ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಜನಾರ್ದನ ರೆಡ್ಡಿ ಬಂಧನಕ್ಕೆ ಸುಗ್ಗಲಮ್ಮ ಶಾಪವೇ ಕಾರಣ? (janardhan reddy | Illegal mining | CBI | Latest News in Kannada | Kannada News | Karnataka News | Latest Karnataka News | Bangalore)
janardhan reddy
WD
ಗಣಿಧಣಿ, ಓಬಳಾಪುರಂ ಗಣಿ ಕಂಪನಿ ಒಡೆಯ ಜನಾರ್ದನ ರೆಡ್ಡಿ ಬಂಧನಕ್ಕೆ ಸುಗ್ಗಲಮ್ಮ ದೇವಿಯ ಶಾಪವೇ ಕಾರಣ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಆಂಧ್ರಪ್ರದೇಶ-ಕರ್ನಾಟಕ ಗಡಿಭಾಗದಲ್ಲಿದ್ದ ಸುಗ್ಗಲಮ್ಮ ದೇವಿಯ ದೇವಸ್ಥಾನವನ್ನು ಸುಮಾರು ಐದು ವರ್ಷಗಳ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಸ್ಫೋಟಗೊಳಿಸಿದ್ದರು. ಕಾಕತಾಳೀಯ ಎಂಬಂತೆ ಅದೇ ಸೆಪ್ಟೆಂಬರ್ ತಿಂಗಳ 5ರಂದು ರೆಡ್ಡಿ ಬಂಧನವಾಗಿದೆ!

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸುಗ್ಗಲಮ್ಮ ದೇವಿಯ ದೇವಸ್ಥಾನವು ಬಿಐಒಪಿ ಮತ್ತು ಓಎಂಸಿ ಗಣಿಗಳ ನಡುವೆ ಇತ್ತು. ಗಣಿ ಪ್ರದೇಶದ ಗಡಿ ಗುರಿತು ನಾಶಪಡಿಸುವ ನಿಟ್ಟಿನಲ್ಲಿ ರೆಡ್ಡಿಗಳು 2006ರ ಸೆಪ್ಟೆಂಬರ್‌ 3 ರಂದು ಸುಗ್ಗಲಮ್ಮ ದೇವಸ್ಥಾನವನ್ನು ಸ್ಫೋಟಿಸಿದ್ದರು. ರಾಜ್ಯದ ಗಣಿ ಪ್ರದೇಶದ ಗುರುತು ನಾಶಪಡಿಸಿದ್ದ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸುಗ್ಗಲಮ್ಮ ದೇವಾಲಯವನ್ನು ಸ್ಫೋಟಿಸಿದ ನಂತರ ಭೀತಿಗೊಳಗಾದ ರೆಡ್ಡಿ ಸಹೋದರರು ಕೇರಳ ಮತ್ತು ಕರ್ನಾಟಕದ ತಂತ್ರಿಗಳನ್ನು ಭೇಟಿ ಮಾಡಿದ್ದರೂ ಕೂಡ ಇದರಿಂದ ಅವರಿಗೆ ಪರಿಹಾರ ದೊರೆತಿರಲಿಲ್ಲ. ಜನಾ‌ರ್ದನ ರೆಡ್ಡಿಗೆ ಸುಗ್ಗಲಮ್ಮ ದೇವಿಯ ಶಾಪ ತಟ್ಟಿದ್ದರಿಂದಲೇ ಅವರು ಬಂಧನಕ್ಕೊಳಗಾಗಬೇಕಾಯಿತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಜಿ. ಜನಾರ್ದನ ರೆಡ್ಡಿ ಅವರು ತಮ್ಮ ಸಂಬಂಧಿ ಶ್ರೀನಿವಾಸ ರೆಡ್ಡಿ ಅವರ ಜೊತೆಗೂಡಿ 2001ರಲ್ಲಿ ಓಬಳಾಪುರಂ ಮೈನಿಂಗ್‌ ಕಂಪನಿಯನ್ನು ಆರಂಭಿಸಿದ್ದರು. ಇತರೆ ಗಣಿ ಕಂಪನಿಗಳು ಗಣಿಗಾರಿಕೆಗೆ ಗುತ್ತಿಗೆ ಪಡೆದಿದ್ದ ಪ್ರದೇಶವನ್ನೂ ಒತ್ತುವರಿ ಮಾಡಿಕೊಂಡಿದ್ದರು ಎಂಬ ಆಪಾದನೆಯೂ ಇತ್ತು. ರೆಡ್ಡಿ ಬ್ರದರ್ಸ್‌ ಗುತ್ತಿಗೆ ಪಡೆದಿದ್ದ 6 ಗಣಿ ಗುತ್ತಿಗೆ ಪ್ರದೇಶಗಳು ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯಲ್ಲಿದ್ದು, ಈ ಪೈಕಿ ನಾಲ್ಕು ಗಣಿ ಗುತ್ತಿಗೆ ಶ್ರೀರಾಮುಲುಗೆ ಹಾಗೂ ಶ್ರೀನಿವಾಸ ರೆಡ್ಡಿಗೆ ಸೇರಿದ್ದರೆ ಎರಡು ಗಣಿ ಗುತ್ತಿಗೆಗಳು ಮಹಾಬಲೇಶ್ವರಪ್ಪ ಅವರ ಬಿಐಓಪಿ ಕಂಪನಿಗೆ ಸೇರಿದ್ದವು.

ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್‌.ರಾಜಶೇಖರ ರೆಡ್ಡಿ ಅವರು ಜನಾರ್ದನ ರೆಡ್ಡಿ ಪರವಾಗಿದ್ದುದರಿಂದ ಅವರ ವಿರುದ್ಧ ಯಾವುದೇ ತನಿಖೆ ನಡೆಸಲು ಸಾಧ್ಯವಾಗಿರಲಿಲ್ಲ. ವೈ.ಎಸ್‌.ರಾಜಶೇಖರ ರೆಡ್ಡಿ ಅವರು ನಿಧನಾನಂತರ ಮುಖ್ಯಮಂತ್ರಿಯಾಗಿದ್ದ ರೋಸಯ್ಯ ಅವರು ತೆಲುಗು ದೇಶಂ ಪಕ್ಷದ ಆಪಾದನೆಯ ಮೇರೆಗೆ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ್ದರು. ಸಿಬಿಐ ವಿಚಾರಣೆಗೆ ರೆಡ್ಡಿಗಳು ಆಂಧ್ರಪ್ರದೇಶ ಹೈಕೋರ್ಟ್‌‌ನಿಂದ ತಡೆಯಾಜ್ಞೆ ತಂದಿದ್ದರು. ಈ ಕುರಿತು ಆಂಧ್ರಪ್ರದೇಶ ಸರಕಾರ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಆಂಧ್ರ ಹೈಕೋರ್ಟ್‌ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದರಿಂದ ಸಿಬಿಐ ವಿಚಾರಣೆಗೆ ಹಾದಿ ಸುಗಮವಾಗಿತ್ತು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಅಕ್ರಮ ಗಣಿಗಾರಿಕೆ, ಸಿಬಿಐ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ