ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಏರಿಕೆಗೆ ಭಾರತದ ಮಧ್ಯಮ ವರ್ಗ ಕಾರಣ : ಬುಷ್
ಭಾರತದಲ್ಲಿರುವ ಮಧ್ಯಮ ವರ್ಗವು ಹೆಚ್ಚು ಆಹಾರಕ್ಕೆ ಬೇಡಿಕೆ ಉಂಟುಮಾಡುತ್ತಿರುವುದರಿಂದ, ಜಾಗತಿಕವಾಗಿ ಆಹಾರೋತ್ಪಾದನೆಗಳ ಬೆಲೆ ಏರಿಕೆಯಾಗುತ್ತಿದೆ ಮತ್ತು ಇದು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಅಮೆರಿಕಾದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಹೇಳಿದ್ದಾರೆ.

ಶುಕ್ರವಾರ ಅಮೆರಿಕಾದ ಮಿಸ್ಸೋರಿಯ ಮೆರಿಲ್ಯಾಂಡ್‌‌ ಹೈಟ್ಸ್‌ನಲ್ಲಿ ವರ್ಲ್ ವೈಡ್ ಟೆಕ್ನಾಲಾಜಿ ಇಂಕ್ ಎನ್ನುವ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿ, ಭಾರತದಲ್ಲಿ ಮಧ್ಯಮ ವರ್ಗವು ಪ್ರವರ್ಧಮಾನಕ್ಕೆ ಬರುತ್ತಿದೆ. ಇದರಿಂದಾಗಿ ಅವಕಾಶಗಳು ಹೆಚ್ಚಿದೆ. ಇದು ಆಹಾರೋತ್ಪನ್ನಗಳಿಗೆ ಹೆಚ್ಚು ಬೇಡಿಕೆಯನ್ನು ಉಂಟುಮಾಡುವ ಜೊತೆಗೆ ಬೆಲೆ ಏರಿಕೆಗೂ ಸಹಕಾರ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿನ ಮಧ್ಯಮ ವರ್ಗದ ಜನರ ಅಂಕಿ ಅಂಶಗಳು ಆಸಕ್ತಿಯ ಆಲೋಚನೆಯನ್ನು ಸೃಷ್ಟಿ ಮಾಡುತ್ತದೆ. ಭಾರತದಲ್ಲಿ 350 ದಶ ಲಕ್ಷ ಜನ ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಸಂಖ್ಯೆ ಅಮೆರಿಕಾದ ಒಟ್ಟು ಸಂಖ್ಯೆಗಿಂತ ಹೆಚ್ಚಿದೆ ಎಂದು ಅವರು ವಿವರಿಸಿದರು.

ನೀವು ಸಂಪತ್ತನ್ನು ಗಳಿಸಲು ಪ್ರಾರಂಭಿಸಿದರೆ, ಉತ್ತಮ ಪೌಷ್ಠಿಕಾಂಶ ಮತ್ತು ಗುಣಮಟ್ಟದ ಆಹಾರಕ್ಕೆ ಬೇಡಿಕೆ ಇಡುತ್ತೀರಿ. ಇದರಿಂದ ಜಾಗತಿಕವಾಗಿ ಆಹಾರೋತ್ಪಾದನೆಗಳ ಮೇಲೆ ಬೇಡಿಕೆ ಇಡುತ್ತದೆ. ಹೆಚ್ಚಾದ ಬೇಡಿಕೆ, ಬೆಲೆ ಏರಿಕೆಗೆ ಧಾರಾಳ ಸಹಾಯ ಮಾಡುತ್ತದೆ ಎಂದು ಹೇಳಿ ಜಾಗತಿಕ ಹಣದುಬ್ಬರಕ್ಕೆ ಭಾರತದ ಪಾಲು ಎಷ್ಟಿದೆ ಎಂಬುದನ್ನು ನಿರೂಪಿಸಲು ಪ್ರಯತ್ನಪಟ್ಟರು.

ಇದೇ ವೇಳೆ ಅವರು ಹವಾಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಉಲ್ಲೇಖಿಸಿ, ಹೆಚ್ಚಿನ ಆಹಾರೋತ್ಪಾದಕ ಕೃಷಿಯನ್ನು ಮಾಡುವ ರೈತರು ಬರಗಾಲದಿಂದಾಗಿ ಬಳಲುತ್ತಿದ್ದಾರೆ. ಇದರಿಂದಲೂ ಆಹಾರದ ಉತ್ಪಾದನೆಯಲ್ಲಿ ಕೊರತೆ ಕಾಣಿಸುತ್ತದೆ ಎಂದರು.
ಮತ್ತಷ್ಟು
ನೇಪಾಳ ಸರಕಾರ ರಚನೆಯಲ್ಲಿ ಯೆಚೂರಿಗೆ ಪಾತ್ರ
ಚೀನಾದಿಂದ ಗುಪ್ತ ಪರಮಾಣು ಜಲಂತಾರ್ಗಾಮಿ ನೆಲೆ
ಕ್ಲಿಂಟನನ್ ಹೇಳಿಕೆ ವಿರುದ್ದ ಇರಾನ್ ವಿ. ಸಂಗೆ ದೂರು
ಶಾಶ್ವತ ಪರಿಹಾರ ಬೇಕು: ರೈಸ್
ಮಾನ್ಮಾರ್ ವಿರುದ್ಧ ಅಮೆರಿಕದ ದಿಗ್ಬಂಧನ ಮುಂದುವರಿಕೆ
ಭಾರತದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಸೌಕರ್ಯ ಅಡ್ಡಿ: ಅಮೆರಿಕ