ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
 
ನೋಂದಣಿರಹಿತ ಸಂಸ್ಥೆಗಳಿಂದ ಹಣದ ಒಳಹರಿವು: ಚಿದಂಬರಂ
ಷೇರುಪೇಟೆಯಲ್ಲಿ ನೋಂದಾವಣಿರಹಿತ ಸಂಸ್ಥೆಗಳಿಂದ ಹಣದ ಒಳಹರಿವು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.

ನೋಂದಣಿರಹಿತ ಸಂಸ್ಥೆಗಳಿಂದ ಹಣದ ಒಳಹರಿವು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು,ವಿಶೇಷವಾಗಿ ಕಾನೂನು ವ್ಯಾಪ್ತಿಯಿಂದ ಹೊರಗಿರುವ ಅನಿಯಂತ್ರಿತ ಮೂಲಗಳಿಂದ ಷೇರುಪೇಟೆಗೆ ಬರುವ ಹಣದ ಒಳಹರಿವು ಚಿಂತನೆಗೆ ಕಾರಣವಾಗಿದ್ದು, ನೋಂದಾಯಿತ ಸಂಸ್ಥೆಗಳು ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಸ್ವಾಗತವಿದೆ ಎಂದು ಅಮೆರಿಕ-ಭಾರತ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನೋಂದಣಿರಹಿತ ಹೂಡಿಕೆದಾರರು ಪಾರ್ಟಿಸಿಪೆಟರಿ ಪತ್ರದ ಮೂಲಕ ಷೇರುಪೇಟೆಯಲ್ಲಿ ಹಣಹೂಡಿಕೆ ಮಾಡುತ್ತಿರುವುದಕ್ಕೆ ಷೇರುಪೇಟೆ ನಿಯಂತ್ರಣ ಸಂಸ್ಥೆ ಸೆಬಿ ಕಠಿಣ ನಿಯಮಗಳನ್ನು ಜಾರಿಗೆ ತಂದಿರುವುದು ಸೂಕ್ತವಾಗಿದೆ ಎಂದರು.

ಈಗಾಗಲೇ ಸಾವಿರಕ್ಕೂ ಹೆಚ್ಚಿನ ದಾಖಲೆಗಳು ನೋಂದಣಿಗಾಗಿ ಸೆಬಿ ಕಚೇರಿಯಲ್ಲಿದ್ದು ಸರಳವಾಗಿ ಮತ್ತು ವೇಗವಾಗಿ ನೊಂದಣಿ ಮಾಡಲಾಗುವುದು ಎಂದು ಚಿದಂಬರಂ ಹೇಳಿದ್ದಾರೆ.
ಮತ್ತಷ್ಟು
ಆರ್ಥಿಕ ಸಹಕಾರ: ಭಾರತ, ಒಮನ್ ಚರ್ಚೆ
ಮೂಲಸೌಕರ್ಯ ಯೋಜನೆಗಳ ಶೀಘ್ರ ಜಾರಿ ಅಗತ್ಯ-ಪಿಎಂ
ದೀಪಾವಳಿ: ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ
ಜಾಗ್ವಾರ್ ಕಂಪೆನಿ ವಶಕ್ಕೆ ಟಾಟಾ ಸಿದ್ದತೆ
ಸೂಚ್ಯಂಕದಲ್ಲಿ ಭಾರಿ ಏರಿಕೆ
ಭಾರತ, ಕತಾರ್‌ಗೆ ಹೆಚ್ಚಿನ ಎಲ್‌ಎನ್‌ಜಿ : ದಿಯೋರಾ