ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ವಿದೇಶದಲ್ಲೂ ರೆಡ್ಡಿ ಕಂಪೆನಿ ಹೊಂದಿದ್ದಾರೆ: ಸಿಬಿಐ (Janardhan Reddy | Bellary | CBI | Karnataka | Latest News in Kannada | Kannada News, Karnataka News | karnataka news online)
ಅಕ್ರಮ ಗಣಿಗಾರಿಕೆಯ ಸಂಬಂಧ ಬಂಧಿತರಾಗಿರುವ ಕರ್ನಾಟಕ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಓಬಳಾಪುರಂ ಮೈನಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು ವಿದೇಶದಲ್ಲೂ ಹೂಡಿಕೆ ಹೊಂದಿರುವುದಾಗಿ ಸಿಬಿಐ ತಿಳಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜನಾರ್ದನ ರೆಡ್ಡಿ ಹಾಗೂ ಸಹೋದರರು ಮಾರಿಷಸ್ ಹಾಗೂ ವರ್ಜಿನ್ ದ್ವೀಪ ಸೇರಿದಂತೆ ವಿದೇಶಗಲ್ಲಿ ಆರು ಕಂಪೆನಿಗಳನ್ನು ಹೊಂದಿರುವುದು ತನಿಖೆಯಿಂದ ಬಯಲಾಗಿದೆ. ಈ ಸಂಸ್ಥೆಗಳು ಕಬ್ಬಿಣದ ಅದಿರು ರಫ್ತಿಗಾಗಿ ಚೀನಾದ ಕಂಪೆನಿಗಳು ಪಾವತಿಸಿದ ಹಣವನ್ನು ಬೇರೆಡೆಗೆ ತೊಡಗಿಸುವ ಕೆಲಸವನ್ನು ಮಾಡಿವೆ. ಈ ಸಂಬಂಧ ವಶಪಡಿಸಿಕೊಳ್ಳಲಾಗಿರುವ ಸಾವಿರಕ್ಕೂ ಹೆಚ್ಚು ದಾಖಲೆಗಳನ್ನು ಸಿಬಿಐ ಪರಿಶೀಲನೆಗೆ ಒಳಪಡಿಸಿವೆ.

ಸಿಬಿಐ ವಶಕ್ಕೆ ಒಪ್ಪಿಸಿ...
ಈ ನಡುವೆ ಜನಾರ್ದನ ರೆಡ್ಡಿ ಅವರನ್ನು ವಶಕ್ಕೊಪ್ಪಿಸುವಂತೆ ಸಿಬಿಐ ಬುಧವಾರ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಲಿದೆ. ರೆಡ್ಡಿ ಸೋದರರ ಜಾಮೀನು ಅರ್ಜಿಗಳ ವಿಚಾರಣೆಯೂ ಸಹ ಇಂದೆ ನಡೆಯಲಿದೆ.

ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆಯನ್ನು ತೀವ್ರಗೊಳಿಸಲಿರುವ ಸಿಬಿಐ ಇನ್ನಷ್ಟು ಅಧಿಕಾರಿಗಳನ್ನು ಬಂಧಿಸುವ ನಿರೀಕ್ಷೆಯಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರಕಾರ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ.

10 ವರ್ಷ ಜೈಲುವಾಸ?
ರೆಡ್ಡಿ ವಿರುದ್ಧ ಈಗಾಗಲೇ ಹಲವು ಆರೋಪಗಳ ಪಟ್ಟಿಯನ್ನೇ ದಾಖಲಿಸಲಾಗಿದ್ದು, ಜಾಮೀನು ಸಾಧ್ಯವಾಗದಂತೆ ನಿಖರ ದಾಖಲೆಗಳನ್ನು ಸಿಬಿಐಯಿಂದ ಸಂಗ್ರಹಿಸಲಾಗುತ್ತಿದೆ. ಒಂದು ವೇಳೆ ರೆಡ್ಡಿ ಮೇಲಿನ ಆರೋಪಗಳೆಲ್ಲವು ಸಾಬೀತಾದರೆ ಕನಿಷ್ಠ 10 ವರ್ಷ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಓಬಳಾಪುರಂ ಮೈನಿಂಗ್ ಕಂಪೆನಿ, ಅಕ್ರಮ ಗಣಿಗಾರಿಕೆ, ಗಣಿಧಣಿ, ಕರ್ನಾಟಕ, ಆಂಧ್ರಪ್ರದೇಶ, ವಿದೇಶ, ಹೂಡಿಕೆ, ಮಾರಿಷಸ್, ಕಂಪೆನಿ, ನ್ಯಾಯಾಲಯ, ಜಾಮೀನು ಅರ್ಜಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ರೆಡ್ಡಿ ಬ್ರದರ್ಸ್