ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
 
17 ಸಾವಿರದ ಗಡಿ ದಾಟಿದ ಶೇರು ಸೂಚ್ಯಂಕ
ಕಳೆದ ಆರು ಶೇರು ವಹಿವಾಟುಗಳಲ್ಲಿ ಮುಂಬೈ ಶೇರು ಸೂಚ್ಯಂಕ ಒಂದು ಸಾವಿರ ಸೂಚ್ಯಂಕದ ದಾಖಲೆಯ ಏರಿಕೆಯೊಂದಿಗೆ ಬಿಎಸ್ಇ-30 ಸೂಚ್ಯಂಕ 17 ಸಾವಿರದ ಗಡಿಯನ್ನು ದಾಟಿದೆ.

ಮುಂಬೈ ಶೇರು ಸೂಚ್ಯಂಕದ ದಾಖಲೆಯ ಈ ವಹಿವಾಟಿಗೆ ಮ್ಯುಚುವಲ್ ಫಂಡ್ ಕಂಪನಿಗಳ ಭರಾಟೆಯ ಖರೀದಿ ಮತ್ತು ರಿಲೈಯನ್ಸ್ ಕಂಪನಿ ಮತ್ತು ತೈಲ ನಿಗಮ ಕಂಪನಿಗಳ ಶೇರು ಬೆಲೆ ಏರಿಕೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರದಂದು 16,899.54 ಅಂಶಗಳಿಗೆ ವಹಿವಾಟು ಸ್ಥಗಿತಗೊಳಿಸಿದ್ದ ಶೇರು ಪೇಟೆ, ಇಂದಿನ ಪ್ರಾರಂಭಿಕ ವಹಿವಾಟಿನಲ್ಲಿ 125 ಅಂಶಗಳ ಏರಿಕೆಯೊಂದಿಗೆ 17,025.07 ಅಂಶ ತಲುಪಿತು.

ಮಾರ್ಚ್ 2006ರಲ್ಲಿ 19 ದಿನಗಳ ಅವಧಿಯಲ್ಲಿ ಶೇರು ಸೂಚ್ಯಂಕ ಸಾವಿರ ಅಂಶಗಳ ಏರಿಕೆ ಕಂಡು 11 ಸಾವಿರದಿಂದ 12 ಸಾವಿರಕ್ಕೆ ತಲುಪಿತ್ತು.

ರಾಷ್ಟ್ರೀಯ ಶೇರು ಸೂಚ್ಯಂಕವು 28.90 ಅಂಶಗಳ ಏರಿಕೆಯೊಂದಿಗೆ 4967.75 ಅಂಶಗಳನ್ನು ತಲುಪಿದೆ.
ಮತ್ತಷ್ಟು
ಎಚ್ಚರಿಕೆಯ ವಹಿವಾಟಿಗೆ ಮುಂದಾದ ಶೇರು ಪೇಟೆ
16 ಸಾವಿರ ಗಡಿ ದಾಟಿದ ಸೂಚ್ಯಂಕ
ಪ್ರಾರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಶೇರು ಪೇಟೆ
ಬಿಎಸ್ಇ ಶೇರು ಸೂಚ್ಯಂಕದಲ್ಲಿ ಏರಿಕೆ
ವಾರದ ಶೇರು ಮಾರುಕಟ್ಟೆ ವಿಶ್ಲೇಷಣೆ
ಶೇರು ಸೂಚ್ಯಂಕದಲ್ಲಿ ದಾಖಲೆಯ ಚೇತರಿಕೆ