ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸ್ಫೋಟಗಳಲ್ಲಿ ಕೈವಾಡ: ಪಾಕ್ ನಿರಾಕರಣೆ
ಹೈದರಾಬಾದ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟಗಳಲ್ಲಿ ಪಾಕಿಸ್ತಾನದ ಕೈವಾಡ ನಡೆಸಿದೆ ಎಂಬ ಭಾರತದ ಆರೋಪವನ್ನು ಪಾಕಿಸ್ತಾನ ನಿರಾಕರಿಸಿದೆ. ಭಯೋತ್ಪಾದನೆ ದಾಳಿಗಳ ಬಗ್ಗೆ ತನಿಖೆ ನಡೆಸದೇ ತಮ್ಮತ್ತ ಬೊಟ್ಟು ಮಾಡುವುದರ ವಿರುದ್ಧ ಅದು ಎಚ್ಚರಿಸಿದೆ.

ನಾವೇ ಸ್ವತಃ ಭಯೋತ್ಪಾದನೆಗೆ ಬಲಿಪಶುವಾಗಿದ್ದು, ಅದರ ವಿರುದ್ಧ ಹೋರಾಟಕ್ಕೆ ಬದ್ಧರಾಗಿರುವುದಾಗಿ ವಿದೇಶಾಂಗ ಕಚೇರಿಯ ವಕ್ತಾರ ತಸ್ನೀಮ್ ಅಸ್ಲಾಂ ಹೇಳಿಕೆ ಉಲ್ಲೇಖಿಸಿ ಮಾಧ್ಯಮ ವರದಿಮಾಡಿದೆ.

ಪ್ರತಿ ಮೂರು ತಿಂಗಳಿಗೊಮ್ಮೆ ಚರ್ಚಿಸಬೇಕಾಗಿದ್ದ ಭಯೋತ್ಪಾದನೆ ನಿಗ್ರಹ ವ್ಯವಸ್ಥೆಯ ಗತಿ ಬಗ್ಗೆ ಪ್ರತಿಕ್ರಿಯಿಸಿದ ಅವರು,ದ್ವಿಪಕ್ಷೀಯ ಮಾತುಕತೆಗೆ ವೇಳಾಪಟ್ಟಿ ನಿಗದಿಮಾಡಿಲ್ಲ ಎಂದು ಅಸ್ಲಾಂ ತಿಳಿಸಿದ್ದಾರೆ.

ಪಾಕಿಸ್ತಾನದ ನೂತನ ಹೆಚ್ಚುವರಿ ಕಾರ್ಯದರ್ಶಿ ಅಧಿಕಾರ ವಹಿಸಿಕೊಂಡ ಬಳಿಕ, ಬಹುಶಃ ಭಾರತದ ಸಹೋದ್ಯೋಗಿ ಅವರನ್ನು ಸಂಪರ್ಕಿಸಿ ಭೇಟಿಯ ದಿನಾಂಕವನ್ನು ನಿರ್ಧರಿಸಬಹುದು ಎಂದು ಅವರು ಹೇಳಿದರು.
ಮತ್ತಷ್ಟು
ಭಾರತಕ್ಕೆ ಯುರೇನಿಯಂ ಮಾರಲು ಅವಕಾಶವಿಲ್ಲ
ಇಸ್ರೇಲ್‌ನಿಂದ ಅಣ್ವಸ್ತ್ರ ಪ್ರತಿರೋಧದ ಬಂಕರ್
ಎನ್‌ಪಿಟಿಗೆ ಸಹಿ ಹಾಕಲು ಪಾಕ್ ನಕಾರ
ಪತ್ರಕರ್ತೆ ಹತ್ಯೆ: 8 ಮಂದಿ ಬಂಧನ
ರಷ್ಯಾದಲ್ಲಿ ಅಧಿಕಾರ ಬದಲಿಗೆ ಬೆರೆಜೋವ್‌ಸ್ಕಿ ಕರೆ
ಷರೀಫ್ ಸ್ವದೇಶಕ್ಕೆ ಮರಳಲು ಅವಕಾಶ ಇಲ್ಲ:ಮುಷರಫ್