ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
 
ಬ್ಲೂಚಿಪ್ ಕಂಪನಿಗಳ ಶೇರು ಖರೀದಿಗೆ ಆದ್ಯತೆ
ಏಷಿಯಾದ ಶೇರು ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಕಂಡುಬರುತ್ತಿರುವ ಉಲ್ಲಸಿತ ವಾತಾವರಣದಿಂದ ವಿದೇಶಿ ಬಂಡವಾಳ ಹೂಡಿಕಾ ಕಂಪನಿಗಳು ಭಾರತೀಯ ಬ್ಲೂಚಿಪ್ ಕಂಪನಿಗಳ ಶೇರುಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿ ಮಾಡಿವೆ.

ಬ್ಲೂ ಚಿಪ್ ಕಂಪನಿಗಳ ಭಾರಿ ಖರೀದಿ ಬಿಎಸ್ಇ-30 ಶೇರು ಸೂಚ್ಯಂಕ ಪ್ರಾರಂಭಿಕ ವಹಿವಾಟಿನಲ್ಲಿ 377 ಅಂಶಗಳ ಏರಿಕೆಗೆ ಕಾರಣವಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಭಾರಿ ಪ್ರಮಾಣದಲ್ಲಿ ಬ್ಲೂಚಿಪ್ ಕಂಪನಿಗಳ ಶೇರು ಖರೀದಿಯಾದ ಹಿನ್ನಲೆಯಲ್ಲಿ ಬಿಎಸ್ಇ- 30 ಶೇರು ಸೂಚ್ಯಂಕವು ಐದು ನಿಮಿಷದ ವಹಿವಾಟಿನಲ್ಲಿ 17,705.77 ಸೂಚ್ಯಂಕದ ಗುರಿಯನ್ನು ತಲುಪಿತು.

ರಾಷ್ಟ್ರೀಯ ಶೇರು ಸೂಚ್ಯಂಕ ಕೂಡ ದಾಖಲೆಯ 109.55 ಅಂಶಗಳ ಏರಿಕೆಯೊಂದಿಗೆ 5178.50 ಸೂಚ್ಯಂಕವನ್ನು ತಲುಪಿತು.

ಬ್ಲೂಚಿಪ್ ಕಂಪನಿಗಳು ಅಲ್ಲದೆ ರಿಫೈನರಿ ಕಂಪನಿಗಳ ಶೇರುಗಳು, ಎನ್‌ಟಿಪಿಸಿ, ರಿಲೈಯನ್ಸ್ ಇಂಡಸ್ಟ್ರೀಸ್, ಮತ್ತು ಓಎನ್‌ಜಿಸಿ ಕಂಪನಿಗಳ ಶೇರುಗಳ ಮಾರಾಟದ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿತು.
ಮತ್ತಷ್ಟು
ಶೇರು ಪೇಟೆ: ಮುಂದುವರಿದ ಶೇರು ಖರೀದಿ
5 ಸಾವಿರ ತಲುಪಿದ ನಿಪ್ಟಿ, 17ಕ್ಕೆ ನಿಂತ ಬಿಎಸ್ಇ
17 ಸಾವಿರದ ಗಡಿ ದಾಟಿದ ಶೇರು ಸೂಚ್ಯಂಕ
ಎಚ್ಚರಿಕೆಯ ವಹಿವಾಟಿಗೆ ಮುಂದಾದ ಶೇರು ಪೇಟೆ
16 ಸಾವಿರ ಗಡಿ ದಾಟಿದ ಸೂಚ್ಯಂಕ
ಪ್ರಾರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಶೇರು ಪೇಟೆ