ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಶರೀಫ್ ಸೆ.10ರಂದು ಸ್ವದೇಶಕ್ಕೆ ವಾಪಸ್
ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ತಮ್ಮ ಗಡೀಪಾರು ಅವಧಿಯನ್ನು ಅಂತ್ಯಗೊಳಿಸಿ ಸೆ.10ರಂದು ಸ್ವದೇಶಕ್ಕೆ ವಾಪಸಾಗಲಿದ್ದಾರೆ ಎಂದು ಅವರ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಲಂಡನ್‌ನಲ್ಲಿ ನಡೆದ ಪಾಕಿಸ್ತಾನ ಮುಸ್ಲಿಂ ಲೀಗ್‌ನ ಎರಡು ದಿನಗಳ ಸಭೆಯಲ್ಲಿ ಶರೀಫ್ ಸೆ.10ರಂದು ಸ್ವದೇಶಕ್ಕೆ ಹಿಂತಿರುಗಬೇಕೆಂದು ನಿರ್ಧರಿಸಲಾಯಿತು. ಅಧ್ಯಕ್ಷ ಮುಷರ್ರಫ್ ಅವರ ಕಡು ವೈರಿಯಾದ ಶರೀಫ್ ಅವರನ್ನು 8 ವರ್ಷಗಳ ಹಿಂದೆ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಸೌದಿ ಅರೇಬಿಯಾಗೆ ಗಡೀಪಾರು ಮಾಡಲಾಗಿತ್ತು. ಪ್ರಸಕ್ತ ಅವರು ಲಂಡನ್‌ನಲ್ಲಿ ವಾಸವಿದ್ದಾರೆ.

ಶರೀಫ್ ರಾಷ್ಟ್ರಕ್ಕೆ ವಾಪಸಾಗಿ ಸಂಸತ್ ಚುನಾವಣೆಯಲ್ಲಿ ಭಾಗವಹಿಸಬಹುದು ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಕಳೆದ ವಾರ ತೀರ್ಪು ನೀಡಿತ್ತು.
ಮತ್ತಷ್ಟು
ಭಾರತದ ಹೇಳಿಕೆ ನಿರಾಧಾರ:ಪಾಕ್
ಪ್ರೀತಿಯಿಂದ ಪ್ರೀತಿಗಾಗಿ ಹಪಹಪಿಸಿದ ಡೈ
ಅವಳು ಪ್ರೀತಿಗಾಗಿ ಕಾದಿದ್ದಳು
12 ದ.ಕೊರಿಯ ಒತ್ತೆಯಾಳುಗಳ ಬಿಡುಗಡೆ
ಮುಶರ್ರಫ್ ವಿರುದ್ಧ ಅರ್ಜಿ ಅಂಗೀಕಾರ
ಸಮವಸ್ತ್ರ ತ್ಯಜಿಸಲಿರುವ ಮುಷರ್ರಫ್:ಭುಟ್ಟೊ