ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪರ್ವತಗಳ ಹಿಂದೆ ಅಡಗಿದ ಮುಸ್ಲಿಂ ಧುರೀಣರು
ಇಸ್ರೇಲ್‌ಗೆ ಅಪರೂಪದ ಭೇಟಿ ನೀಡಿದ್ದ ಭಾರತೀಯ ಮುಸ್ಲಿಂ ಧುರೀಣರ ನಿಯೋಗವೊಂದು ಹಮಾಸ್ ರಾಕೆಟ್ ದಾಳಿಯಿಂದ ತಪ್ಪಿಸಿಕೊಳ್ಳಲು ಪರ್ವತಗಳ ಹಿಂದೆ ಆಶ್ರಯ ಪಡೆದ ಘಟನೆ ನಡೆದಿದೆ.

ಗಾಜಾ ಪಟ್ಟಿಯಿಂದ ರಾಕೆಟ್ ದಾಳಿ ಸನ್ನಿಹಿತವಾಗಿದೆ ಎಂದು ಎಚ್ಚರಿಸುವ ಸೈರನ್ ಶಬ್ದ ಕೇಳಿದ ಕೂಡಲೇ ಪರ್ವತಗಳ ಹಿಂದೆ ಆಶ್ರಯ ಪಡೆಯಲು ನಾವು ಧಾವಿಸಿದೆವು.ಅಷ್ಟರಲ್ಲಿ ಇನ್ನೊಂದು ರಾಕೆಟ್ ದಾಳಿಯ ಶಬ್ದ ಕೇಳಿಬಂತು ಎಂದು ನಿಯೋಗದ ನಾಯಕ ಮೌಲಾನಾ ಉಮೈರ್ ಇಲ್ಯಾಸಿ ತಿಳಿಸಿದ್ದಾರೆ.

ಅಮೆರಿಕದ ಯಹೂದಿಗಳ ಸಮಿತಿ ಮತ್ತು ಆಸ್ಟ್ರೇಲಿಯ ಇಸ್ರೇಲ್ ಯಹೂದಿ ವ್ಯವಹಾರಗಳ ಮಂಡಳಿಯ ಆಹ್ವಾನದ ಮೇಲೆ ನಿಯೋಗ ಇಸ್ರೇಲ್‌ಗೆ ಭೇಟಿ ನೀಡಿದೆ. ನಿಯೋಗಕ್ಕೆ ಗಾಜಾ ಪಟ್ಟಿಯಿಂದ ಕೇವಲ 800 ಮೀಟರ್ ದೂರವಿರುವ ಸೆಡಾರಟ್‌ಗೆ ಪ್ರವಾಸ ಏರ್ಪಡಿಸಲಾಗಿತ್ತು.

"ಪರ್ವತಗಳ ತುದಿಯಿಂದ ನಾವು ಗಾಟಾ ಪಟ್ಟಿಯನ್ನು ವೀಕ್ಷಿಸುತ್ತಿದ್ದಾಗ ಹಮಾಸ್ ನಿಯಂತ್ರಿತ ಪ್ರದೇಶದಿಂದ ರಾಕೆಟ್‌ಗಳನ್ನು ಹಾರಿಸಲಾಯಿತು" ಎಂದು ಅವರು ತಿಳಿಸಿದರು.
ಮತ್ತಷ್ಟು
ಹನೀಫ್ ವೀಸಾ ರದ್ದು ಆದೇಶ ವಜಾ
ಇಂಡೊ-ಜಪಾನ್ ದ್ವಿಪಕ್ಷೀಯ ಸಂಬಂಧ ವೃದ್ದಿಗೆ ಆದ್ಯತೆ
ಭಾರತೀಯ ಮಹಿಳಾ ಪೊಲೀಸರಿಗೆ ವಿಶ್ವಸಂಸ್ಥೆ ಪ್ರಶಂಸೆ
ವಿಮಾನಕ್ಕೆ ಅಗ್ನಿಸ್ಪರ್ಷ: ತಪ್ಪಿದ ಅನಾಹುತ
ರಾಜಕೀಯ ನಿರ್ಬಂಧ ಹಿಂತೆಗೆತ, ಆಯೋಗ ಇಂಗಿತ
ಭಾರತದೊಂದಿಗೆ ಸೌಹಾರ್ದಯುತ ಸಂಬಂಧ