ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಸಾಕಪ್ಪಾ ಪಾಲಿಟಿಕ್ಸ್; ನಿವೃತ್ತಿ ಸೂಚನೆ ನೀಡಿದ ಸಿದ್ದರಾಮಯ್ಯ (Siddaramaiah | Congess | KPCC | Latest News in Kannada | Kannada News | Karnataka News | Latest Karnataka News | Bangalore | Latest Political News in)
ಸಾಕಪ್ಪಾ ಪಾಲಿಟಿಕ್ಸ್; ನಿವೃತ್ತಿ ಸೂಚನೆ ನೀಡಿದ ಸಿದ್ದರಾಮಯ್ಯ
ಬೆಂಗಳೂರು, ಶುಕ್ರವಾರ, 2 ಸೆಪ್ಟೆಂಬರ್ 2011( 15:05 IST )
WD
ಕಾಂಗ್ರೆಸ್ ಮುಖಂಡ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಜೆಡಿಎಸ್ ಸೇರುತ್ತಾರೆಂಬ ಊಹಾಪೋಹವನ್ನು ಅಲ್ಲಗಳೆದಿದ್ದ ಅವರು ಇದೀಗ ರಾಜಕೀಯ ನಿವೃತ್ತಿಯ ಮುನ್ಸೂಚನೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯೇ ತನ್ನ ಅಂತಿಮ ಸ್ಪರ್ಧೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅವರು ರಾಜಕೀಯ ನಿವೃತ್ತಿಯಾಗುತ್ತಿರುವುದಕ್ಕೆ ಅನಾರೋಗ್ಯದ ಕಾರಣವನ್ನೂ ನೀಡಿದ್ದಾರೆ. ಆದರೆ ಅಗತ್ಯಬಿದ್ದರೆ ಲೋಕಸಭೆಗೆ (ಕೊಪ್ಪಳ ಕ್ಷೇತ್ರ) ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸುವುದಾಗಿಯೂ ಹೇಳಿದರು.
ಇತ್ತೀಚೆಗಷ್ಟೇ ಜೆಡಿಎಸ್ ಸೇರ್ಪಡೆಗೊಳ್ಳುತ್ತಾರೆಂಬ ಗಾಳಿಸುದ್ದಿ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ. ಆದರೆ ರಾಜಕೀಯ ನಿವೃತ್ತಿಯಾಗುವುದಾಗಿ ಆ ಸಂದರ್ಭದಲ್ಲೇ ಸುಳಿವು ನೀಡಿದ್ದರು.
ಒಟ್ಟಾರೆ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆ, ಕಾಂಗ್ರೆಸ್ ಒಳಜಗಳ ಹಾಗೂ ರಾಜ್ಯದಲ್ಲಿ ನಡೆದ ಉಪ ಚುನಾವಣೆ, ಸ್ಥಳೀಯ ಸಂಸ್ಥೆ, ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಜನತಾಪರಿವಾರದಲ್ಲಿಯೇ ಮುಖ್ಯಮಂತ್ರಿ ಗದ್ದುಗೆಯ ಕನಸು ಕಂಡು, ಜನತಾದಳದಿಂದ ಹೊರಹಾಕಲ್ಪಟ್ಟಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್ ಪಾಳಯ ಸೇರಿಕೊಂಡಿದ್ದರು.
ಕಾಂಗ್ರೆಸ್ ಪಾಳಯದಲ್ಲಿ ಸಿದ್ದರಾಮಯ್ಯನವರ ವರ್ಚಸ್ಸು ಹೇಳುವಂತಹ ಮಟ್ಟಿಗೆ ಲಾಭ ತಂದುಕೊಟ್ಟಿಲ್ಲ. ಅಂತೂ ಕಾಂಗ್ರೆಸ್ ಬಹುಮತ ಪಡೆಯಲಿದೆಯೇ ಎಂಬ ಬಗ್ಗೆ ಮುಂದಿನ ವಿಧಾನಸಭೆ ಚುನಾವಣೆಯೇ ತನ್ನ ಅಂತಿಮ ಸ್ಪರ್ಧೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ತಮ್ಮ ದೀರ್ಘಾವಧಿಯ ರಾಜಕೀಯ ಜೀವನಕ್ಕೆ ಗುಡ್ ಬೈ ಹೇಳುವ ಮುನ್ಸೂಚನೆ ನೀಡಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಆ ನೆಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆ ನಂತರ ಸಿದ್ದರಾಮಯ್ಯನವರ ನಡೆ ಕುತೂಹಲ ಹುಟ್ಟಿಸಿದೆ.