ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ರಾಮುಲು ದಿಕ್ಕು ತಪ್ಪಿಸುವ ತಂತ್ರ ಹೂಡಿದ್ದಾರೆ: ಸಿದ್ದು (Sreeramulu | BJP | Resign | Siddaramayya | Congress | Karnataka Political News)
PR
ಬಳ್ಳಾರಿ ಜಿಲ್ಲೆಯ ಅದಿರನ್ನು ಲೂಟಿ ಮಾಡಿದ್ದಲ್ಲದೇ ಪರಿಸರವನ್ನೂ ಹಾಳು ಮಾಡಿ, ಇದೀಗ ರಾಜೀನಾಮೆ ನೀಡುವುದಾಗಿ ಹೇಳುತ್ತಿರುವ ಮಾಜಿ ಸಚಿವ ಶ್ರೀರಾಮುಲು, ಜನತೆಗೆ ದಿಕ್ಕು ತಪ್ಪಿಸುವ ತಂತ್ರ ಹೂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿನ ಪರಿಸರ ಮಾರಣಹೋಮಕ್ಕೆ ಕಾರಣವಾದ ರಾಮುಲು, ಇದೀಗ ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರಿದೆ ಎನ್ನುವ ಕಾರಣದಿಂದ, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಹೇಳುತ್ತಿರುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ರೆಡ್ಡಿ ಸಹೋದರರಿಗೆ ಬೆಂಬಲವಾಗಿ ಗಣಿ ಅದಿರು ವಹಿವಾಟಿನಲ್ಲಿ ತೊಡಗಿದ್ದ ಮಾಜಿ ಸಚಿವ ಶ್ರೀರಾಮುಲು, ಲೋಕಾಯುಕ್ತ ವರದಿ ಬಹಿರಂಗವಾಗುತ್ತಿದ್ದಂತೆ, ಸ್ವಾಭಿಮಾನ ಹೋಗಿದೆ ಎಂದು ಹೇಳುವುದು ಯಾವ ನ್ಯಾಯ ಎನ್ನುವುದನ್ನು ಅವರೇ ಹೇಳಬೇಕಾಗಿದೆ ಎಂದರು.

ಬಿಜೆಪಿ ಸರಕಾರದಲ್ಲಿನ ಆಂತರಿಕ ಬಿಕ್ಕಟ್ಟುಗಳು ಆಳವಾಗಿದ್ದರಿಂದ, ಸಚಿವ ಸ್ಥಾನ ಪಡೆಯಲು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಶ್ರೀರಾಮುಲು, ಬಿಜೆಪಿ, ರಾಜೀನಾಮೆ, ಸಿದ್ಧರಾಮಯ್ಯ, ಕಾಂಗ್ರೆಸ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ