಗಿ ಧನ್ವಂತರಿ ಹೋಮ ಕೈಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಣ್ಣಾ ಹಜಾರೆ ನಡೆಸಿದ ಹೋರಾಟಕ್ಕೆ ಸಂಘಪರಿವಾರ, ಎಬಿವಿಪಿ ಸೇರಿದಂತೆ ಬಹುತೇಕ ಬಿಜೆಪಿವಯರೇ ಬೆಂಬಲ ನೀಡಿರುವುದಾಗಿ ಹೇಳಿದರು.
ಒಟ್ಟಾರೆ ಇದೀಗ ಲೋಕಪಾಲ ಮಸೂದೆ ನಿರ್ಣಯ ಸಂಸತ್‌ನಲ್ಲಿ ಕೈಗೊಂಡ ಕೂಡಲೇ ಇದು ಅಣ್ಣಾ ಹಜಾರೆಗೆ ಸಂದ ಜಯ, ಕೇಂದ್ರ ಸರ್ಕಾರಕ್ಕೆ ಆದ ಸೋಲು ಎಂದು ಭಾವಿಸಬೇಕಾಗಿಲ್ಲ. ನಮ್ಮದು ಪ್ರಜಾಪ್ರಭುತ್ವ, ಹಾಗಾಗಿ ಎಲ್ಲ ಪ್ರಕ್ರಿಯೆಗಳೂ ಸಂವಿಧಾನ ಬದ್ಧವಾಗಿಯೇ ನಡೆಯಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಇದರ ಹಿಂದೆ ಅಡಗಿತ್ತು. ಬಹಳಷ್ಟು ಸಲ ಹೀಗೆ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ಅದ್ಯಾವುದೂ ಸಫಲವಾಗಿಲ್ಲ ಎಂಬುದಾಗಿ ಹೇಳಿದರು.
ಅಲ್ಲದೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು.