ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
 
5 ಸಾವಿರ ತಲುಪಿದ ನಿಪ್ಟಿ, 17ಕ್ಕೆ ನಿಂತ ಬಿಎಸ್ಇ
ಮೊದಲ ಬಾರಿಗೆ ರಾಷ್ಟ್ರೀಯ ಶೇರು ಸೂಚ್ಯಂಕ 5 ಸಾವಿರದ ಗಡಿಯನ್ನು ದಾಟಿ, 5015.55 ಅಂಶಗಳನ್ನು ತಲುಪಿತು. ಮುಂಬೈ ಶೇರು ಸೂಚ್ಯಂಕ ಕೂಡ ವಿದೇಶಿ ಸಾಂಸ್ಥಿಕ ಬಂಡವಾಳದ ನಿರಂತರ ಹರಿವಿನಿಂದ ಬುಧವಾರದಂದು ತಲುಪಿದ್ದ 17 ಸಾವಿರದ ಅಂಶಗಳನ್ನು ಕಾಪಾಡಿಕೊಂಡು ಶೇರು ವಹಿವಾಟು ನಡೆಸಿತು.

ಲೋಹ, ಮಾಹಿತಿ ತಂತ್ರಜ್ಞಾನ ಮತ್ತು ರಿಫೈನರಿ ಕಂಪನಿಗಳ ಶೇರುಗಳ ಬೆಲೆ ಮತ್ತು ಭಾರಿ ಪ್ರಮಾಣದ ವಹಿವಾಟಿನ ನೆರವಿನಿಂದ ನಿಫ್ಟಿ 5 ಸಾವಿರದ ಗಡಿಯನ್ನು ದಾಟಿತು.

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಸೆಪ್ಟಂಬರ್ 19ರಂದು ಬಡ್ಡಿದರಗಳನ್ನು ಕಡಿತಗೊಳಿಸಿದ ನಂತರ ಮುಂಬೈ ಶೇರು ಸೂಚ್ಯಂಕ ಸತತವಾಗಿ ಏರಿಕೆಯಾಗುತ್ತಿದೆ. ಗುರುವಾರ ಶೇರು ವಹಿವಾಟನ್ನು 17,059.61 ರಿಂದ ಪ್ರಾರಂಭಿಸಿದ ಮುಂಬೈ ಶೇರು ಪೇಟೆ,

ಐದು ನಿಮಿಷಗಳ ವಹಿವಾಟಿನ ನಂತರ 17,158.49 ಕ್ಕೆ ತಲುಪಿ ಒಟ್ಟು 237.10 ಅಂಶಗಳ ಏರಿಕೆಯೊಂದಿಗೆ ಪ್ರಾರಂಭಿಕ ವಹಿವಾಟು ನಡೆಸಿತು.
ಇಂದು ನಡೆದ ಶೇರು ವಹಿವಾಟಿನಲ್ಲಿ ಆರ್ಐಎಲ್, ಆರ್ಇಎಲ್, ಭಾರತಿ ಏರ್‍‌ಟೆಲ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಸತ್ಯಂ ಕಂಪ್ಯೂಟರ್, ಮಾರುತಿ ಸುಜುಕಿ, ಮಹಿಂದ್ರಾ& ಮಹಿಂದ್ರಾ, ಎಸ್‌ಬಿಐ, ಟಾಟಾ ಸ್ಟೀಲ್ ಮತ್ತು ಟಾಟಾ ಮೊಟರ್ಸ್ ಕಂಪನಿಗಳ ಶೇರುಗಳು ಲಾಭ ಗಳಿಸಿದವು.
ಮತ್ತಷ್ಟು
17 ಸಾವಿರದ ಗಡಿ ದಾಟಿದ ಶೇರು ಸೂಚ್ಯಂಕ
ಎಚ್ಚರಿಕೆಯ ವಹಿವಾಟಿಗೆ ಮುಂದಾದ ಶೇರು ಪೇಟೆ
16 ಸಾವಿರ ಗಡಿ ದಾಟಿದ ಸೂಚ್ಯಂಕ
ಪ್ರಾರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಶೇರು ಪೇಟೆ
ಬಿಎಸ್ಇ ಶೇರು ಸೂಚ್ಯಂಕದಲ್ಲಿ ಏರಿಕೆ
ವಾರದ ಶೇರು ಮಾರುಕಟ್ಟೆ ವಿಶ್ಲೇಷಣೆ