ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಭಾರತೀಯ ಮಹಿಳಾ ಪೊಲೀಸರಿಗೆ ವಿಶ್ವಸಂಸ್ಥೆ ಪ್ರಶಂಸೆ

ವಿಶ್ವಸಂಸ್ಥೆ ನಿಯೋಜಿಸಿದ ಪ್ರಪ್ರಥಮ ಮಹಿಳಾ ಘಟಕವಾದ ಭಾರತೀಯ ಮಹಿಳಾ ಪೊಲೀಸ್ ಅಧಿಕಾರಿಗಳು ವಿಶ್ವಸಂಸ್ಥೆಯ ಅಧಿಕಾರಿಗಳಿಂದ ಅಪಾರ ಪ್ರಶಂಸೆಗೆ ಒಳಗಾಗಿದ್ದಾರೆ. ತುರ್ತು ಸಂದರ್ಭಗಳಲ್ಲಿ ಮತ್ತು ಲೈಬೀರಿಯಾದಲ್ಲಿ ನಿಯೋಜಿಸಲಾದ ಸಂದರ್ಭದಲ್ಲಿ ಅಪರಾಧ ನಿರ್ವಹಣೆಯಲ್ಲಿ ಅವರ ಸೇವೆ ಕೂಡ ಪ್ರಶಂಸೆಗೆ ಪಾತ್ರವಾಗಿದೆ.
ಪ್ರಶಂಸೆಯ ಸಂಕೇತವಾಗಿ, ಲೈಬೀರಿಯಾದ ರಾಜಧಾನಿ ಮಾನ್‌ರೋವಿಯಾದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿ ಬಾನ್ ಕಿ ಮೂನ್ ಅವರ ವಿಶೇಷ ಕಾರ್ಯದರ್ಶಿ ಅಲನ್ ದಾಸ್ ಮಹಿಳಾ ಅಧಿಕಾರಿಗಳಿಗೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪದಕಗಳನ್ನು ವಿತರಿಸಿ ಸನ್ಮಾನಿಸಿದ್ದಾರೆ.
ಶಾಂತಿಪಾಲನೆಯಲ್ಲಿ ಲಿಂಗ ಸಮಾನತೆಗೆ ಹೊಸ ಆರಂಭದ ಸಂಕೇತವಾದರೂ, ಈ ನಿಯೋಜನೆಯು ಭಾರತದ ಶಾಂತಿಪಾಲನೆ ಕಾರ್ಯಾಚರಣೆಗೆ ಸತತ ಬದ್ದತೆಯ ದ್ಯೋತಕವಾಗಿದೆ ಎಂದು ದಾಸ್ ಹೇಳಿದ್ದಾರೆ.
ಮತ್ತಷ್ಟು
ವಿಮಾನಕ್ಕೆ ಅಗ್ನಿಸ್ಪರ್ಷ: ತಪ್ಪಿದ ಅನಾಹುತ
ರಾಜಕೀಯ ನಿರ್ಬಂಧ ಹಿಂತೆಗೆತ, ಆಯೋಗ ಇಂಗಿತ
ಭಾರತದೊಂದಿಗೆ ಸೌಹಾರ್ದಯುತ ಸಂಬಂಧ
ಮತ್ತೊಂದು ಆತ್ಮಹತ್ಯೆ ದಾಳಿ: ನಾಲ್ವರ ಬಲಿ
ಪಾಕ್ ಜಗತ್ತಿನ ಅಪಾಯಕಾರಿ ದೇಶ
ಪರಮಾಣು ಯೋಜನೆಗೆ ಪಾಕ್ ಒತ್ತು