ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಜನಾರ್ದನ ರೆಡ್ಡಿ ಗೂಂಡಾಗಿರಿ; 1ಸಾವಿರ ಕೋಟಿ ಗಣಿಕಪ್ಪ ವಸೂಲಿ (Janardhan Reddy | CBI | Illegal Mining | Bellary | private royalties | Karnataka News | Bangalore News,)
Janardana Reddy
PR
ಹೈದರಾಬಾದ್ ಚಂಚಲಗುಡ ಜೈಲು ಸೇರಿರುವ ಬಳ್ಳಾರಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಐಶಾರಾಮಿ ಜೀವನ, ಗೂಂಡಾಗಿರಿ ಹಾಗೂ ತಮ್ಮ ಸಹ ಗಣಿಮಾಲೀಕರಿಂದ ರೆಡ್ಡಿ ವಸೂಲಿ ಮಾಡಿ, ಮಾಮೂಲು ಚಕ್ರಾಧಿಪತ್ಯವನ್ನೇ ಸ್ಥಾಪಿಸಿರು ಅಂಶ ಸೇರಿದಂತೆ ಎಲ್ಲವೂ ಇದೀಗ ಒಂದೊಂದಾಗಿಯೇ ಬಯಲಿಗೆ ಬರತೊಡಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಳ್ಳಾರಿಯನ್ನು ಪ್ರತ್ಯೇಕ ರಾಜ್ಯ ಎಂಬಂತೆ ಮಾಡಿಕೊಂಡಿದ್ದ ರೆಡ್ಡಿ ಬ್ರದರ್ಸ್ ಅಂಡ್ ಕಂಪನಿ ಕಳೆದ ಮೂರು ವರ್ಷಗಳಲ್ಲಿ ಇತರೆ ಗಣಿ ಮಾಲೀಕರಿಂದ ಸುಮಾರು 1000 ಸಾವಿರ ಕೋಟಿ ರೂಪಾಯಿಯಷ್ಟು ಗಣಿ ಕಪ್ಪವನ್ನು ಪಡೆದಿರುವುದಾಗಿ ಸಿಬಿಐ ತಿಳಿಸಿದೆ.

ಅಕ್ರಮ ಗಣಿ, ಗಡಿನಾಶ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ್ ರೆಡ್ಡಿಯನ್ನು ಒಂದು ವಾರಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದ ಸಂದರ್ಭದಲ್ಲಿ ವಿಚಾರಣೆ ನಡೆಸಿದಾಗ ಸಿಬಿಐ ಅಧಿಕಾರಿಗಳಿಗೆ ಲಭ್ಯವಾಗಿರುವ ಮಾಹಿತಿಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಾಮೂಲಿ ರಾಜ್ ರೆಡ್ಡಿಯ ಓಬಳಾಪುರಂ ಮೈನಿಂಗ್ ಕಂಪನಿಗೆ ಸುಮಾರು 300 ಗಣಿ ಮಾಲೀಕರು ಗಣಿಕಪ್ಪವನ್ನು ಸಲ್ಲಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ ಗಣಿ ಮಾಲೀಕರಿಗೆ ರೆಡ್ಡಿ, ನಿಮಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಮಾತ್ರವಲ್ಲ, ನವದೆಹಲಿಯಲ್ಲೂ ಕೆಲಸಗಳನ್ನು ಮಾಡಿಸಿಕೊಡಬಲ್ಲೆ ಎಂದು ಹೇಳುತ್ತಿದ್ದರೆನ್ನಲಾಗಿದೆ.


ಹೀಗಾಗಿಯೇ ಒಂದು ಟನ್ ಕಬ್ಬಿಣದ ಅದಿರಿಗೆ ಮಾರುಕಟ್ಟೆ ಬೆಲೆ 5 ಸಾವಿರ ರೂಪಾಯಿ ಇದ್ದರೆ, ಅದನ್ನು ಶೇ.70ರಷ್ಟು ಅದಿರನ್ನು ಟನ್‌ಗೆ 700 ರೂಪಾಯಿಯಂತೆ ತಮ್ಮ ಓಎಂಸಿ ಕಂಪನಿಗೆ ಇತರ ಸಣ್ಣಪುಟ್ಟ ಗಣಿ ಮಾಲೀಕರು ಮಾರಬೇಕಾಗಿತ್ತು! ಇದನ್ನು 70-30 ವ್ಯವಹಾರ ಎನ್ನಲಾಗುತ್ತಿತ್ತು.

ಹೀಗೆ ವಹಿವಾಟು ನಡೆಸಿದ್ದಲ್ಲದೇ ರೆಡ್ಡಿ 2007ರಿಂದ 2010ರ ಅವಧಿಯಲ್ಲಿ ಸುಮಾರು 1000 ಕೋಟಿ ರೂಪಾಯಿ ಗಣಿ ಕಪ್ಪ ಪಡೆದಿದ್ದರು. ಅಲ್ಲದೇ ಕಡಿಮೆ ಬೆಲೆಗೆ ಖರೀದಿಸಿದ ಕಬ್ಬಿಣದ ಅದಿರನ್ನು ಚೀನಾ ಹಾಗೂ ಇತರ ವಿದೇಶದಲ್ಲಿನ ಸಂಸ್ಥೆಗಳಿಗೆ ಮಾರಾಟ ಮಾಡಿ ಭರ್ಜರಿ ಲಾಭ ಗಳಿಸಿದ್ದರು.

ಒಟ್ಟಾರೆ ರಾಜಕೀಯ ಪಡಸಾಲೆಯಲ್ಲಿ ಪವರ್ ಫುಲ್ ಸಚಿವರಾಗಿದ್ದ ರೆಡ್ಡಿ ಸಹೋದರರ ದಬ್ಬಾಳಿಕೆ, ಮಾಮೂಲಿ ಬಗ್ಗೆ, ಕಡಿಮೆ ಬೆಲೆಗೆ ಅದಿರು ನೀಡುತ್ತಿರುವ ಕುರಿತು ಧ್ವನಿ ಎತ್ತಲು ಹಿಂದೇಟು ಹಾಕಿದ್ದರು. ಆದರೆ ಇದೀಗ ಅಂತಹವರು ಸಿಬಿಐ ಸಾಕ್ಷಿಗಳಾಗುವ ಮೂಲಕ ರೆಡ್ಡಿ ಗಣಿ ಕುಣಿಕೆ ಉರುಳು ಮತ್ತಷ್ಟು ಬಿಗಿಯಾಗಲಿದೆ. ಸಿಬಿಐ ಈ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗುವುದೋ ಇಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ ಅಷ್ಟೇ.

ವಿದೇಶಗಳಲ್ಲಿ ಹೂಡಿಕೆ:
ಆರು ದೇಶಗಳಲ್ಲಿ ವ್ಯವಹಾರ ಹೊಂದಿರುವ ಜನಾರ್ದನ ರೆಡ್ಡಿ ನಾಲ್ಕು ದೇಶಗಳಲ್ಲಿ ರಫ್ತು ಏಜೆನ್ಸಿ ಮತ್ತು 2 ದೇಶಗಳಲ್ಲಿ ಕಬ್ಬಿಣದ ಗಣಿಗಾರಿಕೆ ಲೀಸ್ ಪಡೆದು ಬಳ್ಳಾರಿಯ ಅಕ್ರಮ ಗಣಿಯಿಂದ ಸಂಪಾದಿಸಿದ ಭಾರಿ ಮೊತ್ತದ ಹಣ ಆರು ದೇಶಗಳಲ್ಲಿ ಹೂಡಿದ್ದಾರೆ. ಚೀನಾ, ಸಿಂಗಾಪೂರ್, ದುಬೈ, ವಿಯೆಟ್ನಾಮ್ ದೇಶಗಳಲ್ಲಿ ರಫ್ತು ಆಧಾರಿತ ಏಜೆನ್ಸಿಗಳನ್ನು ಸ್ಥಾಪಿಸಿದ್ದಾರೆ. ಜಿಜೆಆರ್(ಗಾಲಿ ಜನಾರ್ದನ ರೆಡ್ಡಿ) ಕಂಪನಿ ಹೆಸರಿನಲ್ಲಿ ಇಂಡೋನೇಷಿಯಾ, ಕಂಪೂಚಿಯಾ ದೇಶಗಳಲ್ಲಿ ಕಬ್ಬಿಣ ಗಣಿಗಾರಿಕೆ ನಿರ್ವಹಿಸುತ್ತಿರುವುದು ತನಿಖೆಯಿಂದ ಪತ್ತೆಯಾಗಿದೆ.

ಇದಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಬ್ಬಿಣದ ಅದಿರು ಬೆಲೆ ಉತ್ತಮವಾಗಿರುವಾಗ ದೇಶದಿಂದ ಕಡಿಮೆ ಬೆಲೆಗೆ ಅದಿರು ಮಾರಾಟ ಮಾಡಿರುವುದಾಗಿ ದಾಖಲೆ ತೋರಿಸಲು ಜನಾರ್ದನ ರೆಡ್ಡಿ ಸ್ವತ ತಾವೇ ವಿದೇಶದಲ್ಲಿ ಕೆಲವು ಆಮದು ಸಂಸ್ಥೆಗಳನ್ನು ಆರಂಭಿಸಿದ್ದಾರೆ. ಇದರಲ್ಲಿ ಕೆಲವು ರೆಡ್ಡಿ ಹೆಸರಿನಲ್ಲಿದ್ದರೆ, ಇನ್ನು ಕೆಲವು ಪತ್ನಿಯ ಹೆಸರಿನಲ್ಲಿರುವುದು ದಾಖಲೆಯಿಂದ ಖಚಿತವಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಸಿಬಿಐ, ಅಕ್ರಮ ಗಣಿ, ಗಣಿ ಕಪ್ಪ, ಬಳ್ಳಾರಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕರ್ನಾಟಕ