ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾರದ ಸುದ್ದಿ ಸಾರ
ಸತೀಶ್ ಪಾಗಾದ್
ಫೆಬ್ರವರಿ 23ರಿಂದ 29 ರವರೆಗಿ ವಾರದ ಅವಧಿಯಲ್ಲಿ ದೇಶದಲ್ಲಿ ನಡೆದ ಮುಖ್ಯ ಘಟನೆಗಳ ಕಿರು ಪರಿಚಯ. ಈ ವಾರದಲ್ಲಿ ರೈಲ್ವೆ ಬಜೆಟ್, ಸಾಮಾನ್ಯ ಬಜೆಟ್‌ಗಳನ್ನು ಮಂಡಿಸಲಾಗಿದೆ. ಮೇಘಾಲಯ ಸೇರಿದಂತೆ ಇತರ ಈಶಾನ್ಯ ರಾಜ್ಯಗಳಲ್ಲಿ ಚುನಾವಣೆಯ ಕಾವು ವಾರದ ಅವಧಿಯಲ್ಲಿ ಏರಿತ್ತು.
ಶನಿವಾರ
ನೂರಕ್ಕೆ ನೂರರಷ್ಟು ಚುನಾವಣಾ ಆಯೋಗ ನೀಡಿದ ಗುರುತಿನ ಪತ್ರಗಳನ್ನು ವಿಧಾನ ಸಭೆಯ 60 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಪಯೋಗಿಸಿದ ಮೊದಲ ಈಶಾನ್ಯ ರಾಜ್ಯ ಎಂಬ ಖ್ಯಾತಿಗೆ ತ್ರಿಪುರಾ ಪಾತ್ರವಾಯಿತು.

ಭಾರತ ಮತ್ತು ಅಮೆರಿಕ ನಡುವೆ ನಾಗರಿಕ ಅಣು ಒಪ್ಪಂದದ ಸಂಬಂಧದಲ್ಲಿ ತಲೆ ಇಲ್ಲದ ಕೋಳಿಗಳು ಎಂದು ಹೇಳಿಕೆ ನೀಡಿ ವಿವಾದ ಹುಟ್ಟಿಸಿದ್ದ ಅಮೆರಿಕದಲ್ಲಿರುವ ಭಾರತದ ರಾಯಭಾರಿ ರೊನೇನ್ ಸೇನ್ ಅವರನ್ನು ಅಮೆರಿಕದ ರಾಯಭಾರಿ ಎಂದು ಮುಂದುವರಿಸುವ ತೀರ್ಮಾನವನ್ನು ಸರಕಾರ ತೆಗೆದುಕೊಂಡಿತು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಕ್ರಮವಾಗಿ ನೂರಕ್ಕೂ ಹೆಚ್ಚು ಜನರನ್ನು ಅಮೆರಿಕಕ್ಕೆ ಕಳುಹಿಸಿದ ಅಕ್ರಮ ಮಾನವ ಸಾಗಾಣಿಕೆ ಜಾಲವನ್ನು ಪತ್ತೆ ಹಚ್ಚುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರವಿವಾರ
ಕೋಲ್ಕತ್ತಾ: ಕೊಲೆ, ಬೆದರಿಕೆ ಪ್ರಕರಣಗಳಲ್ಲಿ ಪಶ್ಚಿಮ ಬಂಗಾಲ, ಓರಿಸ್ಸಾ ಮತ್ತು ಜಾರ್ಖಂಡ್ ಪೊಲೀಸರಿಗೆ ಬೇಕಾಗಿದ್ದ ಸಿಪಿಐ (ಮಾವೋವಾದಿ) ನಾಯಕ ಸೋಮೆನ್‌ರನ್ನು ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ
ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ್ ಅವರು ಬಜೆಟ್ ಅಧಿವೇಶನಕ್ಕೆ ಮುನ್ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿ ದೇಶದ ಆರ್ಥಿಕಾಭಿವೃದ್ದಿಯ ಫಲ ಅಲ್ಪಸಂಖ್ಯಾತರಿಗೂ ದೊರೆಯುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ
ಜನಪ್ರಿಯ ರೈಲ್ವೆ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಪ್ರಯಾಣಿಕರ ಪ್ರಯಾಣ ದರಗಳಲ್ಲಿ ಮತ್ತು ತೈಲ ಸಾಗಾಣಿಕೆಯ ಬೆಲೆಗಳಲ್ಲಿ ಕಡಿತಗೊಳಿಸಿದ್ದಾರೆ. ಮಹಿಳೆಹಿರಿಯ ನಾಗರಿಕರು ಮತ್ತು ಏಡ್ಸ್ ರೋಗಿಗಳಿಗೆ ಶೇ 50 ಪ್ರಯಾಣ ದರ ರಿಯಾಯಿತಿಯನ್ನು ಘೋಷಿಸಿದ್ದಾರೆ.

ಅಣ್ವಸ್ತ್ರ ಸಾಮರ್ಥ್ಯವಿರುವ ಸಮುದ್ರದಾಳದಿಂದ ಪ್ರಯೋಗಿಸಬಲ್ಲ ಖಂಡಾಂತರ ಕ್ಷಿಪಣಿಯನ್ನು ವಿಶಾಖಪಟ್ಟಿನಂ ಬಳಿ ಭಾರತೀಯ ನೌಕಾದಳ ಯಶಸ್ವಿಯಾಗಿ ಪ್ರಯೋಗಿಸಿತು. ಸಮುದ್ರದಾಳದಿಂದ ಅಣ್ವಸ್ತ್ರ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಐದು ರಾಷ್ಟ್ರಗಳ ಸಾಲಿಗೆ ಭಾರತ ವಿದ್ಯುಕ್ತವಾಗಿ ಸೇರ್ಪಡೆಯಾಯಿತು.

ವಿವಾದದಲ್ಲಿ ಸಿಲುಕಿದ ಕಾರಣ ಬಾಲಿವುಡ್ ನಟ ಸಂಜಯ ದತ್ ಮತ್ತು ಮಾನ್ಯತಾ ನಡುವಿನ ವಿವಾಹವು ರದ್ದುಗೊಂಡಿತು. ಸಂಜಯ ದತ್ ಮತ್ತು ಜಂಟಿಯಾಗಿ ತಮ್ಮ ಘೋಷಣೆಯನ್ನು ಹಿಂದಕ್ಕೆ ಪಡೆದರು.
ಶುಕ್ರವಾರ
ಮೇ ತಿಂಗಳಿನಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮಂಡಿಸಲಾದ 2008-9ರ ಸಾಲಿನ ಬಜೆಟ್‌ನಲ್ಲಿ ಉತ್ಪಾದನೆ ಕುಂಠಿತಗೊಳಿಸಿರುವ ಕೃಷಿ ವಲಯಕ್ಕೆ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು 60 ಸಾವಿರ ಕೋಟಿ ರೂಗಳ ನೆರವು ಮತ್ತು ಆದಾಯ ತೆರಿಗೆಯಲ್ಲಿ ಕಡಿತ ಘೋಷಿಸಿದರು.
ಮತ್ತಷ್ಟು
ಮಾರ್ಚ್ 30 ಬೆಂಗಳೂರು ವಿಮಾನ ನಿಲ್ದಾಣ ಕಾರ್ಯಾರಂಭ
ಐಐಟಿ-ಜೆಇಇ ಒಂದು ಸವಾಲೇ?
ಹೋರಾಡು ಕನ್ನಡಿಗ- ಉಗ್ರರ ಬೇರು ಕೀಳಲು, ಆಡಳಿತ ಎಚ್ಚೆತ್ತುಕೊಳ್ಳಲು!
ಇಂಧನ ಬೆಲೆ ಏರಿಕೆ: ಅಂತಿಮ ಹೊರೆ ಜನರ ಮೇಲೆ
ಮದುವೆ ವಿಷಯದಲ್ಲೂ ಈತ ಚಿನ್ನದ ಹುಡುಗನೇ
ಪತ್ರಿಕೋದ್ಯಮದಲ್ಲಿ ಕೈಯಾಡಿಸಲಿರುವ ಪ್ರಿನ್ಸ್ ವಿಲಿಯಂ