ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಇಂಡೊ-ಜಪಾನ್ ದ್ವಿಪಕ್ಷೀಯ ಸಂಬಂಧ ವೃದ್ದಿಗೆ ಆದ್ಯತೆ
ಜಪಾನ್ ಪ್ರಧಾನಿ ಶಿಂಜೊ ಅಬೆ ಇಂದು ಭಾರತದ ಬೇಟಿಗೆ ಆಗಮಿಸಲಿದ್ದು, ಪ್ರಧಾನಿ ಡಾ ಮನ್‌ಮೋಹನ್ ಸಿಂಗ್ ಅವರೊಂದಿಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ದಿ ಕುರಿತು, ಅಬೆ ಮಾತುಕತೆ ನಡೆಸಲಿದ್ದಾರೆ.

ಉಭಯ ದೇಶಗಳ ಪ್ರಧಾನಿಗಳ ನಡುವೆ ನಡೆಯಲಿರುವ ಮಾತುಕತೆಯಲ್ಲಿ ಎರಡು ದೇಶಗಳ ನಡುವೆ ಆರ್ಥಿಕ ಮತ್ತು ರಚನಾತ್ಮಕ ಸಂಬಂಧಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿರುವ ಸಾಧ್ಯತೆ ಇದೆ.

ನವದೆಹಲಿ ಮತ್ತು ಟೊಕಿಯೊ ನಡುವೆ ಉತ್ತಮ ಸಂಬಂಧ ಮತ್ತು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಪಾಲುದಾರಿಕೆ ಇರಬೇಕು ಎಂದು ಬಯಸುತ್ತದೆ. ಭಾರತ, ಅಂತಾರಾಷ್ಟ್ರೀಯ ಅಣು ಪ್ರಾಧಿಕಾರವು ತನ್ನ ನಿಯಮಾವಳಿಗಳಲ್ಲಿ ಬದಲಾವಣೆ ತರಬೇಕು.

ಅಣುಶಕ್ತಿ ಇಂಧನ ಮತ್ತು ತಂತ್ರಜ್ಞಾನ ಭಾರತಕ್ಕೆ ದೊರೆಯುವ ರೀತಿಯಲ್ಲಿ ನಿಯಮಾವಳಿಗಳಲ್ಲಿ ಬದಲಾವಣೆಯಾಬೇಕು ಎಂದು ಬಯಸುತ್ತಿದೆ. ಜಪಾನ್ ಮಾತ್ರ ಅಣುಶಕ್ತಿ ಇಂಧನ ಮತ್ತು ತಂತ್ರಜ್ಞಾನ ಪೂರೈಕೆ ಸಂಬಂಧಿಸಿದಂತೆ ಎಚ್ಚರಿಕೆಯ ನಿಲುವು ತೆಗೆದುಕೊಂಡಿದೆ.

ಉಭಯ ರಾಷ್ಟ್ರಗಳ ನಾಯಕರ ನಡುವೆ ನಡೆಯಲಿರುವ ಮಾತುಕತೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ವೃದ್ದಿಗೆ ಪೂರ್ವಪೀಠಿಕೆಯನ್ನು ಇಲ್ಲಿಯವರೆಗೆ ಸಿದ್ದಗೊಳಿಸಿಲ್ಲವಾದರೂ, ರಚನಾತ್ಮಕ ಜಾಗತಿಕ ಪಾಲುದಾರಿಕೆ, ಪರಿಸರ ಸಂರಕ್ಷಣೆ ಮತ್ತು ಶಕ್ತಿ ಸಂಪನ್ಮೂಲಗಳ ರಕ್ಷಣೆ ಕುರಿತಂತೆ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಮತ್ತಷ್ಟು
ಭಾರತೀಯ ಮಹಿಳಾ ಪೊಲೀಸರಿಗೆ ವಿಶ್ವಸಂಸ್ಥೆ ಪ್ರಶಂಸೆ
ವಿಮಾನಕ್ಕೆ ಅಗ್ನಿಸ್ಪರ್ಷ: ತಪ್ಪಿದ ಅನಾಹುತ
ರಾಜಕೀಯ ನಿರ್ಬಂಧ ಹಿಂತೆಗೆತ, ಆಯೋಗ ಇಂಗಿತ
ಭಾರತದೊಂದಿಗೆ ಸೌಹಾರ್ದಯುತ ಸಂಬಂಧ
ಮತ್ತೊಂದು ಆತ್ಮಹತ್ಯೆ ದಾಳಿ: ನಾಲ್ವರ ಬಲಿ
ಪಾಕ್ ಜಗತ್ತಿನ ಅಪಾಯಕಾರಿ ದೇಶ