ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ರೆಡ್ಡಿ ಮನೆ ಕಂಡು ದಂಗಾದ ಸಿಬಿಐ; ಚಿನ್ನದ ಕುರ್ಚಿ, ವಿದೇಶಿ ಮದ್ಯ (Janardana Reddy | CBI | Bellary | Arrest | Latest News in Kannada | Bangalore News,)
ಅಲ್ಪನಿಗೆ ಐಶ್ವರ್ಯ ಬಂದರೆ ಚಂದ್ರನಿಗೆ ಕೊಡೆ ಹಿಡಿಯುತ್ತಾರೆಂಬ ಗಾದೆ ಮಾತಿನಂತೆ ಬಳ್ಳಾರಿ ಗಣಿಧಣಿಗಳು ಅಲ್ಪಾವಧಿಯಲ್ಲಿಯೇ ಗಣಿ ಲೂಟಿ ಮೂಲಕ ಸಹಸ್ರಾರು ಕೋಟಿ ರೂಪಾಯಿ ಗಳಿಸುವ ಮೂಲಕ ಅವರು ನಡೆಸುತ್ತಿದ್ದ ವೈಭವೋಪೇತ ಜೀವನ ಹೇಗಿತ್ತು ಎಂಬುದು ಸಿಬಿಐ ದಾಳಿ ನಂತರ ಮತ್ತಷ್ಟು ಬಯಲಿಗೆ ಬಂದಿದೆ.

ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿ ಕುಟೀರ ನಿವಾಸಕ್ಕೆ ಸಿಬಿಐ ದಾಳಿ ನಡೆಸಿದಾಗ ಮನೆಯಲ್ಲಿನ ವೈಭವ ಕಂಡು ದಂಗಾಗಿ ಹೋಗಿದ್ದರು.

ದೇವೇಂದ್ರನ ಇಂದ್ರಲೋಕವನ್ನೇ ನಾಚಿಸುವಂತಹ ವೈಭವ ಹೊಂದಿರುವ ರೆಡ್ಡಿ ಬಂಗಲೆ, ಆವರಣದಲ್ಲಿರುವ ಪೀಠೋಪಕರಣ, ಹುಲ್ಲು ಹಾಸು, ಬೃಹದಾಕಾರದ ಕಂಬ, ಸುತ್ತಲೂ ಇರುವ ಕಾಂಪೌಂಡ್, ಈಜುಕೊಳ, ಚಿಕ್ಕ ಸಿನಿಮಾ ಥಿಯೇಟರ್, ಕೊಠಡಿಗಳಿಗೆಲ್ಲ ಹವಾನಿಯಂತ್ರಿತ ವ್ಯವಸ್ಥೆ ಹಾಗೂ ಹಲವು ಬಗೆಯ ಐಷಾರಾಮಿ ವಸ್ತುಗಳನ್ನು ನೋಡಿದ ಅಧಿಕಾರಿಗಳು ಬೆರಗಾಗಿದ್ದರು.

ಅಷ್ಟೇ ಅಲ್ಲ ಜನಾರ್ದನ ರೆಡ್ಡಿ ನಿವಾಸದಲ್ಲಿ ದೊರೆತಿರುವ 30 ಕೆಜಿ ಚಿನ್ನದ ಪೈಕಿ 15 ಕೆಜಿ ತೂಗುವ ವಜ್ರಖಚಿತವಾದ ಸಿಂಹಾಸನದ ಮಾದರಿಯ ಕುರ್ಚಿಯೊಂದು ಸೇರಿದೆ ಎಂದು ಹೇಳಲಾಗುತ್ತಿದ್ದು, ವಿವಿಧ ವಿನ್ಯಾಸದ ವಜ್ರಾಭರಣಗಳಂತೂ ರಾಜ-ಮಹಾರಾಜರ ಕಾಲದ ವೈಭವ ನೆನಪಿಸುವಂತಿದೆ ಎಂದು ಪ್ರಜಾವಾಣಿ ಜತೆ ಮಾತನಾಡಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತೂ ಜನಾರ್ದನ ರೆಡ್ಡಿ ನಿವಾಸದ ವೈಭವ ಕಂಡು ಬೆಕ್ಕಸ ಬೆರಗಾಗಿದ್ದ ಸಿಬಿಐ ಅಧಿಕಾರಿಗಳು ಮಧ್ಯರಾತ್ರಿಯವರೆಗೂ ಆಸ್ತಿಯ ಲೆಕ್ಕಚಾರ ಹಾಕಿ, ಲಭ್ಯ ದಾಖಲೆಗಳನ್ನೆಲ್ಲ ಪರಿಶೀಲಿಸಿ ಮರಳಿದ್ದಾರೆ.

ರಾಜ-ಮಹಾರಾಜರ ಜೀವನಶೈಲಿ:
ದೈನಂದಿನ ಜೀವನಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದ ರೆಡ್ಡಿಯ ವೈಭವೋಪೇತ ಜೀವನವೇ ಅಚ್ಚರಿ ಮೂಡಿಸುವಂತಹದ್ದು. ಹೆಲಿಕಾಪ್ಟರ್, ಐಷಾರಾಮಿ ವಾಹನಗಳಲ್ಲಿ ಸಂಚಾರ, ಹವಾನಿಯಂತ್ರಿತ ಕೊಠಡಿಯಲ್ಲಿ ವಾಸ. ಸಮೃದ್ಧ ಊಟ, ವಿದೇಶಿ ಮೂಲದ ಉತ್ಕೃಷ್ಟ ಮದ್ಯ ಬಳಕೆಯ ಜತೆಗೆ ಐಶ್ವರ್ಯ, ಅಧಿಕಾರ. ಹೀಗೆ ಎಲ್ಲವನ್ನೂ ಒಲಿಸಿಕೊಂಡು ಅನುಭವಿಸಿದ್ದರು. ಬೆನ್ನಹಿಂದೆ ಗನ್ ಮ್ಯಾನ್‌ಗಳನ್ನು ಇಟ್ಟುಕೊಂಡು ಬಳ್ಳಾರಿಯ ಗಣಿ ಸಾಮ್ರಾಜ್ಯ ಆಳಿದ್ದ ರೆಡ್ಡಿ ವೈಭವ ಇದೀಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ರೆಡ್ಡಿಗೆ 10 ವರ್ಷ ಜೈಲು ಸಾಧ್ಯತೆ:
ಜೈಲುಪಾಲಾಗಿರುವ ಜನಾರ್ದನ ರೆಡ್ಡಿ, ಸಿಬಿಐ ಹೆಣೆದಿರುವ ಬಲೆಯಲ್ಲಿ ಸಿಲುಕಿಕೊಂಡರೆ ಜೈಲಿನಿಂದ ಮೇಲೇಳಲು ಕನಿಷ್ಠ 10 ವರ್ಷ ಬೇಕಾಗುತ್ತದೆ. ರೆಡ್ಡಿ ವಿರುದ್ಧ ಸಿಬಿಐ ಹಲವಾರು ಆರೋಪಗಳನ್ನು ದಾಖಲಿಸಿದ್ದು, ಜಾಮೀನು ದೊರೆಯಲು ಸಾಧ್ಯವಾಗದಂತೆ ಬಲವಾದ ಕುಣಿಕೆಯನ್ನು ಹೆಣೆಯುತ್ತಿದೆ. ಒಂದು ವೇಳೆ ರೆಡ್ಡಿ ವಿರುದ್ಧ ಮಾಡಲಾಗಿರುವ ಆರೋಪ ಸಾಬೀತಾದ್ರೆ ಅವರು ಜೈಲಿನಿಂದ ಹೊರಬರಲು ಕನಿಷ್ಠ 10 ವರ್ಷವಾದರೂ ಬೇಕು ಎಂದು ಕಾನೂನುತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಸಿಬಿಐ, ಬಳ್ಳಾರಿ, ಬಂಧನ, ಅಕ್ರಮ ಗಣಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ ಆನ್