ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಸಿಬಿಐ ಬಂಧನ ಭೀತಿ: ಮಾಜಿ ಸಚಿವ ಶ್ರೀರಾಮುಲು ಅಜ್ಞಾತವಾಸ! (Sri ramulu | CBI | Illegal Mining | Janardana Reddy | Bellary | Karnataka News | Bangalore News,)
ಅಕ್ರಮ ಗಣಿಗಾರಿಕೆ, ಗಡಿನಾಶ ಪ್ರಕರಣದಲ್ಲಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಹೈದರಾಬಾದ್ ಚಂಚಲಗುಡ ಜೈಲಿನಲ್ಲಿ ದಿನಕಳೆಯುತ್ತಿದ್ದರೆ, ಮತ್ತೊಂದೆಡೆ ರೆಡ್ಡಿ ಬಂಧನ ಹಿನ್ನೆಲೆಯಲ್ಲಿ ರಾಜೀನಾಮೆ ನಾಟಕ ಮೊಟಕುಗೊಳಿಸಿ ಬಳ್ಳಾರಿಗೆ ಧಾವಿಸಿದ್ದ ಶಾಸಕ ಶ್ರೀರಾಮುಲು, ಬಳ್ಳಾರಿ ಬಂದ್‌ನಲ್ಲೂ ಪಾಲ್ಗೊಳ್ಳದೇ ಮಂಗಳವಾರದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಿಬಿಐ ತಂಡದಿಂದ ಇನ್ನೂ ಕೆಲವರ ಬಂಧನದ ಸಾಧ್ಯತೆ ಸಂದರ್ಭದಲ್ಲೇ ಶ್ರೀರಾಮುಲು ನಾಪತ್ತೆಯಾಗಿರುವುದು ವದಂತಿಗಳಿಗೆ ಕಾರಣವಾಗಿದೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮುಲು ಸೋಮವಾರ ರಾತ್ರಿ ಬಳ್ಳಾರಿಗೆ ಆಗಮಿಸಿದ್ದರು.

ಅಭಿಮಾನಿಗಳ ಜಯಘೋಷ, ಕಾರ್ಯಕರ್ತರ ನಡುವೆ ಬಳ್ಳಾರಿ ಬಂದ್‌ಗೆ ಪ್ರೇರಣೆ ನೀಡಿದರು. ಆದರೆ ಮಂಗಳವಾರದ ಬಂದ್‌ನಲ್ಲಿ ಪಾಲ್ಗೊಳ್ಳದೇ ಅಚ್ಚರಿಮೂಡಿಸಿದರಷ್ಟೇ ಅಲ್ಲ, ಅಂದಿನಿಂದ ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿಲ್ಲ.

ನಂತರ ಜನಾರ್ದನ ರೆಡ್ಡಿ ಭೇಟಿಗೆ ಹೈದರಾಬಾದ್‌ಗೆ ಹೋಗುವುದಾಗಿ ಹೇಳಿದ್ದು, ಶ್ರೀರಾಮುಲು ಅಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅವರಿಗೂ ಬಂಧನದ ಭೀತಿ ಎದುರಾಗಿದೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಬಂಧನ ಭೀತಿ, ಹಲವರು ನಾಪತ್ತೆ:
ಸಿಬಿಐ ತಂಡ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್ಡಿ ಆಪ್ತರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಸಿಬಿಐನವರು ಎಲ್ಲ ದಾಖಲೆ ಒಯ್ದು ಪರಿಶೀಲನೆ ನಡೆಸಿರುವುದರಿಂದ ಗಣಿ ಅಕ್ರಮದ ಭಾಗವಾದವರ ಇನ್ನೂ ಹಲವರ ಬಂಧನ ಯಾವುದೇ ಸಂದರ್ಭದಲ್ಲಿ ಆಗಬಹುದು ಎನ್ನಲಾಗಿದೆ. ಆ ನಿಟ್ಟಿನಲ್ಲಿ ಅಕ್ರಮದ ಬಗ್ಗೆ ಸಂಬಂಧಿಗಳ ಚಿಂತೆ ಮತ್ತಷ್ಟು ಹೆಚ್ಚಿದ್ದು, ಆ ಸಂಬಂಧಿಗಳ ಪೈಕಿ ಕೆಲವರು ಈಗಾಗಲೇ ಊರು ತೊರೆದಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಶ್ರೀರಾಮುಲು, ಸಿಬಿಐ, ಅಕ್ರಮ ಗಣಿ, ಜನಾರ್ದನ ರೆಡ್ಡಿ, ಬಳ್ಳಾರಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ್ನ