ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಲಿಂಟನನ್ ಹೇಳಿಕೆ ವಿರುದ್ದ ಇರಾನ್ ವಿ. ಸಂಗೆ ದೂರು
ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಹಿಲ್ಲರಿ ಕ್ಲಿಂಟನ್ ಅವರು, ಇಸ್ರೇಲ್ ಮೇಲೆ ಇರಾನ್ ಪರಮಾಣು ಬಾಂಬು ದಾಳಿ ಮಾಡಿದ್ದಲ್ಲಿ ಅಮೆರಿಕ ಇಸ್ಲಾಮಿಕ್ ರಿಪಬ್ಲಿಕನ್ನು ಸಂಪೂರ್ಣವಾಗಿ ನಾಶಮಾಡಲಿದೆ ಎಂದು ಹೇಳಿರುವುದರ ವಿರುದ್ಧ ಇರಾನ್ ಮೇಲೆ ವಿಶ್ವ ಸಂಸ್ಥೆಗೆ ದೂರು ನೀಡಿದೆ.

ವಿಶ್ವ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಬಾನ್ ಕಿ ಮೂನ್‌ ಅವರಿಗೆ ಬರೆದಿರುವ ಪತ್ರದಲ್ಲಿ ವಿಶ್ವಸಂಸ್ಥೆಗೆ ಇರಾನಿನ ಉಪ ರಾಯಭಾರಿ ಮಹಿದ್ ದಾನೇಶ್ ಯಾಜಿದಿ ಅವರು ಬರೆದಿರುವ ಪ್ರತದಲ್ಲಿ ಹಿಲರಿ ಹೇಳಿಕೆಯು ಪ್ರಚೋದನಕಾರಿ, ಅನಪೇಕ್ಷಿತ ಮತ್ತು ಬೇಜವಾಬ್ದಾರಿಯುತವಾದದ್ದು ಎಂದು ದೂರಿದ್ದಾರೆ.

ಕಳೆದ ಎಪ್ರಿಲ್ 30ರಂದು ಇರಾನ್ ವಿಶ್ವ ಸಂಸ್ಥೆಗೆ ಬರೆದ ಪತ್ರದಲ್ಲಿ, ಹಿಲರಿಯವರ ಈ ಹೇಳಿಕೆಯು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸುರಕ್ಷೆಗಾಗಿ ವಿಶ್ವ ಸಂಸ್ಥೆಯ ಪ್ರಯತ್ನಗಳಿಗೆ ಈ ಹೇಳಿಕೆಯು ಅಡ್ಡಿಯುಂಟುಮಾಡುತ್ತಿದೆ ಎಂದು ಹೇಳಿದ್ದಾರೆ.

ಎಪ್ರಿಲ್ 22ರಂದು ಎಬಿಸಿ ಚಾನಲ್‌ನಲ್ಲಿ ಕ್ಲಿಂಟನ್ ಕುರಿತು ನಡೆಸಿದ ಸಂದರ್ಶನ ಕಾರ್ಯಕ್ರಮದಲ್ಲಿ, ಒಂದು ವೇಳೆ ಇರಾನ್ ಇಸ್ರೇಲ್ ಮೇಲೆ ಪರಮಾಣು ಬಾಂಬ್ ಪ್ರಯೋಗ ಮಾಡಿದಲ್ಲಿ ಅಮೆರಿಕದ ಅಧ್ಯಕ್ಷೆಯಾಗಿ ನೀವೇನು ಮಾಡುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಹಿಲರಿ, ಇರಾನ್ ಈ ರೀತಿ ಮಾಡಿದಲ್ಲಿ ಅಮೆರಿಕವು, ಇರಾನ್ ಇಸ್ಲಾಮಿಕ್ ರಿಪಬ್ಲಿಕ್ ಅನ್ನು ಸಂಪೂರ್ಣ ನಾಶ ಮಾಡಲಿದೆ ಎಂದು ಉತ್ತರಿಸಿದರು.

ಸಮೂಹ ನಾಶಗಳ ಎಲ್ಲಾ ಅಸ್ತ್ರಗಳನ್ನು ಇರಾನ್ ವಿರೋಧಿಸುತ್ತಿದೆ, ಇರಾನ್‌ಗೆ ಬೇರೆ ರಾಷ್ಟ್ರಗಳ ಮೇಲೆ ದಾಳಿ ಮಾಡುವ ಉದ್ದೇಶವಿಲ್ಲ. ಒಂದು ವೇಳೆ ತಮ್ಮ ರಾಷ್ಟ್ರದ ಮೇಲೆ ಬೇರೆ ದೇಶಗಳು ದಾಳಿ ನಡೆಸಿದಲ್ಲಿ, ಇರಾನ್ ತನ್ನ ದೇಶದ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ದಾನೇಶ್ ಯಾಜಿದಿ ಹೇಳಿದ್ದಾರೆ.
ಮತ್ತಷ್ಟು
ಶಾಶ್ವತ ಪರಿಹಾರ ಬೇಕು: ರೈಸ್
ಮಾನ್ಮಾರ್ ವಿರುದ್ಧ ಅಮೆರಿಕದ ದಿಗ್ಬಂಧನ ಮುಂದುವರಿಕೆ
ಭಾರತದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಸೌಕರ್ಯ ಅಡ್ಡಿ: ಅಮೆರಿಕ
ಅಮೆರಿಕ-ಭಾರತ ಭಾವೀ ಸರಕಾರಗಳಿಂದ ಅಣುಬಂಧ ಜಾರಿ
ಕೊಲೊಂಬಿಯಾ: ಡ್ರಗ್ ಮಾಫಿಯಾ ಮೆಜಿಯಾ ಹತ್ಯೆ
ಅಮೆರಿಕ ಸೈನಿಕರ ದಾಳಿಗೆ 28 ಶಿಯಾ ಉಗ್ರರ ಬಲಿ