ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಏರಿಕೆ ಆತಂಕಕಾರಿ: ಪ್ರಧಾನಿ ಸಿಂಗ್
ಬೆಲೆ ಏರಿಕೆಯು ಸರಕಾರದ ಅತಿ ದೊಡ್ಡ ಆತಂಕದ ವಿಚಾರವಾಗಿದ್ದು, ಉತ್ಪಾದಕತೆಯನ್ನು ಹೆಚ್ಚಿಸುವುದೇ ಇದರ ಶಮನಕ್ಕಿರುವ ದಾರಿಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸೇಲಂನ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಸಿಂಗ್, ಗಗನಕ್ಕೇರುತ್ತಿರುವ ಬೆಲೆಯನ್ನು ಹತೋಟಿಗೆ ತರಲು ಸರಕಾರವು ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಹಣದುಬ್ಬರ ನಿಯಂತ್ರಣ ಕ್ರಮಗಳು ದೇಶದ ಅಭಿವೃದ್ಧಿ ಚಲನೆಗೆ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಹನ್ನೊಂದನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತದ ಆರ್ಥಿಕತೆಯು ಸುಮಾರು ಶೇ.ಒಂಭತ್ತರಷ್ಟು ಏರಿಕೆಗೊಳ್ಳುವ ನಿರೀಕ್ಷೆ ಇದ್ದು, ಇದಕ್ಕಾಗಿ ಉತ್ಪಾದಕತೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಿಂಗ್ ಹೇಳಿದ್ದಾರೆ.

ಏತನ್ಮಧ್ಯೆ, ದೇಶವನ್ನು ಕೈಗಾರೀಕರಣದತ್ತ ಕೊಂಡೊಯ್ಯುವಲ್ಲಿ ಭಾರತೀಯ ಸ್ಟೀಲ್ ಪ್ರಾಧಿಕಾರದ(ಎಸ್ಎಐಎಲ್) ಪಾತ್ರವು ಪ್ರಮುಖವಾಗಿದೆ ಎಂದು ನುಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಾಗತಿಕ ಸ್ಟೀಲ್ ಮಾರುಕಟ್ಟೆಯಲ್ಲಿ ನೂತನ ಸವಾಲುಗಳನ್ನು ಎದುರಿಸಲು ಮತ್ತು ದೇಶದ ಆರ್ಥಿಕತೆಯನ್ನು ವೃದ್ಧಿಸಲು ಎಸ್ಎಐಎಲ್ ಶಕ್ತವಾಗಿದೆ ಎಂದಿದ್ದಾರೆ.
ಮತ್ತಷ್ಟು
ಭಾರತದ ಐಟಿ ಅಭಿವೃದ್ಧಿ ಮುಂದುವರಿಯಲಿದೆ: ನಾರಾಯಣಮೂರ್ತಿ
ಐಸಿಐಸಿಐ, ಕಿಂಗ್‌ಫಿಶರ್, ತಾಜ್ ಉನ್ನತ ಬ್ರಾಂಡ್‌ಗಳು
ಬಿಗ್‌ಬಜಾರ್‌ನಿಂದ 15 ನೂತನ ಮಳಿಗೆ
ಟೊಯೋಟಾದಿಂದ 'ಕೊರೋಲಾ ಆಲ್ಟಿಸ್' ಬಿಡುಗಡೆ
ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ 10 ಕಂಪನಿಗಳು
ಇಂಟರ್ನೆಟ್ ಮೊಬೈಲ್‌ನಲ್ಲಿ ಹಿಂದುಳಿದ ಏಶ್ಯಾ