ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ದಕ್ಷಿಣ ಆಫ್ರಿಕಕ್ಕೆ ಪ್ರಧಾನಿ ಪ್ರಯಾಣ
PTI
ನೈಜೀರಿಯಕ್ಕೆ ಎರಡು ದಿನಗಳ ಭೇಟಿ ಬಳಿಕ ಪ್ರಧಾನಮಂತ್ರಿ ಮನಮೋಹನ ಸಿಂಗ್ ಮಂಗಳವಾರ ಐಬಿಎಸ್‌ಎ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ಕಡೆ ಪ್ರಯಾಣ ಬೆಳೆಸಿದರು. ನೈಜೀರಿಯದಲ್ಲಿ ವ್ಯಾಪಾರ ಮತ್ತು ಬಂಡವಾಳ ಸೇರಿದಂತೆ ದ್ವಿಪಕ್ಷೀಯ ಸಹಕಾರ ಉತ್ತೇಜನಕ್ಕೆ ಅವರು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದರು.

ನೈಜೀರಿಯ ರಾಷ್ಟ್ರೀಯ ಅಸೆಂಬ್ಲಿಯ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಿಂಗ್ ಅವರಿಗೆ ನೈಜೀರಿಯದ ಅಧ್ಯಕ್ಷ ಯಾರ್‌ಡುವಾ ಸ್ಟೇಟ್ ಹೌಸ್‌ನಲ್ಲಿ ಸರ್ಕಾರಿ ಗೌರವದಿಂದ ಬೀಳ್ಕೊಡುಗೆ ನೀಡಿದರು.

ಪ್ರಿಟೋರಿಯದಲ್ಲಿ ನಡೆಯಲಿರುವ ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ(ಐಬಿಎಸ್‌ಎ) ಶೃಂಗಸಭೆಯಲ್ಲಿ ಮೂರು ರಾಷ್ಟ್ರಗಳ ನಡುವೆ ಸಂಬಂಧಕ್ಕೆ ವಾಸ್ತವ ರೂಪ ನೀಡಲು ಮನಮೋಹನ ಸಿಂಗ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ತಾಬೊ ಎಂಬೆಕಿ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವ ಮಾರ್ಗೋಪಾಯ ಅರಸಲಿದ್ದಾರೆ.

ಸಾರ್ವಜನಿಕ ಆಡಳಿತ, ಉನ್ನತ ಶಿಕ್ಷಣ, ಆರೋಗ್ಯ ಮತ್ತು ವೈದ್ಯಕೀಯ, ಸಾಮಾಜಿಕ ಅಭಿವೃದ್ಧಿ, ಸಾಂಸ್ಕೃತಿಕ ಸಹಕಾರ ಮತ್ತು ಇಂಧನ ಕುರಿತು ಜಂಟಿ ಘೋಷಣೆ ಮತ್ತು ಒಡಂಬಡಿಕೆಯನ್ನು ಸಭೆಯಲ್ಲಿ ಮಾಡಿಕೊಳ್ಳಲಾಗುವುದು.

ಎರಡು ದಿನಗಳ ಭೇಟಿಯ ಕಾಲದಲ್ಲಿ ಪ್ರಧಾನಮಂತ್ರಿ ಪರಮಾಣು ಇಂಧನ ಸರಬರಾಜು ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಾಯಕರ ಜತೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಮತ್ತಷ್ಟು
ಮ್ಯಾನ್ಮಾರ್‌ಗೆ ಜಪಾನ್ ನೆರವು ಮೊಟಕು
ಎಲ್ಟಿಟಿಇ ದಾಳಿ: 7 ಸೈನಿಕರ ಹತ್ಯೆ
ಭಾರತ-ನೈಜಿರಿಯಾ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ
ಬಂಧನ ನಿಲ್ಲಿಸಲು ಮ್ಯಾನ್ಮಾರ್‌ಗೆ ಆದೇಶ
ಇಂಟರ್‌ನೆಟ್‌ನಲ್ಲಿ ಕಾರ್ ಬಾಂಬ್ ವಿಡಿಯೋ
ನವಾಜ್ ಲಂಡನ್‌ಗೆ ತೆರಳುವ ನಿರ್ಧಾರವಿಲ್ಲ