ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
 
ಸೆನ್ಸೆಕ್ಸ್: 106 ಅಂಕಗಳ ಏರಿಕೆ
ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ಇಳಿಕೆ ಕಂಡು ಬಂದಿದ್ದು 17,287.19, ಅಂಕಗಳ ಜಾಗತಿಕ ಮೈಲುಗಲ್ಲನ್ನು ಸ್ಥಾಪಿಸಲು ಕೊರತೆ ಎದುರಿಸಿದ ಬಾಂಬೆ ಷೇರು ಮಾರುಕಟ್ಟೆ, ಮಂಗಳವಾರದ ಬೆಳಗಿನ ವಹಿವಾಟಿನಲ್ಲಿ ಭಾರಿ ಇಳಿಕೆ ಕಂಡು, ನಂತರ ಮಂದಗತಿಯಲ್ಲಿ ಸಾಗಿದೆ,ಎಡಪಕ್ಷಗಳೊಂದಿಗೆ ಕೇಂದ್ರ ಸರಕಾರ ಮಾತುಕತೆ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಉಂಟು ಮಾಡಿದೆ.

ಬೆಳಗಿನ ವಹಿವಾಟಿನಲ್ಲಿ 106 ಅಂಕಗಳ ಏರಿಕೆ ಕಂಡು 17,287.19 ಪಾಯಿಂಟ್ ದಾಖಲಿಸಿದ್ದ ಬಿಎಸ್‌ಇ-30ಷೇರು ಸಂವೇದಿ ಸೂಚ್ಯಂಕ, 17,491.39 ಅಂಕಗಳೊಂದಿಗೆ 105.87 ಪಾಯಿಂಟ್‌ಗಳನ್ನು ದಾಖಲಿಸಿತು.ಸೋಮವಾರದಂದು 17,491 ಅಂಕಗಳಿಗೆ ವಹಿವಾಟು ಮುಕ್ತಾಯಗೊಂಡಿತ್ತು.

ಇದೇ ರೀತಿ ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕವಾದ ನಿಫ್ಟಿಯೂ ಸಹ 13.05 ಅಂಕಗಳ ಏರಿಕೆ ಕಾಣುವುದರೊಂದಿಗೆ 5,098.15 ಪಾಯಿಂಟ್‌ಗಳನ್ನು ದಾಖಲಿಸಿತು.

ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಧ್ಯೆ ಮತ್ತೆ ಬಿರುಕು ಉಂಟಾಗಿರುವ ಹಿನ್ನೆಲೆಯಲ್ಲಿ, ಹೂಡಿಕೆದಾರರು ಷೇರು ಖರೀದಿಯಲ್ಲಿ ಹಿಂದೇಟು ಹಾಕಿದ್ದರಿಂದ ಷೇರು ಮಾರುಕಟ್ಟೆಯ ವಹಿವಾಟು ಮಂದಗತಿಗೆ ಕಾರಣವಾಗಿದೆ ಎಂದು ಷೇರು ಮಾರುಕಟ್ಟೆಯ ತಜ್ಞರು ಅಭಿಮತ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಬಿಎಸ್ಇ ಸೂಚ್ಯಂಕದಲ್ಲಿ ಇಳಿಕೆ
ಬ್ಲೂಚಿಪ್ ಕಂಪನಿಗಳ ಶೇರು ಖರೀದಿಗೆ ಆದ್ಯತೆ
ಶೇರು ಪೇಟೆ: ಮುಂದುವರಿದ ಶೇರು ಖರೀದಿ
5 ಸಾವಿರ ತಲುಪಿದ ನಿಪ್ಟಿ, 17ಕ್ಕೆ ನಿಂತ ಬಿಎಸ್ಇ
17 ಸಾವಿರದ ಗಡಿ ದಾಟಿದ ಶೇರು ಸೂಚ್ಯಂಕ
ಎಚ್ಚರಿಕೆಯ ವಹಿವಾಟಿಗೆ ಮುಂದಾದ ಶೇರು ಪೇಟೆ