ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
 
ನಿಮ್ಮ ಭಾಷೆ ಎಂದೆಂದಿಗೂ ಉಸಿರಾಗಿರಲಿ
WD
ವೆಬ್‌ದುನಿಯಾ ತನ್ನ ಪ್ರಗತಿ ಯಾತ್ರೆಯಲ್ಲಿ ಮಹತ್ವದ ಮುನ್ನಡೆ ಸಾಧಿಸಿದೆ. ಟೆಲಿವಿಷನ್ ಜಗತ್ತಿನಲ್ಲಿಯೂ ನಾವು ಕಾಣಿಸಲಾರಂಭಿಸಿದ್ದೇವೆ. ಈಗ ಟಿವಿಯಲ್ಲೂ ವೆಬ್‌ದುನಿಯಾ ಜಾಹೀರಾತುಗಳನ್ನು ನೋಡಬಹುದು. ಇದರ ಆರಂಭವಾಗಿರುವುದು ಆಜ್-ತಕ್ ಟಿವಿ ಚಾನೆಲ್ ಮೂಲಕ. ಇದೇ ಜಾಹೀರಾತನ್ನು ನೀವು ಇಲ್ಲಿ ವೆಬ್‌ದುನಿಯಾದಲ್ಲೂ ನೋಡಬಹುದು. ಇಲ್ಲಿ ಅದರ ವೀಡಿಯೋ ತುಣುಕನ್ನು ನೀಡಲಾಗಿದೆ.

ವೆಬ್‌ದುನಿಯಾ ಈಗ ನಿಮ್ಮದೇ ಭಾಷೆಯಲ್ಲಿ ಲಭ್ಯ. ಈಗ ನಿಮ್ಮ ಮನದಾಳದ ಮಾತು ಹೇಳಲು ಇಂಗ್ಲಿಷಿಗೆ ಶರಣು ಹೋಗಬೇಕಾಗಿಲ್ಲ. ನಿಮ್ಮದೇ ಭಾಷೆಯಲ್ಲಿ ಓದಿರಿ ಮತ್ತು ಅಭಿಪ್ರಾಯ ಹಂಚಿಕೊಳ್ಳಿರಿ. ನಿಮ್ಮ ರಕ್ತದ ಕಣಕಣದಲ್ಲಿ ಮಿಳಿತವಾಗಿರುವ ಮಾತೃಭಾಷೆಯಲ್ಲಿ ಅತ್ಯಂತ ಸುಲಭವಾಗಿ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.

ಹೌದು. ಈ ನಿಮ್ಮ ಮಾತೃಭಾಷೆಯು ಅಂತರ್ಜಾಲ ಜಗತ್ತಿನಲ್ಲೂ ಖ್ಯಾತಿ ಪಡೆಯುತ್ತಿದೆ. ಮಾತೃಭಾಷೆಯ ಮಹತ್ವ ಮತ್ತು ಅದರ ಅವಶ್ಯಕತೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಂತರ್ಜಾಲ ಜಗತ್ತಿನ ವಿಶಿಷ್ಟ ಪೋರ್ಟಲ್ ವೆಬ್‌ದುನಿಯಾ ಆಗಿದೆ. ಪ್ರತಿಯೊಬ್ಬನ ಬಳಿಗೆ ಆತನ ಭಾಷೆಯ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ವೆಬ್‌ದುನಿಯಾ ಮೊದಲ ಹೆಜ್ಜೆ ಇಟ್ಟಿದೆ.

ವೆಬ್‌ದುನಿಯಾದ ದೂರದೃಷ್ಟಿಯ ನಿರ್ಣಯವು ಫಲ ಕೊಡಲಾರಂಭಿಸಿದೆ. ಬಹಳ ವೇಗವಾಗಿ ವೆಬ್‌ದುನಿಯಾವು ಪ್ರಾದೇಶಿಕ ಭಾಷೆಗಳಲ್ಲಿ ಶಿಖರಪ್ರಾಯವಾಗುವತ್ತ ಧಾವಂತದಿಂದ ಹೆಜ್ಜೆ ಹಾಕುತ್ತಿದೆ. ಟಿವಿಯಲ್ಲೂ ವೆಬ್‌ದುನಿಯಾ ಜಾಹೀರಾತುಗಳು ಬರತೊಡಗಿವೆ. ವೆಬ್‌ದುನಿಯಾ ಭಾರತದ ಮೂಲೆ ಮೂಲೆಗಳಲ್ಲಿನ ಮನೆಗಳಲ್ಲಿ ತನ್ನ ಛಾಪು ಮೂಡಿಸುತ್ತಿದೆ ಮತ್ತು ಕರ್ನಾಟಕ ಮಾತ್ರವಲ್ಲದೆ ಪಂಜಾಬಿನ, ಗುಜರಾತಿನ, ಮಹಾರಾಷ್ಟ್ರದ, ಬಂಗಾಳದ, ತಮಿಳುನಾಡಿನ, ಆಂಧ್ರ ಪ್ರದೇಶದ ಮತ್ತು ಕೇರಳದಲ್ಲಿ ಮನೆ ಮನೆಗಳಲ್ಲಿ ವೆಬ್‌ದುನಿಯಾದ ಸದ್ದು ಕೇಳಿಬರುತ್ತಿದೆ.

ತನ್ನ ಮಾತೃಭಾಷೆಯಲ್ಲಿ, ತನ್ನದೇ ನುಡಿಯಲ್ಲಿ ಮಾತನಾಡುವುದು ಎಷ್ಟೊಂದು ಸುಲಭ! ಯಾವ ಭಾಷೆಯನ್ನು ಮಗುವೊಂದು ತನ್ನ ಬಾಲ್ಯದಿಂದಲೇ ಮೈಗೂಡಿಸಿಕೊಂಡಿರುತ್ತದೋ, ಕಲಿಯುತ್ತದೋ, ತನ್ನ ಬಂಧು ಮಿತ್ರರೊಡನೆ ಸಂವಹನಕ್ಕೆ ಬಳಸುತ್ತದೋ, ಅದುವೇ ಆ ಮಗುವಿಗೆ ಕೊನೆಯ ತನಕವೂ ಸರ್ವಸ್ವವಾಗಿರುತ್ತದೆ.

ಇಡೀ ದೇಶವೇ ನಮ್ಮ ವೈಭವದ ಪ್ರಗತಿಯ ನಡಿಗೆಯಲ್ಲಿ ನಮ್ಮೊಂದಿಗಿದೆ. ನೀವು ಕೂಡ ಈ ಕೈಂಕರ್ಯದಲ್ಲಿ ಸೇರಿಕೊಳ್ಳಿ ಮತ್ತು ಇಂಗ್ಲಿಷಿಗೆ ವಿದಾಯ ಹಾಡಿ. ನಿಮ್ಮದೇ ಭಾಷೆಯನ್ನು ಅಪ್ಪಿಕೊಳ್ಳಿ, ಒಪ್ಪಿಕೊಳ್ಳಿ.
ವೀಡಿಯೋ ವೀಕ್ಷಿಸಿ
ಮತ್ತಷ್ಟು
ಮಕ್ಕಳ ದಿನಾಚರಣೆ ಎಷ್ಟು ಅರ್ಥಪೂರ್ಣ?
ನಾಯಿಗೆ ಕೂಡಿಬಂದ ಕಂಕಣಭಾಗ್ಯ!!
ಗ್ರಾಮ ವಾಸ್ತವ್ಯ ಮುಂದುವರಿಕೆ, ಗ್ರಾಮ ದರ್ಶನಕ್ಕೆ ಸೂಚನೆ
ಬೂಕನಕೆರೆ ಹುಡುಗ ಮುಖ್ಯಮಂತ್ರಿ ಗದ್ದುಗೆಯೆಡೆಗೆ ನಡಿಗೆ