ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಿಳಾ ಮೀಸಲು ಮಸೂದೆ: ನಡೆದು ಬಂದ ಹಾದಿ
ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಗಳವಾರ ರಾಜ್ಯಸಭೆಯಲ್ಲಿ ಸಂಸದೀಯ ಅಂಗೀಕಾರಕ್ಕಾಗಿ ಮಂಡಿಸಲಾಗಿದೆ. ಈ ವಿಧೇಯಕದ ಕುರಿತು ಒಂದಷ್ಟು ಹಿನ್ನೋಟ:

ಮೊದಲು ಸಂಸದೀಯ ಅಂಗೀಕಾರಕ್ಕಾಗಿ ಇದನ್ನು ಮಂಡಿಸಿದ್ದು 1996ರ ಸೆಪ್ಟೆಂಬರ್ ತಿಂಗಳಲ್ಲಿ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನ ಮೀಸಲಾತಿ ಕಲ್ಪಿಸಿಕೊಡುವ ಕುರಿತಾದ ಈ ಮಸೂದೆಗೆ ರಾಜಕೀಯ ಒಮ್ಮತ ಪಡೆಯುವಲ್ಲಿ ಈ ಹಿಂದೆಯೂ ಹಲವು ವಿಫಲ ಪ್ರಯತ್ನಗಳನ್ನು ಮಾಡಲಾಗಿತ್ತು.

ಕಳೆದ 12 ವರ್ಷಗಳಲ್ಲಿ ಅದು ಸಾಗಿ ಬಂದ ಬಗೆ ಹೀಗಿದೆ:

-- 1996ರ ಸೆಪ್ಟೆಂಬರ್ 12ರಂದು ಲೋಕಸಭೆಯಲ್ಲಿ ಎಚ್.ಡಿ.ದೇವೇಗೌಡ ಸರಕಾರದಿಂದ ಸಂವಿಧಾನ (81ನೇ ತಿದ್ದುಪಡಿ) ಮಸೂದೆ-1996 ಮಂಡನೆ.

-- ಅದನ್ನು ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಯಿತು.

-- 11ನೇ ಲೋಕಸಭೆ ವಿಸರ್ಜನೆಯಾಗುವುದರೊಂದಿಗೆ ಮಸೂದೆ ಧೂಳು ಹಿಡಿಯಿತು.

-- 1999ರ ಡಿಸೆಂಬರ್ ತಿಂಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರದಿಂದ ಮತ್ತೊಮ್ಮೆ ಸಂವಿಧಾನ (84ನೇ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

-- 12ನೇ ಲೋಕಸಭೆಯೂ ವಿಸರ್ಜನೆಗೊಳ್ಳುವುದರೊಂದಿಗೆ ಮಹಿಳಾ ಮೀಸಲಾತಿ ಕುರಿತ ಈ ಮಸೂದೆ ಮತ್ತೆ ಮೂಲೆಗೆ ಬಿತ್ತು.

-- ಲೋಕಸಭೆಯಲ್ಲಿ ಪುನಃ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು 1999ರ ಡಿಸೆಂಬರ್ 23ರಂದು. ಆದರೆ ರಾಜಕೀಯವಾಗಿ ಸಹಮತ ಮೂಡದ ಕಾರಣ ಮಸೂದೆಯು ಅಂಗೀಕಾರ ಪಡೆಯಲು ವಿಫಲವಾಯಿತು.

-- ಇದೀಗ 2008ರ ಮೇ 6ರಂದು ರಾಜ್ಯಸಭೆಯಲ್ಲಿ ಪುನಃ ಈ ಮಸೂದೆ ಮಂಡಿಸಲಾಗಿದ್ದು, ಗದ್ದಲದಿಂದಾಗಿ ಸಂಸತ್ ಅಧಿವೇಶನವೇ ಹಠಾತ್ ಕೊನೆಗೊಂಡಿದೆ.
ಮತ್ತಷ್ಟು
ಸುಡು ಬೇಸಿಗೆ: ಜನಸಾಮಾನ್ಯನಿಗೆ ಹಣದುಬ್ಬರದ ಬೇಗೆ
ಪಶ್ಚಿಮಘಟ್ಟದ ಜನರ ತೂಗುವ ಸೇತುವೆ
ಬಸು ,ಸುರ್ಜಿತ್ ನಿರ್ಗಮನ: ಹಿರಿಯರ ಯುಗಾಂತ್ಯ
ತೆಂಡುಲ್ಕರ್ ನಿವೃತ್ತಿ, ಸಿಪ್ಪಿಯಿಂದ ಶೋಲೇ ರಿಮೇಕ್!
'ಹೊಗೆ'ಯ ಬೆಂಕಿಗೆ ಕರುಣಾನಿಧಿಯಿಂದ ತುಪ್ಪ
ಕೊಂಚಕಾಲ ದೂರ ಇರಿ: ದಲ್ಲಾಳಿಗಳ ಸಲಹೆ