ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
12 ದ.ಕೊರಿಯ ಒತ್ತೆಯಾಳುಗಳ ಬಿಡುಗಡೆ
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಸೆರೆಯಾಳಾಗಿದ್ದ 19 ದಕ್ಷಿಣ ಕೊರಿಯನ್ನರಲ್ಲಿ 12 ಮಂದಿಯನ್ನು ಸೋಲ್ ಜತೆ ಮಾಡಿಕೊಂಡ ಒಪ್ಪಂದದ ಅನ್ವಯ ಬುಧವಾರ ಬಿಡುಗಡೆ ಮಾಡಲಾಗಿದೆ. ಉಳಿದ 7 ಮಂದಿಯನ್ನು ಮುಂದಿನ 48 ಗಂಟೆಗಳಲ್ಲಿ ಬಂಧಮುಕ್ತಗೊಳಿಸುವುದಾಗಿ ತಾಲಿಬಾನ್ ಅಧಿಪತಿಗಳು ತಿಳಿಸಿದ್ದಾರೆ.

ಮೊದಲಿಗೆ ಬಿಡುಗಡೆಯಾದ ಮೂವರು ಮಹಿಳೆಯರು ಕೆಂಪು ಮತ್ತು ಹಸಿರು ಶಾಲುಗಳನ್ನು ಮುಖಕ್ಕೆ ಹೊದ್ದಿದ್ದು, ಕಾಲಾ-ಎ-ಕಾಜಿಗೆ ಕಾರೊಂದರಲ್ಲಿ ಆಗಮಿಸಿದರು. ಮಂಗಳವಾರದ ಒಪ್ಪಂದದ ಪ್ರಕಾರ,ಈ ವರ್ಷಾಂತ್ಯದಲ್ಲಿ ಆಫ್ಘಾನಿಸ್ತಾನದಿಂದ ತನ್ನ ಪಡೆಗಳನ್ನು ದಕ್ಷಿಣ ಕೊರಿಯಾ ಹಿಂತೆಗೆದುಕೊಳ್ಳಬೇಕಾಗಿದೆ.

ಸಂಪ್ರದಾಯನಿಷ್ಠ ಮುಸ್ಲಿಂ ರಾಷ್ಟ್ರದಲ್ಲಿ ದಕ್ಷಿಣ ಕೊರಿಯ ಕ್ರೈಸ್ತಧರ್ಮ ಪ್ರಚಾರಕರ ಉಪಸ್ಥಿತಿಯನ್ನು ತಪ್ಪಿಸುವುದಾಗಿ ಸೋಲ್ ಭರವಸೆ ನೀಡಿದೆ. ಸೆರೆಯಾಳುಗಳ ವಿನಿಯಮದ ಹಿಂದಿನ ಒತ್ತಾಯವನ್ನು ತಾಲಿಬಾನ್ ಕೈಬಿಟ್ಟಿದೆ.

ಆಫ್ಘಾನಿಸ್ತಾನದ ವಾಣಿಜ್ಯ ಸಚಿವ ಅಮೀನ್ ಫರಾಂಗ್ ಈ ಒಪ್ಪಂದಕ್ಕೆ ವಿರೋಧ ಸೂಚಿಸಿದ್ದಾರೆ. ಇದರಿಂದ ಆಫ್ಘನ್‌ನಲ್ಲಿ ನಮ್ಮ ಕಷ್ಟಗಳು ಹೆಚ್ಚುತ್ತವೆ ಎಂದು ಜರ್ಮನಿಯ ರೇಡಿಯೊಗೆ ತಿಳಿಸಿದ್ದಾರೆ.
ಮತ್ತಷ್ಟು
ಮುಶರ್ರಫ್ ವಿರುದ್ಧ ಅರ್ಜಿ ಅಂಗೀಕಾರ
ಸಮವಸ್ತ್ರ ತ್ಯಜಿಸಲಿರುವ ಮುಷರ್ರಫ್:ಭುಟ್ಟೊ
ಗಡಿ ವಿವಾದದ ಪ್ರಾಮಾಣಿಕ ಇತ್ಯರ್ಥಕ್ಕೆ ಚೀನಾ ಸಲಹೆ
ಸ್ಫೋಟಗಳಲ್ಲಿ ಕೈವಾಡ: ಪಾಕ್ ನಿರಾಕರಣೆ
ಭಾರತಕ್ಕೆ ಯುರೇನಿಯಂ ಮಾರಲು ಅವಕಾಶವಿಲ್ಲ
ಇಸ್ರೇಲ್‌ನಿಂದ ಅಣ್ವಸ್ತ್ರ ಪ್ರತಿರೋಧದ ಬಂಕರ್