ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪ್ರೀತಿಯಿಂದ ಪ್ರೀತಿಗಾಗಿ ಹಪಹಪಿಸಿದ ಡೈ
ಹೀಗಿತ್ತು ರಾಜಕುಮಾರಿ ಡಯಾನಾ ಖಾಸಗಿ ಜೀವನ
ಸತೀಶ್ ಪಾಗಾದ್
ಪ್ರೀತಿಯ ಕೊರಗಿನಲ್ಲಿ ಸತ್ತ  ಡಯಾನಾ
WD
ರಾಜ ಕುವರ ಚಾರ್ಲ್ಸ್ ಎಂದೂ ಅವಳನ್ನು ಪ್ರೀತಿಸಲಿಲ್ಲ. ಬಹುಶಃ ಸತ್ತ ಮೇಲೂ ಅಂತ ಕಾಣ್ತದೆ. ಈಗ ಅವಳಿಲ್ಲ. ಚಾರ್ಲ್ಸ್ ಮದುವೆಯಾಗಿದ್ದಾನೆ ತನ್ನ ಪ್ರೇಯಸಿ ಕ್ಯಾಮಿಲ್ಲಾ ಪಾರ್ಕರ್ ಬೌಲಳನ್ನು. ಡಯಾನಾ ಇಂದು ಬದುಕಿದ್ದರೆ, ಮತ್ತೊಂದು ಮದುವೆಯಾಗುತ್ತಿದ್ದಳಾ?

ಖಂಡಿತವಾಗಿ. ಅದು ಈಜಿಪ್ತ್ ಮೂಲದ ಮುಸ್ಲಿಂ ದೋದಿ ಅಲ್ ಫಯಾದ್‌ನೊಂದಿಗೆ ಅಲ್ಲ.

ಅವಳ ಗಂಡನ ಸ್ಥಾನದಲ್ಲಿ, ಪಾಕಿಸ್ತಾನಿ ಪಠಾಣ್ ಹಸ್ನತ್ ಖಾನ್ ಇರುತ್ತಿದ್ದನೋ ಏನೋ? ವಿಧಿ ಬೇರೆಯದನ್ನೇ ಬರೆದಿತ್ತು. ಚಾರ್ಲ್ಸ್‌ನೊಂದಿಗೆ ಕೆನಿಂಗ್ಸ್‌ಟನ್ ಅರಮನೆಯಲ್ಲಿ ಇದ್ದಾಗ ಹಸ್ನತ್-ಡಯಾನಾ ನಡುವೆ ಪ್ರೀತಿ ಮೊಳಕೆ ಒಡೆದಿತ್ತು.

ದುರಾದೃಷ್ಟ ಎಂತದು ನೋಡಿ. ಹಸ್ನತ್ ನಾಚಿಕೆ ಸ್ವಭಾವದ ಸಭ್ಯ ಸಂಪ್ರದಾಯಸ್ಥ ವ್ಯಕ್ತಿ. ನಮ್ಮಿಬ್ಬರ ನಡುವೆ ಪ್ರೀತಿ ಇರಬಹುದು, ಮದುವೆ ಸಾಧ್ಯವಿಲ್ಲ ಎಂದು ಹೇಳಿದ್ದ. ಹಸ್ನತ್ ಡಯಾನಾಳ ನಿಜವಾದ ಪ್ರಿಯಕರ. ಅವನಿಗಾಗಿ ಏನೆಲ್ಲ ಮಾಡಿದ್ದಳವಳು!

ಕಸದಿಂದ ತುಂಬಿಕೊಂಡಿದ್ದ ಅವನ ಫ್ಲ್ಯಾಟ್ ಸ್ವಚ್ಛಗೊಳಿಸಿದ್ದಳು. ಪೊರಕೆಯ ಹೆಸರು ಕೇಳದವಳು ಕೈಯಲ್ಲಿ ಪೊರಕೆ ಹಿಡಿದಿದ್ದಳು. ಅವನ ಬಿಳಿ ಏಪ್ರನ್‌ಗೆ ಚೆಂದದ ಇಸ್ತ್ರಿ ಹಾಕಿದ್ದಳು. ಆದರೂ ಅವಳಿಗೆ ಅವನು ಸಿಗಲಿಲ್ಲ. ಸಿಗಲಿಲ್ಲ ಎಂದು ಗೊತ್ತಾದ ನಂತರವೇ ದೋದಿ ಎಂಬ ಮಾದಕ ವ್ಯಸನಿಯೊಂದಿಗೆ ತಿರುಗಲು ಪ್ರಾರಂಭಿಸಿದ್ದು. ಆದರೆ ಅಲ್ಲಿ ಪ್ರೀತಿ ಇರಲಿಲ್ಲ. ಹಸ್ನತ್ ಹೊಟ್ಟೆ ಉರಿದುಕೊಂಡು ತನ್ನ ಬಳಿ ಬರಲಿ ಎನ್ನುವುದು ಅವಳ ಉದ್ದೇಶವಾಗಿತ್ತು.

ಕೊನೆಗೂ ಬಂದ ಅವಳ ಬಳಿಗೆ ಸಚ್ಚಾ ಪ್ಯಾರ್ ಹಸ್ನತ್... ಎಲ್ಲಿ ಗೊತ್ತಾ. ಅವಳ ಅಂತ್ಯ ಸಂಸ್ಕಾರ ನಡೆಯುತ್ತಿದ್ದ ವೆಸ್ಟ್ ಮಿನಿಸ್ಟರ್ ಅಬೆಗೆ! ಅವಳು ಬದುಕಿದ್ದಾಗ, "ನೀನೇ ನನ್ನ ಪ್ರೀತಿ" ಎಂದು ಹೇಳಲಿಲ್ಲ. ಅವನಿಗೂ ತನ್ನ ಪ್ರೀತಿ ಬಚ್ಚಿಡುವುದಕ್ಕೆ ಆಗಲಿಲ್ಲ. ಸುಮ್ಮನೆ ನಿಂತ... ಸತ್ತ ಹಾಗೆ. ಕಣ್ಣಿಗೆ ಕಪ್ಪು ಗ್ಲಾಸ್ ಹಾಕಿಕೊಂಡಿದ್ದರೂ, ಪಕ್ಕದ ಮನೆ ಹುಡುಗಿ ಇಲ್ಲ ಎಂದು ತಿಳಿದ ಮೇಲೆ ಹ್ಯಾಗಿರಬೇಕು ಹಾಗಿದ್ದ.
ಮತ್ತಷ್ಟು
12 ದ.ಕೊರಿಯ ಒತ್ತೆಯಾಳುಗಳ ಬಿಡುಗಡೆ
ಮುಶರ್ರಫ್ ವಿರುದ್ಧ ಅರ್ಜಿ ಅಂಗೀಕಾರ
ಸಮವಸ್ತ್ರ ತ್ಯಜಿಸಲಿರುವ ಮುಷರ್ರಫ್:ಭುಟ್ಟೊ
ಗಡಿ ವಿವಾದದ ಪ್ರಾಮಾಣಿಕ ಇತ್ಯರ್ಥಕ್ಕೆ ಚೀನಾ ಸಲಹೆ
ಸ್ಫೋಟಗಳಲ್ಲಿ ಕೈವಾಡ: ಪಾಕ್ ನಿರಾಕರಣೆ
ಭಾರತಕ್ಕೆ ಯುರೇನಿಯಂ ಮಾರಲು ಅವಕಾಶವಿಲ್ಲ