ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
 
ಮೂಲಸೌಕರ್ಯ ಯೋಜನೆಗಳ ಶೀಘ್ರ ಜಾರಿ ಅಗತ್ಯ-ಪಿಎಂ
ಮೂಲಸೌಕರ್ಯ ಯೋಜನೆಯ ಕ್ಷೇತ್ರಗಳಾದ ವಿದ್ಯುತ್, ದೂರವಾಣಿ, ರಸ್ತೆ, ಮತ್ತು ರೈಲು ಸೇವೆಗಳ ಯೋಜನೆಗಳನ್ನು ಶ್ರೀಘ್ರವಾಗಿ ಜನತೆಯ ಉಪಯೋಗಕ್ಕೆ ತಲುಪಿಸುವಂತಹ ಕಾರ್ಯಗಳ ಪರಿಶೀಲನೆ ನಡೆಸಬೇಕು ಎಂದು ಪ್ರಧಾನಿ ಡಾ. ಮನಮೋಹನ್‌ ಸಿಂಗ್ ಆದೇಶಿಸಿದ್ದಾರೆ.

ಮೂಲಸೌಕರ್ಯಗಳ ಸಮಿತಿಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೂಲಸೌಕರ್ಯಗಳನ್ನು ಜನತೆಗೆ ತಲುಪಿಸುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ ಕುರಿತು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೂಲಸೌಕರ್ಯ ಯೋಜನೆಯ ಕ್ಷೇತ್ರಗಳಾದ ವಿದ್ಯುತ್, ದೂರವಾಣಿ, ರಸ್ತೆ, ಮತ್ತು ರೈಲು ಸೇವೆಗಳ ಯೋಜನೆಗಳ ಅಭಿವೃದ್ಧಿಯನ್ನು ಪರಿಶೀಲನೆ ನಡೆಸಬೇಕು ಎಂದು ಸಮಿತಿಗೆ ನಿರ್ದೆಶನ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.

ಸಾಚಾರ ಸಮಿತಿಯ ವರದಿಯನ್ನು ಅನುಷ್ಠಾನಕ್ಕೆ ತರಲು ಮುಸ್ಲಿಂ ನಾಯಕರ ಸಭೆಯನ್ನು ಕರೆದು ರಾಷ್ಟ್ರೀಯ ಸಾಮಾನ್ಯ ಕನಿಷ್ಟ ಕಾರ್ಯಕ್ರಮದನ್ವಯ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಿದರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಸಹಕಾರ ಕ್ಷೇತ್ರದ ವೈದ್ಯನಾಥನ್ ವರದಿ,ರಾಧಾಕೃಷ್ಣ ಸಮಿತಿಯ ಕೃಷಿ ವರದಿಯ ಅನುಷ್ಠಾನ ಪ್ರಗತಿ ಕುರಿತಂತೆ ಪ್ರಧಾನಿ ಪರಿಶೀಲನಾ ಸಭೆಯನ್ನು ನಡೆಸಿದರು.


ಮತ್ತಷ್ಟು
ದೀಪಾವಳಿ: ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ
ಜಾಗ್ವಾರ್ ಕಂಪೆನಿ ವಶಕ್ಕೆ ಟಾಟಾ ಸಿದ್ದತೆ
ಸೂಚ್ಯಂಕದಲ್ಲಿ ಭಾರಿ ಏರಿಕೆ
ಭಾರತ, ಕತಾರ್‌ಗೆ ಹೆಚ್ಚಿನ ಎಲ್‌ಎನ್‌ಜಿ : ದಿಯೋರಾ
ತೈಲ ಬೆಲೆಗಳಲ್ಲಿ ಭಾರಿ ಏರಿಕೆ
ಷೇರು ಪೇಟೆಗೆ ಹೂಡಿಕೆದಾರರ ಲಗ್ಗೆ