ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
 
ಜಾಗ್ವಾರ್ ಕಂಪೆನಿ ವಶಕ್ಕೆ ಟಾಟಾ ಸಿದ್ದತೆ
ಕಳೆದ ವರ್ಷ ಆಂಗ್ಲೋ-ಡಚ್ ಉಕ್ಕು ಉತ್ಪಾದನಾ ಕಂಪೆನಿಯಾದ ಕೋರಸ್‌ನ್ನು 13 ಬಿಲಿಯನ್ ಡಾಲರ್‌ಗಳ ಖರೀದಿಸಿದ ಟಾಟಾ ಗ್ರುಪ್ ಇಂಗ್ಲೆಂಡ್‌ನಲ್ಲಿರುವ ಲ್ಯಾಂಡ್ ರೋವರ್ ಮತ್ತು ಜಾಗ್ವಾರ್ ಉತ್ಪನ್ನಗಳನ್ನು ಖರೀದಿಸಲು ಸಿದ್ದತೆ ನಡೆಸಿದೆ.

ಬ್ರಿಟನ್ ದೇಶದ ಜನಪ್ರಿಯ ಉತ್ಪನ್ನಗಳಾದ ಲ್ಯಾಂಡ್ ರೋವರ್ ಮತ್ತು ಜಾಗ್ವಾರ್‌ಗಳನ್ನು ಫೋರ್ಡ್ ಕಂಪೆನಿ ಮಾರಾಟ ಮಾಡಲು ಉದ್ದೇಶಿಸಲಾಗಿದ್ದು ಅವುಗಳನ್ನು ಖರೀದಿಸಲು, ತಮ್ಮ ಕಂಪೆನಿ ಷೇರು ಅಮೆರಿಕದ ಜೆಪಿ ಮೊರ್ಗಾನ್ ಬ್ಯಾಂಕ್‌ ಷೇರುಗಳೊಂದಿಗೆ ಟಾಟಾ ಗ್ರುಪ್ ಮುಖ್ಯಸ್ಥ ರತನ್ ಟಾಟಾ ಸಿದ್ದರಾಗಿದ್ದಾರೆ ಎಂದು ಟಾಟಾ ಮೂಲಗಳು ತಿಳಿಸಿವೆ.

ಎರಡನೇ ಹಂತದ ಹರಾಜು ಪ್ರಕ್ರಿಯೇ ನಾಳೆ ನಡೆಯಲಿದ್ದು ಆರು ಕಂಪೆನಿಗಳು ಆಸಕ್ತಿ ವಹಿಸಿದ್ದು, ಅಂತಿಮವಾಗಿ ಎರಡು ಕಂಪೆನಿಗಳು ಹರಾಜಿನಲ್ಲಿ ಪೈಪೋಟಿ ನಡೆಸಬಹುದು ಎಂದು ಫೋರ್ಡ್ ಕಂಪೆನಿ ಮೂಲಗಳು ತಿಳಿಸಿವೆ.

ರತನ್ ಟಾಟಾ ನೇತ್ರತ್ವದಲ್ಲಿ ಟಾಟಾ ಗ್ರುಪ್ ಹರಾಜಿನಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ ಎಂದು ವಹಿವಾಟಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಖರೀದಿಸಲು ಇಚ್ಚಿಸುವ ಖರೀದಿದಾರರು ಲ್ಯಾಂಡ್ ರೋವರ್ ಹಾಗೂ ಜಾಗ್ವಾರ್ ಕಂಪೆನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾರ್ಚ್ ತಿಂಗಳಲ್ಲಿ ಮಾರಾಟವಾಗುವ ಜಾಗ್ವಾರ್ ಎಕ್ಸ್‌ಎಫ್ ನೂತನ ಮಾಡೆಲ್‌ನ್ನು ವಿಕ್ಷೀಸಿ ಖರೀದಿಗೆ ಸಿದ್ದರಾಗುತ್ತಿದ್ದಾರೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಮತ್ತಷ್ಟು
ಸೂಚ್ಯಂಕದಲ್ಲಿ ಭಾರಿ ಏರಿಕೆ
ಭಾರತ, ಕತಾರ್‌ಗೆ ಹೆಚ್ಚಿನ ಎಲ್‌ಎನ್‌ಜಿ : ದಿಯೋರಾ
ತೈಲ ಬೆಲೆಗಳಲ್ಲಿ ಭಾರಿ ಏರಿಕೆ
ಷೇರು ಪೇಟೆಗೆ ಹೂಡಿಕೆದಾರರ ಲಗ್ಗೆ
ಮೆರಿಲ್: ವಿಲೀನ ವಿವಾದದ ಸುಳಿಯಲ್ಲಿ
ವಹಿವಾಟು ವಿಸ್ತರಣೆಗೆ ಟಾಟಾ ಆದ್ಯತೆ