ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಗಡಿ ವಿವಾದದ ಪ್ರಾಮಾಣಿಕ ಇತ್ಯರ್ಥಕ್ಕೆ ಚೀನಾ ಸಲಹೆ
ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಭಾರತ-ಚೀನಾ ಗಡಿವಿವಾದವನ್ನು ಪ್ರಾಮಾಣಿಕತೆ ಮತ್ತು ಸಹನೆಯಿಂದ ಇತ್ಯರ್ಥಪಡಿಸಬೇಕೆಂದು ಚೀನಾ ಸಲಹೆ ಮಾಡಿದೆ. ಉಭಯ ರಾಷ್ಟ್ರಗಳು ಗಡಿಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತವೆಂದು ಚೀನಾದ ಪ್ರಧಾನಮಂತ್ರಿ ವೆನ್ ಜಿಯಾಬಾವೊ ವಿಶ್ವಾಸ ವ್ಯಕ್ತಪಡಿಸಿದರು.

ಭಾರತ-ಅಮೆರಿಕ ವ್ಯೂಹಾತ್ಮಕ ಸಂಬಂಧದ ಬೆಳವಣಿಗೆ ಮತ್ತು ಚೀನಾ ಈ ಬಗ್ಗೆ ಆತಂಕಿತವಾಗಿರುವ ವರದಿಗಳ ನೇಪಥ್ಯದಲ್ಲಿ ಹೇಳಿಕೆ ನೀಡಿದ ಚೀನಾದ ಮುಖಂಡರು ಎರಡು ರಾಷ್ಟ್ರಗಳು ಪರಸ್ಪರರಿಗೆ ಬೆದರಿಕೆಯಾಗಿಲ್ಲ ಎಂದಿದ್ದಾರೆ.

ಚೀನಾ ಮತ್ತು ಭಾರತದ ನಡುವೆ ಕೆಲವು ವಿವಾದಗಳಿವೆ. ಆದರೆ ಇವುಗಳ ಇತ್ಯರ್ಥಕ್ಕೆ ನಾವು ಕೆಲವು ಮಾರ್ಗದರ್ಶಿ ತತ್ವಗಳನ್ನು ಸ್ಥಾಪಿಸಿದ್ದೇವೆಂದು ವೆನ್ ಹೇಳಿದ್ದಾರೆ.

ಉಭಯ ರಾಷ್ಟ್ರಗಳು ಪ್ರಾಮಾಣಿಕತೆ, ಸಹನೆ ಪ್ರದರ್ಶಿಸಿ, ಪರಸ್ಪರ ವಿಶ್ವಾಸ, ಪರಸ್ಪರ ತಿಳಿವಳಿಕೆಯ ತತ್ವಗಳನ್ನು ಎತ್ತಿಹಿಡಿದರೆ, ಗಡಿ ಸಮಸ್ಯೆಗೆ ಪರಿಹಾರ ಸಿಗುತ್ತದೆಂದು ವೆನ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಮತ್ತಷ್ಟು
ಸ್ಫೋಟಗಳಲ್ಲಿ ಕೈವಾಡ: ಪಾಕ್ ನಿರಾಕರಣೆ
ಭಾರತಕ್ಕೆ ಯುರೇನಿಯಂ ಮಾರಲು ಅವಕಾಶವಿಲ್ಲ
ಇಸ್ರೇಲ್‌ನಿಂದ ಅಣ್ವಸ್ತ್ರ ಪ್ರತಿರೋಧದ ಬಂಕರ್
ಎನ್‌ಪಿಟಿಗೆ ಸಹಿ ಹಾಕಲು ಪಾಕ್ ನಕಾರ
ಪತ್ರಕರ್ತೆ ಹತ್ಯೆ: 8 ಮಂದಿ ಬಂಧನ
ರಷ್ಯಾದಲ್ಲಿ ಅಧಿಕಾರ ಬದಲಿಗೆ ಬೆರೆಜೋವ್‌ಸ್ಕಿ ಕರೆ