ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
 
ಬಿಎಸ್ಇ ಸೂಚ್ಯಂಕದಲ್ಲಿ ಇಳಿಕೆ
ವಾರಾಂತ್ಯ ಇನ್ನೂ ಎರಡು ದಿನ ಬಾಕಿ ಇರುವಂತೆಯೇ ಇಂದು ಶೇರು ಮಾರುಕಟ್ಟೆಯ ವಹಿವಾಟು ಭಾರಿ ಪ್ರಮಾಣದಲ್ಲಿ ತೊಯ್ದಾಡಿತು. ಸುಮಾರು 180 ಅಂಶಗಳ ತೊಯ್ದಾಟದಲ್ಲಿ 52 ಅಂಶಗಳ ಇಳಿಕೆ ಕಂಡಿತು. ಏಷಿಯಾದ ಶೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಅತಂತ್ರ ಪರಿಸ್ಥಿತಿಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಮುಂಜಾನೆಯ ಅವಧಿಯಲ್ಲಿ 17,710.39 ಅಂಶಗಳಿಗೆ ಇಳಿದ ಸೂಚ್ಯಂಕದ ಗಡಿ ರೇಖೆ, ನಂತರ ತೀವ್ರವಾದ ಚೇತರಿಕೆಯೊಂದಿಗೆ 17,890.49 ಅಂಶಗಳಿಗೆ ತಲುಪಿ, ಪುನಃ 17,794.93ಕ್ಕೆ ಇಳಿಕೆ ಕಂಡು ಒಟ್ಟು 52.11 ಅಂಶಗಳ ಇಳಿಕೆಯನ್ನು ದಿನದ ವಹಿವಾಟಿನಲ್ಲಿ ಕಂಡಿತು.

ರಾಷ್ಟ್ರೀಯ ಶೇರು ಸೂಚ್ಯಂಕವು ಮಾತ್ರ ದಿನದ ಪೂರ್ಣ ವಹಿವಾಟಿನಲ್ಲಿ 19 ಅಂಶಗಳ ಏರಿಕೆಯೊಂದಿಗೆ 5,229.80 ಅಂಶಗಳ ಏರಿಕೆಯೊಂದಿಗೆ ದಿನದ ಪ್ರಾಥಮಿಕ ವಹಿವಾಟು ಅಂತ್ಯಗೊಳಿಸಿತು.

ಒಂದು ಕಡೆ ವಿದೇಶಿ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಶೇರುಗಳ ಖರೀದಿಗೆ ಮುಂದಾದರೆ ದೇಶಿ ಬಂಡವಾಳ ಹೂಡಿಕೆದಾರರು ಹೂಡಿಕೆಯ ಮೇಲಿನ ಲಾಭವನ್ನು ಮರಳಿ ಪಡೆಯುವುದಕ್ಕೆ ಆದ್ಯತೆ ನೀಡಿದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅರ್ಧವಾರ್ಷಿಕ ಪರೀಶಿಲನಾ ವರದಿಯನ್ನು ಪ್ರಕಟಿಸುವ ಸಾಧ್ಯತೆ ಇರುವುದರಿಂದ ದೇಶಿ ಸಾಂಸ್ಥಿಕ ಹೂಡಿಕೆದಾರರು ಲಾಭಾಂಶ ಮರಳಿ ಪಡೆಯುವುದಕ್ಕೆ ಆದ್ಯತೆ ನೀಡಿರುವ ಸಾಧ್ಯತೆ ಇದೆ.

ಸೂಚ್ಯಂಕ 18 ಸಾವಿರದ ಸೂಚ್ಯಂಕದ ಗಡಿದಾಟುವ ಸಾಧ್ಯತೆ ಇರುವುದರಿಂದ ಚಿಲ್ಲರೆ ಹೂಡಿಕೆದಾರರು ಬಂಡವಾಳ ಹೂಡುವ ಸಮಯದಲ್ಲಿ ಎಚ್ಚರ ವಹಿಸಬೇಕು ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಮ್ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ದೇಶಿ ಬಂಡವಾಳ ಹೂಡಿಕೆದಾರರು ಕೆಲಕಾಲ ಶೇರು ಖರೀದಿಯಿಂದ ಹಿಂದೆ ಸರಿದರು.

ಮುಂದಿನ ವಾರದಿಂದ ಕಂಪನಿಗಳು ತಮ್ಮ ತ್ರೈಮಾಸಿಕ ವರದಿಯನ್ನು ಪ್ರಕಟಿಸುವ ಸಾಧ್ಯತೆ ಇದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಲಿರುವ ತ್ರೈಮಾಸಿಕ ವರದಿಯು ಭವಿಷ್ಯದ ಶೇರು ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ.
ಮತ್ತಷ್ಟು
ಬ್ಲೂಚಿಪ್ ಕಂಪನಿಗಳ ಶೇರು ಖರೀದಿಗೆ ಆದ್ಯತೆ
ಶೇರು ಪೇಟೆ: ಮುಂದುವರಿದ ಶೇರು ಖರೀದಿ
5 ಸಾವಿರ ತಲುಪಿದ ನಿಪ್ಟಿ, 17ಕ್ಕೆ ನಿಂತ ಬಿಎಸ್ಇ
17 ಸಾವಿರದ ಗಡಿ ದಾಟಿದ ಶೇರು ಸೂಚ್ಯಂಕ
ಎಚ್ಚರಿಕೆಯ ವಹಿವಾಟಿಗೆ ಮುಂದಾದ ಶೇರು ಪೇಟೆ
16 ಸಾವಿರ ಗಡಿ ದಾಟಿದ ಸೂಚ್ಯಂಕ