ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
 
ಆರ್ಥಿಕ ಸಹಕಾರ: ಭಾರತ, ಒಮನ್ ಚರ್ಚೆ
ಭಾರತ ಮತ್ತು ಒಮನ್ ದೇಶಗಳು ಪರಸ್ಪರ ಆರ್ಥಿಕ ಸಹಕಾರವನ್ನು ಎಲ್ಲ ಕ್ಷೇತ್ರಗಳಲ್ಲಿ ಇನ್ನಷ್ಟು ಬಲಗೊಳಿಸಲು ನಿರ್ಧರಿಸಿದ್ದು, ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಚರ್ಚೆಆರಂಭಿಸಿವೆ.

ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಒಮನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಮನ್‌ನಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಚರ್ಚೆ ನಡೆಸಲಾಗುವುದು ಎಂದು ಒಮನ್ ಸಚಿವ ಸಯ್ಯದ್ ಫಾದ್ ಬಿನ್ ಮೊಹಮ್ಮದ್ ಅಲ್ ತಿಳಿಸಿದ್ದಾರೆ.

ಉಭಯ ದೇಶಗಳು ಪರಸ್ಪರ ಸಹಕಾರವನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿವೆ. ಐತಿಹಾಸಿಕ ದ್ವಿಪಕ್ಷಿಯ ಸಂಬಂಧಗಳನ್ನು ಹೆಚ್ಚಿಸುವುದರೊಂದಿಗೆ ಸಾಂಸ್ಕ್ರತಿಕ ಪರಂಪರೆಗಳನ್ನು ಗೌರವಿಸಿದಂತಾಗುತ್ತದೆ ಎಂದು ಒಮನ್‌ನಲ್ಲಿರುವ ಭಾರತದ ರಾಯಭಾರಿ ಅನಿಲ್ ವಾದ್ವಾ ತಿಳಿಸಿದ್ದಾರೆ.

ಉಭಯ ದೇಶಗಳ ನಡುವೆ ಕಾರ್ಮಿಕರ ಏಳಿಗೆಗಾಗಿ ತಿಳುವಳಿಕೆ ಪತ್ರ ಒಪ್ಪಂದ ಅಂಗೀಕಾರಕ್ಕೆ ಸಿದ್ದತೆ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಒಮನ್ ಸಚಿವ ಸಯ್ಯದ್ ಫಾದ್ ಬಿನ್ ಮೊಹಮ್ಮದ್ ಅಲ್ ಡಿಸೆಂಬರ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಂತಿಮಗೊಳ್ಳಲಿದೆ ಎಂದು ವಾದ್ವಾ ತಿಳಿಸಿದ್ದಾರೆ.
ಮತ್ತಷ್ಟು
ಮೂಲಸೌಕರ್ಯ ಯೋಜನೆಗಳ ಶೀಘ್ರ ಜಾರಿ ಅಗತ್ಯ-ಪಿಎಂ
ದೀಪಾವಳಿ: ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ
ಜಾಗ್ವಾರ್ ಕಂಪೆನಿ ವಶಕ್ಕೆ ಟಾಟಾ ಸಿದ್ದತೆ
ಸೂಚ್ಯಂಕದಲ್ಲಿ ಭಾರಿ ಏರಿಕೆ
ಭಾರತ, ಕತಾರ್‌ಗೆ ಹೆಚ್ಚಿನ ಎಲ್‌ಎನ್‌ಜಿ : ದಿಯೋರಾ
ತೈಲ ಬೆಲೆಗಳಲ್ಲಿ ಭಾರಿ ಏರಿಕೆ