ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮುಶರ್ರಫ್ ವಿರುದ್ಧ ಅರ್ಜಿ ಅಂಗೀಕಾರ
WDWD
ಪಾಕಿಸ್ತಾನದ ಅಧ್ಯಕ್ಷ ಮುಶರ್ರಫ್ ಸೇನಾ ಮುಖ್ಯಸ್ಥರಾಗಿ ಮುಂದುವರಿಯುವುದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸುವ ಮೂಲಕ ಅವರು ಹೊಸ ಸವಾಲನ್ನು ಎದುರಿಸಬೇಕಾಗಿದೆ.

ಮುತಾಹಿದಾ ಮಜ್ಲಿಸ್-ಎ-ಅಮಲ್ ಇಸ್ಲಾಮಿಕ್ ಕೂಟದ ಅಧ್ಯಕ್ಷ ಕಾಜಿ ಹುಸೇನ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯಲ್ಲಿ ಆಗಸ್ಟ್ 2003ರಲ್ಲಿ ಮುಶರ್ರಫ್ ನಿವೃತ್ತಿ ವಯಸ್ಸನ್ನು ದಾಟಿದ್ದರೂ ಸೇನಾಮುಖ್ಯಸ್ಥರಾಗಿ ಅಕ್ರಮವಾಗಿ ಮುಂದುವರಿದಿದ್ದಾರೆ ಎಂದು ಆರೋಪಿಸಲಾಗಿತ್ತು.

ಅಹ್ಮದ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂಬ ಕೋರ್ಟ್ ರಿಜಿಸ್ಟ್ರಾರ್ ಕಚೇರಿಯ ಆಕ್ಷೇಪಗಳನ್ನು ತಳ್ಳಿಹಾಕಿದ ಮೂವರು ನ್ಯಾಯಾಧೀಶರ ಪೀಠ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿತು.

2003 ಆಗಸ್ಟ್‌ನಲ್ಲಿ 60 ವರ್ಷಗಳನ್ನು ಪೂರೈಸಿರುವ ಮುಶರ್ರಫ್ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ ಮತ್ತು ಸಮವಸ್ತ್ರ ತ್ಯಜಿಸುವುದಾಗಿ 2004ರಲ್ಲಿ ನೀಡಿದ್ದ ಸಾರ್ವಜನಿಕ ಭರವಸೆಯನ್ನು ಮುರಿದರು ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಜನರಲ್ ಸ್ವತಃ ತಮ್ಮ ಸೇವಾವಧಿಯನ್ನು ವಿಸ್ತರಿಸಿಕೊಳ್ಳುವಂತಿಲ್ಲ ಎಂದೂ ಅರ್ಜಿದಾರರು ವಾದಿಸಿದ್ದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಚೌಧರಿಯವರನ್ನು ಪದಚ್ಯುತಿಗೊಳಿಸುವ ಮುಷರ್ರಫ್ ಪ್ರಯತ್ನ ವಿಫಲವಾದಾಗಿನಿಂದ ಸುಪ್ರೀಂಕೋರ್ಟ್ ತೀರ್ಪುಗಳು ಸರ್ಕಾರದ ವಿರುದ್ಧ ಹೊರಬೀಳುತ್ತಿವೆ. ಗಡೀಪಾರಾದ ಮಾಜಿ ಪ್ರಧಾನಿ ನವಾಜ್ ಶರೀಫ್ ವಾಪಸಾತಿಗೆ ಅನುಮತಿ ನೀಡಿದ್ದೂ ಸೇರಿ ಜನರಲ್‌ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ.
ಮತ್ತಷ್ಟು
ಸಮವಸ್ತ್ರ ತ್ಯಜಿಸಲಿರುವ ಮುಷರ್ರಫ್:ಭುಟ್ಟೊ
ಗಡಿ ವಿವಾದದ ಪ್ರಾಮಾಣಿಕ ಇತ್ಯರ್ಥಕ್ಕೆ ಚೀನಾ ಸಲಹೆ
ಸ್ಫೋಟಗಳಲ್ಲಿ ಕೈವಾಡ: ಪಾಕ್ ನಿರಾಕರಣೆ
ಭಾರತಕ್ಕೆ ಯುರೇನಿಯಂ ಮಾರಲು ಅವಕಾಶವಿಲ್ಲ
ಇಸ್ರೇಲ್‌ನಿಂದ ಅಣ್ವಸ್ತ್ರ ಪ್ರತಿರೋಧದ ಬಂಕರ್
ಎನ್‌ಪಿಟಿಗೆ ಸಹಿ ಹಾಕಲು ಪಾಕ್ ನಕಾರ