ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಾಜ್ ಕಾರಿಡಾರ್:ಸುಪ್ರೀಂಕೋರ್ಟ್ ನಕಾರ
WD
ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ತಾಜ್ ಕಾರಿಡಾರ್ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ ರಾಜ್ಯದ ರಾಜ್ಯಪಾಲರಿಗೆ ಆದೇಶ ನೀಡಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸುವ ಮೂಲಕ ಮಾಯಾವತಿಗೆ ತಾತ್ಕಾಲಿಕ ವಿಮೋಚನೆ ಸಿಕ್ಕಿದೆ.

ಮಾಯಾವತಿ ವಿರುದ್ಧ ಕ್ರಮಕ್ಕೆ ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದರು. ವಕೀಲ ಅಶೋಕ್ ಅಗರವಾಲ್ ರಾಜ್ಯಪಾಲರ ಕ್ರಮವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ನ್ಯಾಯಮೂರ್ತಿ ಎಸ್.ಬಿ. ಸಿನ್ಹಾ ನೇತೃತ್ವದ ಪೀಠ ಅವರ ಕೋರಿಕೆಯನ್ನು ನಿರಾಕರಿಸಿತು.

ಪ್ರಸಕ್ತ ಐತಿಹಾಸಿಕ ಸ್ಮಾರಕಕ್ಕೆ ಸಂಬಂಧಿಸಿದ ಪರಿಸರ ವಿಷಯವನ್ನು ವಿಚಾರಣೆ ಮಾಡುತ್ತಿದ್ದ ಪೀಠವು ಅಗರವಾಲ್ ಅರ್ಜಿಯಲ್ಲಿನ ವಿಷಯ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತು.
ಮತ್ತಷ್ಟು
ಅಣು ಒಪ್ಪಂದ: ಕಾಂಗ್ರೆಸ್. ಎಡಪಕ್ಷಗಳ ಇನ್ನೊಂದು ಸಭೆ
ಚುನಾವಣೆ ಕಹಳೆ ಮೊಳಗಿಸಿದ ಮಾಯಾವತಿ
ದಾರಾ ಸಿಂಗ್‌ ಜಾಮೀನಿಗೆ ನಕಾರ
ಪರಮಾಣು ಬಿಕ್ಕಟ್ಟು: ಅ.22ರಂದು ಮರುಚರ್ಚೆ
ನಶಿಸುತ್ತಿರುವ ಪ್ರಾಚೀನ ಕಲಾಕೃತಿಗಳು
ಕರ್ನಾಟಕದ ಪರಿಸ್ಥಿತಿ ಚರ್ಚೆಗೆ ಕಾಂಗ್ರೆಸ್ ಸಭೆ