ಗೋಡೆಯ ಇನ್ನೊಂದು ಬದಿ ಏನಿದೆಯೆಂದು ಪರಿಣಾಮಕಾರಿಯಾಗಿ ನೋಡಲು ರಾಷ್ಟ್ರದ ಮಿಲಿಟರಿಗಾಗಿ ಉಪಕರಣವೊಂದನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ.
ವೈರ್‌ಲೆಸ್ ರೆಡಾರ್ ತಂತ್ರಜ್ಞಾನವಾದ ದಿ ಲೈಫ್ ರೀಡರ್ ಗೋಡೆಯಾಚೆಯಿರುವ ವ್ಯಕ್ತಿಯ ಜತೆ ಯಾವುದೇ ಸಂಪರ್ಕವಿಲ್ಲದೇ ಹೃದಯ ಮತ್ತು ಉಸಿರಾಟದ ಚಟುವಟಿಕೆಗಳನ್ನು ನಿಖರವಾಗಿ ಗುರುತಿಸಬಲ್ಲದು ಮತ್ತು ಅಳೆಯಬಲ್ಲದು.
ಇದಕ್ಕೆ ಮಿಮೊ ಡಾಪ್ಲರ್ ರೆಡಾರ್ ತಂತ್ರಜ್ಞಾನವನ್ನು ಕಂಪ್ಯೂಟರ್ ವಿಶ್ಲೇಷಣೆಯೊಂದಿಗೆ ಬಳಸಲಾಗುವುದು. ಇದರ ಸಂಶೋಧಕರು ಈ ಉಪಕರಣವು ಇರಾಕ್‌ನ ಪಡೆಗಳಿಗೆ ಡಾರ್ಪಾ ಸೃಷ್ಟಿಸಿದ ರೆಡಾರ್ ಸ್ಕೋಪ್‌ಗಿಂತ ಹೆಚ್ಚು ನಿಖರ ಮತ್ತು ನಿರ್ದಿಷ್ಚ ಉಪಕರಣವೆಂದು ಹೇಳಿದ್ದಾರೆ.
|