ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ರೆಡ್ಡಿ ಬಂಧನ: ಉಪ್ಪು ತಿಂದವರು ನೀರು ಕುಡಿಯಲೇ ಬೇಕು: ಹೆಗ್ಡೆ (Janardhana Reddy Arrest | Illegal Mining | Santhosh hegade | CBI arrests Janardan Reddy | Karnataka News | Latest News in Kannada | Kannada Web site)
PR
ಬೆಂಗಳೂರು: ಅಕ್ರಮ ಗಣಿಗಾರಿಕೆ ನಡೆಸಿದ್ದರಿಂದ ಮಾಜಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಯವರ ಬಂಧನವಾಗಿದೆ. ರಾಜ್ಯ ಸರಕಾರ ಸಿಬಿಐ ತನಿಖೆಗೆ ಆದೇಶ ನೀಡಿಲ್ಲವಾದ್ದರಿಂದ, ನನ್ನ ವರದಿಯಿಂದ ಸಿಬಿಐ ದಾಳಿ ನಡೆದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಕಾನೂನುಬಾಹಿರ ಚಟುವಟಿಕೆ ನಡೆಸಿದಲ್ಲಿ ಅದರ ಫಲ ಪಡೆಯಬೇಕಾಗುತ್ತದೆ. ಸಿಬಿಐ ದಾಳಿ ವಿಳಂಬವಾದರೂ ಅಂತಿಮವಾಗಿ ಕ್ರಮ ತೆಗೆದುಕೊಂಡಿದೆ ಎನ್ನುವುದೇ ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಗಡಿನಾಶ ಗುರುತು, ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪಗಳ ಹಿನ್ನೆಲೆಯಲ್ಲಿ ಕಾಯ್ದೆ 120 ಹಾಗೂ 120 'ಬಿ' ಕಾಯ್ದೆಯಡಿ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ವಿವರಣೆ ನೀಡಿದ್ದಾರೆ.

ಆಂದ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರೋಸಯ್ಯ, ಅಕ್ರಮ ಗಣಿಗಾರಿಕೆ ಕುರಿತಂತೆ ಸಿಬಿಐ ತನಿಖೆಗೆ ಆದೇಶಿಸಿದ್ದರಿಂದ ಸಿಬಿಐ ತಂಡ ಏಕಕಾಲಕ್ಕೆ ಬಳ್ಳಾರಿ ಹಾಗೂ ಬೆಂಗಳೂರು ನಿವಾಸಗಳ ಮೇಲೆ ದಾಳಿ ನಡೆಸಿದೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ ಬಂಧನ, ಅಕ್ರಮ ಗಣಿಗಾರಿಕೆ, ಸಿಬಿಐ, ಬಳ್ಳಾರಿ ಗಣಿಗಾರಿಕೆ, ಕರ್ನಾಟಕ ಸುದ್ದಿ, ಕನ್ನಡ ಸುದ್ದಿ, ಬಳ್ಳಾರಿ ಸುದ್ದಿ, ಗಣಿಗಾರಿಕೆ ವರದಿ, ರೆಡ್ಡಿ ಸಹೋದರ, ಕನ್ನಡ ವೆಬ್ ಸೈಟ್, ಸಿಬಿಐ ದಾಳಿ