ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳನಲ್ಲಿ ಐತಿಹಾಸಿಕ ಚುನಾವಣೆ ಪ್ರಾರಂಭ
ನೇಪಾಳದ ಸಂಸತ್ತಿಗೆ ಗುರುವಾರ ಚುನಾವಣೆ ನಡೆದಿದ್ದು. ಈ ಚುನಾವಣೆಯು ಶತ ಶತಮಾನಗಳಿಂದ ಹಿಮಾಲಯನ್ ಸಾಮ್ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದ ರಾಜ್ಯಾಡಳಿತ ಮತ್ತು ಭವಿಷ್ಯದ ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸಲಿದೆ.

ಭಾರತೀಯ ಕಾಲಮಾನ ಅನುಸಾರ ಮುಂಜಾನೆ ಏಳು ಗಂಟೆಗೆ ಚುನಾವಣೆ ಪ್ರಾರಂಭವಾಗಿದ್ದು, ಸಾಯಂಕಾಲ ಐದು ಗಂಟೆಗೆ ಮತದಾನ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಪ್ರಮಾಣ ಅನುಗತ ಮತದಾನ ವ್ಯವಸ್ಥೆಯಲ್ಲಿ ಸುಮಾರು 6 ಸಾವಿರ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ. 4,021 ಅಭ್ಯರ್ಥಿಗಳು ನೇರವಾಗಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಟ್ಟಾರೆ 55 ವಿವಿಧ ರಾಜಕೀಯ ಪಕ್ಷಗಳು ನಿರ್ಣಾಯಕ ಚುನಾವಣೆಯಲ್ಲಿ ಭಾಗವಹಿಸಿದ್ದು. 17..6 ದಶಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ.

239 ವರ್ಷಗಳ ಇತಿಹಾಸವಿರುವ ರಾಜ್ಯಾಡಳಿತ ಮತ್ತು ಸಂವಿಧಾನ ಪುನರ್ ವಿಮರ್ಶೆಯನ್ನು ಮಾಡಲಿರುವ ಸಂಸತ್ತಿಗೆ ನಡೆಯಲಿರುವ ಚುನಾವಣೆ ಪ್ರಚಾರದ ಕಾಲಕ್ಕೆ ನೇಪಾಳದಲ್ಲಿ ಸಾಕಷ್ಟು ಹಿಂಸೆ ಮತ್ತು ಪ್ರಕ್ಷುಬ್ಧ ವಾತಾವರಣ ತಲೆದೊರಿತ್ತು.

ನವ್ಹಂಬರ್ 2006ರಲ್ಲಿ ಮಾವೋವಾದಿಗಳು ಶಾಂತಿ ಸಂಧಾನಕ್ಕೆ ಒಪ್ಪಿಗೆ ಸೂಚಿಸಿ ರಾಜಕೀಯ ವ್ಯವಹಾರದ ಮುಖ್ಯ ವಾಹಿನಿಯನ್ನು ಪ್ರವೇಶಿಸಿದ ಪರಿಣಾಮವಾಗಿ ನೇಪಾಳದಲ್ಲಿ ಶಾಂತಿ ನೆಲೆಗೊಂಡಿದೆ.

ಆಡಳಿತದಲ್ಲಿ ಇರುವ ಏಳು ಪಕ್ಷಗಳ ಸಮ್ಮಿಶ್ರ ಸರಕಾರವು ರಾಜ್ಯಾಡಳಿತ ಪದ್ದತಿಯ ರದ್ದತಿ ಮತ್ತು ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಸಾಮಾನ್ಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ.
ಮತ್ತಷ್ಟು
ಇದು ನಿಜ: ಶ್ವಾಸಕೋಶವಿಲ್ಲದ ಕಪ್ಪೆ ಇಲ್ಲಿದೆ
ಮೇ 20ರಂದು ಇಂಡೊ-ಪಾಕ್ ಮಾತುಕತೆ
ನೇಪಾಳ: 7 ಮಾವೋವಾದಿಗಳ ಹತ್ಯೆ
ಉಗ್ರರ ನಂಟಿರುವ ಮುಸ್ಲೀಂರ ಬಿಡುಗಡೆ
ಸೇನಾಪಡೆ ವಾಪಸಾತಿಗೆ ಹಿಲರಿ ಒತ್ತಾಯ
ಸಂಪ್ರದಾಯ ಮುರಿದ ಪಾಕ್ ಅಧ್ಯಕ್ಷ