ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಛೇ...ಕೋರ್ಟ್‌ಗೆ ಹೆದರಿಲ್ಲ, ವಕೀಲರು ಬೇಡ ಅಂದ್ರು: ಕುಮಾರಸ್ವಾಮಿ (Kumaraswamy | Anitha kumarawamy | Lokayukta | High court | Karnataka News | Bangalore News,)
Kumaraswamy
PR
'ನಾನು ಕಾನೂನು ಚೌಕಟ್ಟು ಮೀರಿ ನಡೆದುಕೊಂಡಿಲ್ಲ. ಆದರೆ ಬಂಧನದ ಭೀತಿಯಿಂದ ಕೋರ್ಟ್‌ಗೆ ಕುಮಾರಸ್ವಾಮಿ ಗೈರುಹಾಜರಾಗಿದ್ದಾರೆ ಎಂಬ ಮಾಧ್ಯಮಗಳ ವಿಶ್ಲೇಷಣೆಯಿಂದ ತುಂಬಾ ನೋವಾಗಿದೆ. ನಾನೇನು ಬಂಧನದ ಭೀತಿಯಿಂದ ಹಾಗೆ ಮಾಡಿಲ್ಲ. ಯಾಕೆಂದರೆ ನಾನು ನನ್ನ ವಕೀಲರ ಸಲಹೆ ಮೇರೆಗೆ ಆ ರೀತಿ ಮಾಡಬೇಕಾಯಿತು ಎಂದು ವಕೀಲರ ಮೇಲೆ ಗೂಬೆಕೂರಿಸಿದರು'...ಇದು ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣ ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಜಾಯಿಷಿ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣ ಹಾಗೂ ವಿಶ್ವಭಾರತಿ ಸೊಸೈಟಿಗೆ ನೆರವು ಪ್ರಕರಣದಲ್ಲಿ ಕುಮಾರಸ್ವಾಮಿ ಮತ್ತು ಪತ್ನಿ, ಶಾಸಕಿ ಅನಿತಾಕುಮಾರಸ್ವಾಮಿ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಅನಾರೋಗ್ಯದ ನೆಪವೊಡ್ಡಿ ಪದೇ, ಪದೇ ಗೈರುಹಾಜರಾಗಿದ್ದರಿಂದ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದರು.

ಏತನ್ಮಧ್ಯೆ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಕುಮಾರಸ್ವಾಮಿ ದಂಪತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಈ ಹಿನ್ನೆಲೆಯಲ್ಲಿ ಕೊನೆಗೂ ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದು, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತ್ತು.

ನ್ಯಾಯಾಲಯದ ಕಲಾಪದ ನಂತರ ಲೋಕಾಯುಕ್ತ ಕೋರ್ಟ್ ಬಳಿ ಸುದ್ಧಿಗಾರರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಲೋಕಾಯುಕ್ತ ಕೋರ್ಟ್ ನೀಡಿರುವ ಸಮನ್ಸ್ ಪರಿಗಣಿಸಿ ಖುದ್ದು ಹಾಜರಾಗಬೇಕೆಂಬುದು ನನ್ನ ವೈಯಕ್ತಿಕ ಇಚ್ಛೆಯಾಗಿತ್ತು. ಆದರೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಯ ನಿಟ್ಟಿನಲ್ಲಿ ಕಾನೂನು ಅವಕಾಶ ಉಪಯೋಗಿಸಿಕೊಳ್ಳುವುದು ಉತ್ತಮ ಎಂಬ ಸಲಹೆಯನ್ನು ನನ್ನ ವಕೀಲರು ನೀಡಿದ್ದರು. ಹಾಗಾಗಿ ನಾನು ನನ್ನ ವಕೀಲರ ಸಲಹೆಗೆ ಸ್ಪಂದಿಸಬೇಕಾಗಿದ್ದು ನನ್ನ ಕರ್ತವ್ಯವಾಗಿತ್ತು ಎಂದರು.

ನ್ಯಾಯಾಲಯಗಳ ಬಗ್ಗೆ ನನಗೆ, ಕುಟುಂಬಕ್ಕೆ ಅಪಾರವಾದ ಗೌರವವಿದೆ. ಆದರೆ ಮಾಧ್ಯಮಗಳಲ್ಲಿ ಕುಮಾರಸ್ವಾಮಿ ದಂಪತಿ ಬಂಧನದ ಭೀತಿಯಿಂದ ಗೈರುಹಾಜರಾಗಿದ್ದಾರೆಂದು ಪ್ರಸಾರ ಮಾಡಿರುವುದು ನನಗೆ ತುಂಬಾ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಲೋಕಾಯುಕ್ತ, ಹೈಕೋರ್ಟ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ