ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ವಿಮಾನಕ್ಕೆ ಅಗ್ನಿಸ್ಪರ್ಷ: ತಪ್ಪಿದ ಅನಾಹುತ
ತೈವಾನ್‌ನಿಂದ ಆಗಮಿಸುತ್ತಿದ್ದ ಚೀನಾ ಎರ್‌ಲೈನ್ಸ್‌ನ ಬೋಯಿಂಗ್ 737 ವಿಮಾನ, ಒರಿನವ ವಿಮಾನ ನಿಲ್ಧಾಣದಲ್ಲಿ ಕೆಳಗಿಳಿಯುತ್ತದ್ದಂತೆ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಠಿಯಾದರೂ ಯಾವುದೇ ಅಪಾಯ ಸಂಭವಿಸಿಲ್ಲ.

ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡರೂ 157 ಪ್ರಯಾಣಿಕರಲ್ಲಿ ಒಬ್ಬರಿಗೂ ಗಾಯವಾಗದೇ ಪವಾಡ ಸದೃಶ ರೀತಿಯಲ್ಲಿ ಪರಾಗಿದ್ದಾರೆ. ಇಬ್ಬರು ವ್ಯಕ್ತಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ಪ್ರಸಾರ ಮಾಧ್ಯಮವೊಂದು ತಿಳಿಸಿದೆ.

ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಮುನ್ನವೇ ಪ್ರಯಾಣಿಕರು ಕೆಳಗಿಳಿದಿದ್ದರು ಎಂದು ಜಪಾನಿನ ಸಾರಿಗೆ ಸಚಿವಾಲಯದ ಅಧಿಕಾರಿ ಹಾಗೂ ಚೀನಾ ಏರ್‌ಲೈನ್ಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಮಾನದ ಇಬ್ಬರು ಪೈಲಟ್‌ಗಳು ತಲೆತಪ್ಪಿಸಿಕೊಂಡಿದ್ದು, ವಿಮಾನ ಧರೆಗಿಳಿಯುವ ಒಂದು ನಿಮಿಷದ ಮೊದಲು, ಮೊದಲಿನ ಎಂಜಿನ್‌ನ ಕೆಳಗಿನ ಭಾಗದಲ್ಲಿ ಸ್ಫೋಟ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿತು ಎಂದು ಸಾರಿಗೆ ಸಚಿವಾಲಯದ ಅಧಿಕಾರಿ ಹಕಿಹಿಕೊ ತಮುರ ತಿಳಿಸಿದ್ದಾರೆ.
ಮತ್ತಷ್ಟು
ರಾಜಕೀಯ ನಿರ್ಬಂಧ ಹಿಂತೆಗೆತ, ಆಯೋಗ ಇಂಗಿತ
ಭಾರತದೊಂದಿಗೆ ಸೌಹಾರ್ದಯುತ ಸಂಬಂಧ
ಮತ್ತೊಂದು ಆತ್ಮಹತ್ಯೆ ದಾಳಿ: ನಾಲ್ವರ ಬಲಿ
ಪಾಕ್ ಜಗತ್ತಿನ ಅಪಾಯಕಾರಿ ದೇಶ
ಪರಮಾಣು ಯೋಜನೆಗೆ ಪಾಕ್ ಒತ್ತು
ತಾಲಿಬಾನ್ ಉಗ್ರರೊಂದಿಗಿನ ಮಾತುಕತೆ ವಿಫಲ