ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಏನಿದರ ಗುಟ್ಟು ಗೊತ್ತಾ?: ರೆಡ್ಡಿ ನಿವಾಸದ ಎದುರು ಬೃಹತ್ ಗೋಡೆ! (Janardana Reddy | CBI | Bellary | Illegal Mining | Karnataka News | Bangalore News,)
ಅಕ್ರಮ ಗಣಿ, ಗಡಿನಾಶ ಆರೋಪದಲ್ಲಿ ಬಳ್ಳಾರಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಸಿಬಿಐ ಬಂಧನಕ್ಕೊಳಗಾಗಿ ಹೈದರಾಬಾದ್ ಚಂಚಲಗುಡ ಜೈಲು ಸೇರುವಂತಾಗಲು ಕಾರಣ ವಾಸ್ತು ದೋಷವಂತೆ. ಅದಕ್ಕಾಗಿಯೇ ರೆಡ್ಡಿ ಕುಟೀರ ನಿವಾಸದೆದುರು ಗೋಡೆ ನಿರ್ಮಾಣ ಮಾಡಲಾಗುತ್ತಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಳ್ಳಾರಿಯ ಜನಾರ್ದನ ರೆಡ್ಡಿಯ ವೈಭವೋಪೇತ ಕುಟೀರ ನಿವಾಸದ ಎದುರು ಭಾಗದಲ್ಲಿ ಹಲವು ಅಡಿ ಎತ್ತರದ ಗೋಡೆ ಕಟ್ಟಲಾಗುತ್ತಿದೆ. ಕುಟೀರ ನಿವಾಸದ ಆಗ್ನೇಯ ದಿಕ್ಕಿನಲ್ಲಿ ಬಾಗಿಲಿದ್ದು, ಅದರಿಂದಲೇ ಸಿಬಿಐ ಪ್ರವೇಶ ಮಾಡಿ ಜನಾರ್ದನ ರೆಡ್ಡಿಯವರನ್ನು ಬಂಧಿಸಲಾಗಿತ್ತು. ಇದಕ್ಕೆ ವಾಸ್ತು ದೋಷ ಕಾರಣ ಎಂದು ಜ್ಯೋತಿಷಿಗಳು ನುಡಿದಿದ್ದಾರಂತೆ!

ಆದರೆ ಮತ್ತೊಂದೆಡೆ ಇದು ನೂರಕ್ಕೆ ನೂರರಷ್ಟು ಸುಳ್ಳು ಸುದ್ದಿ ಎನ್ನಲಾಗುತ್ತಿದೆ. ಜನಾರ್ದನ ರೆಡ್ಡಿ ಕುಟೀರ ನಿವಾಸದ ಎದುರು ಗೋಡೆ ನಿರ್ಮಿಸುತ್ತಿರುವುದು ವಾಸ್ತು ದೋಷ ನಿವಾರಣೆಗಾಗಿ ಅಲ್ಲ, ಮಾಧ್ಯಮದವರ ಕಾಟ ತಪ್ಪಿಸಿಕೊಳ್ಳಲು.

ಸಿಬಿಐ ದಾಳಿ, ಕುಟೀರ ನಿವಾಸದ ವೈಭವ, ಚಿನ್ನದ ಸಿಂಹಾಸನ, ಮನೆಯ ಆವರಣದಲ್ಲಿನ ಈಜುಕೊಳ ಎಲ್ಲವೂ ಈಗಾಗಲೇ ಟಿವಿ ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ಬಟಾಬಯಲಾಗಿದೆ.

ಹಾಗಾಗಿಯೇ ಮಾಧ್ಯಮದವರು ಮನೆಯ ಚಿತ್ರೀಕರಣ ಮಾಡದಂತೆ ಮನೆಯ ಮುಂಭಾಗ ಗೋಡೆ ಕಟ್ಟಿಸುತ್ತಿದ್ದಾರೆಂದು ಊಹಾಪೋಹ ಹಬ್ಬಿದೆ. ಆ ನಿಟ್ಟಿನಲ್ಲಿ ಕುಟೀರ ಮುಖ್ಯಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಗೋಡೆ ಕಟ್ಟುತ್ತಿರುವುದು ವಾಸ್ತು ದೋಷ ನಿವಾರಣೆಗಾಗಿಯೋ ಅಥವಾ ಮಾಧ್ಯಮದವರ ಕಾಟ ತಪ್ಪಿಸಿಕೊಳ್ಳಲೋ ಊಹೆ ನಿಮಗೆ ಬಿಟ್ಟಿದ್ದು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಸಿಬಿಐ, ಬಳ್ಳಾರಿ, ಅಕ್ರಮ ಗಣಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ ಆನ್ಲೈನ್ ನ